ಕುತ್ತಾರು: ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ “ದೇಶ ಉಳಿಸಿ, ದ್ವೇಷ ಅಳಿಸಿ” ಎಂಬ ಘೋಷ ವಾಕ್ಯದೊಂದಿಗೆ ಅಝಾದಿ ರ್ಯಾಲಿಯು ಶನಿವಾರ ಮದನಿ ನಗರದಿಂದ ದೇರಳಕಟ್ಟೆ ಸಿ.ಟಿ ಗ್ರೌಂಡ್ ತನಕ ನಡೆಯಿತು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ ಅಧ್ಯಕ್ಷತೆಯಲ್ಲಿ ನಡೆದ ರ್ಯಾಲಿಗೆ ಉಮರಾ ನೇತಾರ ಉಂಞ ಚಾಲನೆ ನೀಡಿದರು.
ಪ್ರತಿಯೊಂದು ದಿನವೂ ಐದು ಹೊತ್ತುಗಳಲ್ಲಾಗಿ ಹದಿನೇಳು ರಕಅತ್ ಗಳಲ್ಲಾಗಿ ಮೂವತ್ತನಾಲ್ಕು ಬಾರಿ ತನ್ನ ಶರೀರದ ಪ್ರಧಾನ ಭಾಗವಾದ ಮುಖದ ಅತ್ಯಂತ ಶ್ರೇಷ್ಠ ಅಂಗವಾದ ಹಣೆಯನ್ನು ಈ ಮಣ್ಣಿನಲ್ಲಿ ಜಗರಕ್ಷಕನಾದ ಅಲ್ಲಾಹನಿಗೆ ತಲೆಬಾಗಿ ಇಡುವವನಾಗಿದ್ದಾನೆ ನೈಜ ಮುಸಲ್ಮಾನ್.ಇಂತಹ ಮುಸಲ್ಮಾನನಿಗೆ ಈ ಭಾರತದ ಮಣ್ಣನ್ನು ಹೇಗೆ ಪ್ರೀತಿಸಬೇಕು.ಹೇಗೆ ಗೌರವಿಸಬೇಕು ಎಂಬುದು ಗೊತ್ತು.ಈ ದೇಶದ ರಕ್ಷಣೆ ಹೇಗೆ ಮಾಡಬೇಕೆಂದು ಚೆನ್ನಾಗಿ ಗೊತ್ತು.ಈ ದೇಶಪ್ರೇಮದ ಪಾಠವನ್ನು ನಾವು ಯಾರಿಂದಲೂ ಕಲಿಯಬೇಕಾಗಿಲ್ಲ.
*ಕೆ.ಎಂ.ಅಬೂಬಕರ್ ಸಿದ್ದೀಖ್*
Comments
Post a Comment