SSF ಕೆ ಸಿ ನಗರ ಶಾಖೆ (ತಲಪಾಡಿ ಸೆಕ್ಟರ್) ವತಿಯಿಂದ ದರ್ಸ್ ವಿದ್ಯಾರ್ಥಿಗಳಿಗೆ ವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಸ್ನೇಹ ಸಂಗಮ
SSF ಕೆ ಸಿ ನಗರ ಶಾಖೆ (ತಲಪಾಡಿ ಸೆಕ್ಟರ್)
ವತಿಯಿಂದ ದರ್ಸ್ ವಿದ್ಯಾರ್ಥಿಗಳಿಗೆ ವಸ್ತ್ರ ವಿತರಣಾ ಕಾರ್ಯಕ್ರಮ ಹಾಗೂ ಸ್ನೇಹ ಸಂಗಮ ಇತ್ತೀಚೆಗೆ ಅಬ್ದುಲ್ ನಝಿರ್ ಅಧ್ಯಕ್ಷತೆಯಲ್ಲಿ ಮುಹಮ್ಮದ್ ಹನೀಫ್ ಸಖಾಫಿಯವರ ದುಆ ದೊಂದಿಗೆ ನಡೆಯಿತು ಶಾಖೆಯ ಪ್ರ.ಕಾರ್ಯದರ್ಶಿಯಾದ ಮುಹಮ್ಮದ್ ಮುಸ್ತಫ ಸ್ವಾಗತಿಸಿದರು. ಅಲ್ ಹುದಾ ಜುಮಾ ಮಸ್ಜಿದ್ ಕೆ ಸಿ ನಗರ ಇದರ ಖತೀಬರಾದ ಹನೀಫ್ ಸಖಾಫಿಯವರು ಕಾರ್ಯಕ್ರಮನ್ನು ಉದ್ಘಾಟಿಸಿ ಭಾಷಣ ಮಾಡಿದರು. ನಂತರ ಸ್ಥಳಿಯ ಮದ್ರಸಾ ಅಧ್ಯಾಪಕರಾದ ಅಶ್ರಫ್ ಉಸ್ತಾದರು ಆಶಂಶಾ ಭಾಷಣ ಮಾಡಿದರು, ಅಲ್ ಹುದಾ ಜುಮಾ ಮಸ್ಜಿದ್ ಕೆ ಸಿ ನಗರ ಇದರ ಪ್ರ.ಕಾರ್ಯದರ್ಶಿ ಇಕ್ಬಾಲ್ ಮಾತನಾಡಿದರು. ನಂತರ ದರ್ಸ್ ನ 16 ವಿದ್ಯಾರ್ಥಿಗಳಿಗೆ ವಸ್ತ್ರ ವಿತರಿಸಲಾಯಿತು
ಈ ಕಾರ್ಯಕ್ರಮದಲ್ಲಿ ಅಲ್ ಹುದಾ ಜುಮಾ ಮಸ್ಜಿದ್ ಕೆ ಸಿ ನಗರ ಇದರ ಮಾಜಿ ಅಧ್ಯಕ್ಷರಾದ ಹಸನಬ್ಬ ಹಾಜಿ ಹಾಗೂ ಮೂಸಾ ಹಾಜಿ, ಎಸ್ ಎಸ್ ಎಫ್ ತಲಪಾಡಿ ಸೆಕ್ಟರ್ ಅಧ್ಯಕ್ಷರಾದ ಅಬ್ದುಲ್ ರಹೀಂ ಝಹುರಿ, ಕೆ ಸಿ ಎಫ್ ಕಾರ್ಯಕರ್ತನೂ ಶಾಖೆಯ ಮಾಜಿ ಕಾರ್ಯದರ್ಶಿಯೂ ಆದ ಸಿರಾಜುದ್ದೀನ್, ಶಾಖೆಯ ಮಾಜಿ ಕಾರ್ಯದರ್ಶಿಯಾದ ಸನಾವುಲ್ಲ, ಎಸ್ ವೈ ಎಸ್ ಕೆ ಸಿ ನಗರ ಬ್ರಾಂಚ್ ಪ್ರ ಕಾರ್ಯದರ್ಶಿಯಾದ ಅಬ್ಬಾಸ್, ಮುಸ್ತಫ ಪಿಲಿಕೊರ್, ಇಸ್ಮಾಯಿಲ್ ಕೆ ಸಿ ನಗರ, ಶಾಖೆಯ ಉಪಾಧ್ಯಕ್ಷರಾದ ನಾಸಿರ್, ಶಾಖೆಯ ಜೊತೆ ಕಾರ್ಯದರ್ಶಿಯಾದ ಮುಹ್ಸಿನ್, ಶಂಶುದ್ದೀನ್ ಹಾಗೂ ಇನ್ನಿತರ ನಾಯಕರು ಹಾಜರಿದ್ದರು ಕೊನೆಯಲ್ಲಿ ಇತ್ತೀಚಿಗೆ ಮರಣ ಹೊಂದಿದ ಶಾಖೆಯ ಕಾರ್ಯದರ್ಶಿ ಮುಸ್ತಫ ಅವರ ಕುಟುಂಬದಲ್ಲಿ ಮರಣ ಹೊಂದಿದ
ಮಹ್ ಶೊಕ್ ಎಂಬವರ ಹೆಸರಲ್ಲಿ ತಹ್ ಲೀಲ್ ನಡೆಯಿತು, ರಹೀಂ ಝಹುರಿ ಧನ್ಯವಾದ ಹೇಳಿದರು.
Comments
Post a Comment