*ಪ್ರೇಮಿಗಳ ದಿನ, ಇಂದಿನ ಖುತುಬಾ ಮತ್ತು ಕೆ.ಸಿ.ಎಫ್ ಡೇ*
ಇಂದು ಫೆಬ್ರವರಿ 14 ಪ್ರೇಮಿಗಳ ದಿನ ಅಥವಾ Valentine's day ಎಂದು ಅಮೇರಿಕಾ ಸೇರಿ ಕೆಲವು ಪಾಶ್ಚ್ಯಾತ್ಯ ಮೈಂಡ್ ಇರುವ ವ್ಯಕ್ತಿಗಳು ಆಚರಣೆ ಮಾಡುವ ದಿನ.
ಆದರೆ ಯುಎಇ ಯಲ್ಲಿರುವ ಆರು ಸಾವಿರ ದಷ್ಟು ಮಸೀದಿಗಳ ಖತೀಬರು ಇಂದು ಓದಿದ ಜುಮಾ ಖುತುಬಾ ನಿಜವಾದ ಪ್ರೇಮ ಮತ್ತು ಪ್ರಿಯತಮನ ಮಹತ್ವ, ಸ್ವಭಾವ,ಸವಿಶೇಷತೆಗಳನ್ನು ಎಳೆ ಎಳೆಯಾಗಿ ವಿವರಿಸಿತು.
ಅದೇನೆಂದರೆ, ಲೋಕಾನುಗ್ರಹಿ ಸಯ್ಯಿದುನಾ ರಸೂಲುಲ್ಲಾಹಿ ﷺ ರವರ ಕುರಿತ ಮದ್ಹುರ್ರಸೂಲ್ ಪ್ರಭಾಷಣವಾಗಿತ್ತು ಇಂದಿನ ಖುತುಬಾ ದ Matter.
ಪ್ರವಾದಿ ಪ್ರೇಮಿಗಳಿಗಿಂದು ರಬೀಉಲ್ ಅವ್ವಲ್ ನ ಅನುಭವ.
ಅಂದ ಹಾಗೆ ಇಂದು ನಮ್ಮ ಹೆಮ್ಮೆಯ ಸಂಘಟನೆಯಾದ KCF ನ ಸ್ಥಾಪಕ ದಿನ. ಯಶಸ್ವೀ ತನ್ನ ಏಳು ವರ್ಷ ಪೂರ್ತಿಮಾಡಿ ಎಂಟನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ದಿನ.ವಿದೇಶದಲ್ಲಿರುವ ಕರ್ನಾಟಕದ ಸುನ್ನಿ ಗಳಿಗಿಂದು ಪೆರ್ನಾಲ್ ನ ಸಡಗರ ಅದರೊಟ್ಟಿಗೆ ಗಲ್ಫ್ ಇಶಾರ ದ ಚಂದಾ ಅಭಿಯಾನ ಕೂಡ......
ಯಾವುದೇ ಸಂಭ್ರಮದಲ್ಲೂ ಮೌಲಿದ್ ಓದುವುದು ಸುನ್ನಿಗಳ ರೂಢಿ.
ಪ್ರವಾದಿ ಪ್ರೇಮಿಗಳ ನೈಜ್ಯ ಸಂಘಟನೆಯಾದ KCF ನ ಹುಟ್ಟು ದಿನವಾದ ಇಂದು (ಫೆ.14) ಇಲ್ಲಿನ ಎಲ್ಲಾ ಮಸೀದಿಗಳು ಒಟ್ಟಾಗಿ ಮೌಲಿದ್ ಪಾರಾಯಣ ಮಾಡಿದ ಅನುಭವ ಆದದ್ದಂತೂ ನಿಜ !
📱 0582800640
✍ *Musthafa Master UAE*
*======================*
