*ಎಸ್ ಎಸ್ ಎಫ್ ಪೆರಿಯಪಾದೆ ಶಾಖಾ ವತಿಯಿಂದ ರಜಬ್ ತಿಂಗಳ ಮಹತ್ವ ,ಮೆಹಫಿಲೇ ತಯಿಬ ದ್ಸಿಕ್ರ್ ಮಜ್ಲಿಸ್ ಹಾಗೂ ಸಹಾಯಧನ ವಿತರಣೆ*
_ಎಸ್ ಎಸ್ ಎಫ್ ಪೆರಿಯಪಾದೆ ಶಾಖಾ ವತಿಯಿಂದ ರಜಬ್ ತಿಂಗಳ ಮಹತ್ವ ಮತ್ತು ಮೆಹಫಿಲೇ ತಯಿಬ ದ್ಸಿಕ್ರ್ ಮಜ್ಲಿಸ್ ಇತ್ತೀಚೆಗೆ ಪೆರಿಯಪಾದೆಯ ಅಕ್ರಂರವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾಧ್ಯಕ್ಷರಾದ ಹಾರಿಸ್ ಪೆರಿಯಪಾದೆ ವಹಿಸಿದರು. ಪ್ರಧಾನ ಕಾರ್ಯದರ್ಶಿ ಝಮೀರ್ ರವರು ಸ್ವಾಗತಿಸಿದರು. ಕೆ ಸಿ ಎಫ್ ಬತ್ತಾ ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಲತೀಫಿ ಉಸ್ತಾದ್ ದುವಾ ಹಾಗೂ ಮೆಹಫಿಲೇ ತಯಿಬ ದ್ಸಿಕ್ರ್ ಮಜ್ಲಿಸಿಗೆ ನೇತ್ರತ್ವ ನೀಡಿದರು. ಎಸ್ ಎಸ್ ಎಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ರಶೀದ್ ವಗ್ಗ ರಜಬ್ ತಿಂಗಳ ಮಹತ್ವ ಎಂಬ ವಿಷಯದಲ್ಲಿ ತರಗತಿ ನಡೆಸಿದರು. ಯುದ್ಧ ಹರಾಮಾದ ನಾಲ್ಕು ತಿಂಗಳಿನಲ್ಲಿ ರಜಬ್ ಕೂಡಾ ಒಂದಾಗಿದ್ದು ಮುಸ್ಲಿಮನ ಮೂಲಭೂತ ಕರ್ಮಗಳಲ್ಲೊಂದಾದ ನಮಾಝ್ ಕಡ್ಡಾಯಗೊಳಿಸಿದ ತಿಂಗಳು ಇದಾಗಿದೆ.ಪ್ರತ್ಯೇಕವಾಗಿ ರಜಬ್ ತಿಂಗಳ 27 ರ ಉಪವಾಸಕ್ಕೆ ವಿಶೇಷ ಸುನ್ನತ್ತಿದ್ದು ಕಾರ್ಯಕರ್ತರೆಲ್ಲರೂ ವ್ರತಾನುಷ್ಠಾನ ಮಾಡಿ ಅಲ್ಲಾಹನ ಪ್ರೀತಿ ಪಾತ್ರಕ್ಕೆ ಒಳಗಾಗಬೇಕೆಂದು ಕರೆ ನೀಡಿದರು. ಕೆ.ಸಿ.ಎಫ್ ಬತ್ತಾ ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಲತೀಫಿ ಉಸ್ತಾದರು ಕೆ.ಸಿ.ಎಫ್ ಸಂಘಟನೆಯ ಬಗ್ಗೆ ವಿವರಿಸಿದರು. ಕೆ.ಸಿ ಎಫ್. ಬಡಜನರ ಪಾಲಿಗೆ ಆಶಾಕಿರಣವಾಗಿದೆ. ಹಿಂದಿನ ಕಾಲದಲ್ಲಿ ನೂತನವಾದಿಗಳ ಪೊಳ್ಳು ವಾದಕ್ಕೆ ಬಲಿಯಾಗುತ್ತಿದ್ದ ಪ್ರವಾಸಿ ಕನ್ನಡಿಗರಿಗೆ ಸುನ್ನತ್ ಜಮಾಅತಿನ ಆಶಯ ಆದರ್ಶಗಳನ್ನು ಮೈಗೂಡಿಸಿ ಜೀವಿಸಲು ಕೆ ಸಿ ಎಫ್ ಸಹಕಾರಿಯಾಗಿದೆ.ಪ್ರತೀ ವಾರದಲ್ಲೂ ಧಾರ್ಮಿಕ ತರಗತಿ ಅಸ್ಸುಫಾ ತರಗತಿ, ಸ್ವಲಾತ್ ಮಜ್ಲಿಸ್ ಹೀಗೆ ಹಲವಾರು ಕಾರ್ಯಕ್ರಮಗಳು ನಡೆಸುವಲ್ಲಿ ಯಶಸ್ವಿಯಾಗಿದೆ. ಕೆ ಸಿ ಎಫ್ ನನ್ನ ಸಂಘಟನೆ ಎಂದು ಬೇಕಲ್ ಉಸ್ತಾದ್ ಹೇಳಿದ್ದನ್ನು ಅಭಿಮಾನದಿಂದಲೇ ಸ್ಮರಿಸಿದರು. ಇದೇ ಸಂಧರ್ಭದಲ್ಲಿ ಅನಾರೋಗ್ಯದಿಂದಿರುವ ಎಸ್ ಎಸ್ ಎಫ್ ಪೆರಿಯಪಾದೆ ಶಾಖೆಯ ಸದಸ್ಯ ಶಂಸೀರ್ ಗಣಪಳಿಕೆ ಇವರಿಗೆ ಕೆ.ಸಿ.ಎಫ್ ಬತ್ತಾ ಸೆಕ್ಟರಿನ *ವಿ ಕೇರ್*ವತಿಯಿಂದ *25000 ರೂಪಾಯಿ ಸಹಾಯಧನ* ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ, ಎಸ್ ವೈ ಎಸ್ ಪಾಣೆಮಂಗಳೂರು ಸೆಂಟರಿನ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಕೊಳಕೆ, ಬಂಟ್ವಾಳ ಡಿವಿಷನ್ ಸದಸ್ಯರಾದ ಕೆರೀಂ ಬೋಳಂತೂರು, ಬಂಟ್ವಾಳ ಸೆಕ್ಟರ್ ಅಧ್ಯಕ್ಷರಾದ ಮನ್ಸೂರ್ ವಗ್ಗ ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಏರ್ಪಡಿಸಲಾಯಿತು_
Comments
Post a Comment