ಎಸ್ ವೈ ಎಸ್ ಹರೇಕಳ ಸೆಂಟರ್ ವತಿಯಿಂದ ಪ್ರಾಯೋಗಿಕ ಮಯ್ಯಿತ್ ಪರಿಪಾಲನಾ ತರಬೇತಿ ಹಾಗು ಅಕ್ಷರ ಸಂತ ಹರೇಕಳ ಹಾಜಬ್ಬರವರಿಗೆ ಸನ್ಮಾನ ಸಮಾರಂಭ ಎಸ್ ವೈ ಎಸ್ ಹರೇಕಳ ಸೆಂಟರ್ ಅಧ್ಯಕ್ಷರಾದ ಹೈದರಾಲಿ ಸಖಾಫಿ ಇನೋಳಿಯವರ ಅಧ್ಯಕ್ಷತೆಯಲ್ಲಿ ಆರ್ ಜೆ ಎಂ ವಠಾರ ಫರೀದ್ ನಗರದಲ್ಲಿ ನಡೆಯಿತು.
ಅಲ್ತಾಫ್ ಮದನಿ ಉಸ್ತಾದ್ ಅಸೈಗೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಸಿದ್ದೀಕ್ ಮದನಿ ಮೆದು LCD ಮೂಲಕ ಪ್ರಾಯೋಗಿಕ ಮಯ್ಯಿತ್ ಪರಿಪಾಲನಾ ತರಗತಿ ನಡೆಸಿದರು. ಕಾರ್ಯಕ್ರಮದಲ್ಲಿ ರಾಜ್ಯದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ಪಡೆದ ಅಕ್ಷರ ಸಂತ ಹರೇಕಳ ಹಾಜಬ್ಬರವರಿಗೆ ಎಸ್ ವೈ ಎಸ್ ಹರೇಕಳ ಸೆಂಟರ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಆರ್ ಜೆ ಎಂ ಫರೀದ್ ನಗರದ ಅಧ್ಯಕ್ಷರಾದ ಬದ್ರುದ್ದೀನ್, ಎಸ್ ಎಂ ಎ ಕೋಣಾಜೆ ರೀಜನಲ್ ಅಧ್ಯಕ್ಷರಾದ ರಝ್ಝಾಕ್ ಹಾಜಿ ಮಲಾರ್, ಕೆ ಎಂ ಜೆ ಸಿ ದೇರಳಕಟ್ಟೆ ವಲಯ ಅಧ್ಯಕ್ಷರಾದ ಖಾಲಿದ್ ಹಾಜಿ ನ್ಯೂಪಡ್ಪು ಹಾಗು ಸೆಂಟರ್ ವ್ಯಾಪ್ತಿಯ ಬ್ರಾಂಚ್ ಸದಸ್ಯರು, ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಸದಸ್ಯರು, ಊರವರು, ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫರೀದ್ ನಗರ ಸ್ವಾಗತಿಸಿ, ಸೆಂಟರ್ ಇಸಾಬಾ ಕಾರ್ಯದರ್ಶಿ ಅಬ್ದುಲ್ ಕಾದರ್ ಬೈತಾರ್ ಧನ್ಯವಾದಗೈದರು







