Skip to main content

ಕೊಳಕೇರಿ ಮಖಾಂ ಉರೂಸ್ 2017 ಏಪ್ರಿಲ್ 7 - 11... : ✍🏼 *ಶಿಹಾಬ್ ಅಲ್ ವಫಾ ಕೊಳಕೇರಿ*


ಕೊಳಕೇರಿ ಮಖಾಂ ಉರೂಸ್ 2017 ಏಪ್ರಿಲ್ 7 - 11

ಹಲವಾರು ಕಷ್ಫ್ ಕರಾಮಾತುಗಳಿಂದ ಬಡವರ ನಿರ್ಗತಿಕರ ಅಸಾಯಕರ ಪಾಲಿಗೆ ಜೀವಧಾನಿಯಾಗಿ, ಸಮಸ್ಯೆಗಳ  ಸುಳಿಯಲ್ಲಿ ಬೆಂದು ಬೇಯುತ್ತಿರುವವರಿಗೆ ಆಶಾಕಿರಣವಾಗಿ, ಮನಸ್ಸಿನಾಳದ ಮನಶ್ಚಿಂತೆಯಿಂದ ಮಾನಸಿಕವಾಗಿ, ಮನ ನೊಂದವರಿಗೆ ಮಧುರ ಮನೋಹರ ಮಾರ್ಗದರ್ಶಕರಾಗಿ ತನ್ನ ಕಷ್ಫ್ ಕರಾಮಾತುಗಳಿಂದ ಪರಿಹಾರವನ್ನೊದಗಿಸಿ ಜನಮನದಲ್ಲಿ ಅರಾಜ್ಯಮಾನರಾದ ಕೊಳಕೇರಿಯಲ್ಲಿ ಅಂತ್ಯವಿಶ್ರಮಗೊಳ್ಳುತ್ತಿರುವ ಔಲಿಯಾಗಳ ಹೆಸರಿನಲ್ಲಿ ನಡೆಸಿಬರುತ್ತಿರುವ ಉರೂಸ್ ನೇರ್ಚೆಯೂ ಇದೇ ಬರುವ *ಏಪ್ರಿಲ್ 7 ರಿಂದ 11* ರ ವರೆಗೆ ಅತೀ ವಿಜೃಂಭಣೆ  ಸಡಗರ ಸಂಭ್ರಮದಲ್ಲಿ ನಡೆಯುವಾಗ ಈ ಪುಣ್ಯ ಕಾರ್ಯಕ್ರಮದಲ್ಲಿ ನೇತ್ರಸಾಕ್ಷಿಗಳಾಗಲೂ ತಮಗಿದು ಹಾರ್ದವ ಹ್ರದಯಂಗಮಾ ಸುಸ್ವಾಗತ.

ಕಾರ್ಯಕ್ರಮದ  ಮೊದಲನೆಯ ದಿವಸವಾದ *ಏಪ್ರಿಲ್ 7ರಂದು* ಜುಮುಅ ನಮಾಝಿನ ನಂತರ ಕೊಳಕೇರಿ ಖತೀಬರಾದ *ಮುಸ್ತಾಫಾ ಸಖಾಫಿ* ಉಸ್ತಾದರ ನೇತೃತ್ವದಲ್ಲಿ ಪ್ರಾರ್ಥನೆಯ ಬಳಿಕ ಕೊಳಕೇರಿ ಸುನ್ನಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ *ಟಿ ಹೆಚ್ ಮೊಯಿದೀನ್ ಕುಟ್ಟಿ ಹಾಜಿಯವರು* ಧ್ವಜಾರೋಹಣ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ

ಕಾರ್ಯಕ್ರಮದ ಮೊದಲನೆಯ ದಿವಾಸವಾದ *ಏಪ್ರಿಲ್ 7 ಶುಕ್ರವಾರ ರಾತ್ರಿ 8:30ಕ್ಕೆ* ಸರಿಯಾಗಿ  ಅಹ್ಲ್ ಬೈತಿನ ಧನ್ಯ ಕುಟುಂಬ ಸರದಿಯಲ್ಲಿ ಉದಯಿಸಿ ಬಂದ ಆಥ್ಯಾತ್ಮಿಕ ನೇತಾರ *ಅಸ್ಸಯ್ಯಿದ್ ಜಅಫರ್ ಸ್ವಾದಿಖ್ ತಂಗಳ್ ಕುಂಬೋಳ್* ಇವರ ಮಹನೀಯ ನೇತೃತ್ವದಲ್ಲಿ ಆತ್ಮೀಯ ಜಲಾಲಿಯ್ಯ ರಾತೀಬ್ ನಡೆಯಲಿದೆ.

ಕಾರ್ಯಕ್ರಮದ ಎರಡನೇ ದಿವಾಸವಾದ *ಏಪ್ರಿಲ್ 8 ರಂದು* ಧಾರ್ಮಿಕ ಮತ ಪ್ರವಚನ.
ಉಜ್ವಲ ಮಾತುಗಳಿಂದ ಉಜ್ವಲಿಸಿ ಉದಾತ ವಿಚರ್ಣ ಸಂಕೀರ್ಣಗಳನ್ನು ಉದಾಹರಣೆಯ ಮೂಲಕ ಉಗ್ಗೂಸಿಸಿ ಪಾಂಡಿತ್ಯವನ್ನು ಉಸಿರನ್ನಾಗಿಸಿ ಉಪಯೋಗವಾಗುವ ಉತ್ತಮ ಉಪದೇಶದಿಂದ ನವ ಬಾಷಣಕ್ಕೆ ಉದಯಕೊಟ್ಟ  ವಿದ್ವಾಂಸ *ಝುಬೈರ್ ಅಲ್ ಅಜ್ಹರಿ ಕೊಲ್ಲಂ* ಮುಖ್ಯ ಪ್ರಬಾಷಣಗಯ್ಯಲಿದ್ದಾರೆ

ಕಾರ್ಯಕ್ರಮದ 3 ನೇ ದಿವಾಸವಾದ *ಏಪ್ರಿಲ್ 9 ರಂದು* ರಾತ್ರಿ 8:30 ಕ್ಕೆ ಸರಿಯಾಗಿ ಖತಂ ದುಆ ಹಾಗೂ ಬದ್ರಿಯ ಮಜ್ಲಿಸ್.
ಸಯ್ಯಿದ್ ಕುಟುಂಬದ ರೋಮಾಂಚಕ ನಾಯಕರುಗಳಾಗಿ ಜಗತ್ಜಾಯಿರ ಗೊಂಡ *ಅಲ್ ಹಾಫಿಳ್ ಹದ್ದಾದ್ ತಂಗಳ್ ಕಾಸರಗೋಡ್* ಇವರ ಮಹನೀಯ ನೇತೃತ್ವದಲ್ಲಿ ನಡೆಯಲಿದೆ

ಕಾರ್ಯಕ್ರಮದ *4ನೇ ದಿವಾಸವಾದ ಸೋಮವಾರ* ಬೆಳಿಗ್ಗೆ 10 ಗಂಟೆಗೆ. ಆತ್ಮೀಯ ದುಆ ಮಜ್ಲಿಸ್.
ಅಹ್ಲುಸುನ್ನ ಆತ್ಮೀಯ ನೇತೃತ್ವ ಹಾಗೂ ಮರ್ಹೂಮ್ ತಾಜುಲ್ ಉಲಮಾ(ಖ.ಸಿ) ರವರ ಪುತ್ರ. *ಅಸ್ಸಯ್ಯಿದ್ ಫಝಲ್ ಕೋಯಮ್ಮ  ಕೂರ ತಂಗಳ್* ನೇತೃತ್ವ ವಹಿಸಲಿದ್ದಾರೆ

*ಹಾಗೂ ಬುರ್ದಾ ಮಜ್ಲಿಸ್.*
ಇಂಪಾದ ಶಬ್ದಗಳಿಂದ ಸುನ್ನಿ ಮಕ್ಕಳ ಮನಸೆಳೆದ ಯುವ ಪಂಡಿತ ಬಶೀರ್ ಮಿಸ್ಬಾಹಿ ಟಿ ಯು, ಖಮರುದ್ದೀನ್ ಮುಸ್ಲಿಯಾರ್, ಫೈಝಲ್ ಮುಸ್ಲಿಯಾರ್ ಎ ಹೆಚ್ ರಹೀಮ್, ಫಾರೂಖ್, ಮುಂತಾದವರ ನೇತೃತ್ವದಲ್ಲಿ ಆತ್ಮೀಯ ಬುರ್ದಾ ಆಲಾಪನ ನಡಯುವಾಗ ತಮಗಿದು ಹಾರ್ದವ ಹ್ರದಯಾಂಗಮಾ ಸುಸ್ವಾಗತ.

*ಸೋಮವಾರ ಮದ್ಯಾಹ್ನ 2 ಗಂಟೆಗೆ* ಪ್ರಮುಖ ಸಾದಾತುಗಳು. ಉಲಮಾಗಳೂ ಧಾರ್ಮಿಕ ಮುಖಂಡರು, ರಾಜಕೀಯ ನಾಯಕರು ಬಾಗವಹಿಸಲಿದ್ದಾರೆ.
ಕೊಡಗು ಜಿಲ್ಲಾ ನಾಯಿಬ್ ಖಾಝಿ *ಮಹಮೂದ್ ಮುಸ್ಲಿಯಾರ್ ಎಡಪ್ಪಲಂ* ರವರು ದುಆಗೆ ನೇತೃತ್ವ ವಹಿಸಲಿದ್ದಾರೆ.

ಕ್ಷಿಪಣಿಯಂತೆ ಹಾರಿ ಬರುವ ಮಾತಿನ ಸರ ಮಾಲೆಯ ಮೂಲಕ ಮಹತ್ತರವಾಗಿ ಉಚ್ಚರಿಸಲ್ಪಡುವ ಧ್ವನಿ ಶಬ್ದಗಳಿಂದ ಮಹತ್ವ ತುಂಬಿದ ವಿಷಯಗಳೊಂದಿಗೆ ಮಹನೀಯ ಶೈಲಿಯ ಮೂಲಕ ಮಹಲ್ ಪರಿವರ್ತನೆಯ ಅಲೆಗಳನ್ನೇ ಎಸೆದ ಕನ್ನಡ ಪ್ರಭಾಷಣ ಪೀಠದ ದಿವ್ಯ ಸುಲ್ತಾನ್ ಹಾಗೂ ಯುವ ಲೇಖಕ *ಕೆ ಎಂ ಅಬೂಬಕ್ಕರ್ ಸಿದ್ದೀಕ್ ಮುಂಟುಗೋಳಿ ಮುಖ್ಯ ಪ್ರಬಾಷಣ ಗಯ್ಯಲಿದ್ದಾರೆ.*

*ಏಪ್ರಿಲ್ 10 ರಂದು ರಾತ್ರಿ 8:30ಕ್ಕೆ* ಸರಿಯಾಗಿ ಧಾರ್ಮಿಕ ಅತ್ಯುಜ್ವಲ ಮತ ಪ್ರವಚನ.
ಜನ ಮನಸ್ಸು ಚೆಂಜಲಗೊಳ್ಳದ ರೀತಿಯ ಅಚಂಜಲ ಶೈಲಿಯ ಪ್ರಚಂಡ ಪ್ರಭಾಷಣದಲ್ಲಿ  ಪ್ರಕಾಶ ಪ್ರಕೀರ್ಣ ಪ್ರಭಯನ್ನೇ ಹರಡಿಸಿದ ಪ್ರೌಡೋಜ್ವಲ ಪ್ರಖ್ಯಾತ ಪ್ರಗಲ್ಬ ವಾಗ್ಮಿ *ಡಾಕ್ಟರ್ ಅಬ್ದುಸ್ಸಲಾಂ ಮುಸ್ಲಿಯಾರ್ ದೇವರ್ಶೋಲ* ಮುಖ್ಯ ಪ್ರಬಾಷಣಗಯ್ಯಲಿದ್ದಾರೆ.

ಕಾರ್ಯಕ್ರಮದ ಕೊನೆಯ ದಿವಾಸವಾದ *ಏಪ್ರಿಲ್ 11 ರಂದು* ರಾತ್ರಿ 8 ಗಂಟೆಗೆ ಸಮಾರೋಪ ಸಮಾರಂಭ.
*ಅಸ್ಸಯ್ಯಿದ್ ಖಾತಿಮ್ ತಂಗಳ್*
ಎರುಮಾಡ್ ರವರು ದುಆ ನಡೆಸಲಿದ್ದಾರೆ. 
  ಕೊಳಕೇರಿ ಮುದರ್ರಿಸ್ ಹಾಗೂ ಎಸ್ ವೈ ಎಸ್ ಕೊಡಗು ಜಿಲ್ಲಾ ಕಾರ್ಯದರ್ಶಿ *ಮುಸ್ತಫಾ ಸಖಾಫಿ* ಮುಖ್ಯ ಪ್ರಬಾಷಣ ಗಯ್ಯಲಿದ್ದಾರೆ.



✍🏼 *ಶಿಹಾಬ್ ಅಲ್ ವಫಾ ಕೊಳಕೇರಿ*

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.