*ಸಂಘಟನಾ ಕಾರ್ಯಚರಣೆ ಒಂದು ಇಬಾದತ್, ದೀನಿ ಜ್ಞಾನದೊಂದಿಗೆ ಈ ನಾಡಿನ ಒಳಿತಿಗಾಗಿ ಹಾಗೂ ಪಾರತ್ರಿಕ ಮೋಕ್ಷಕ್ಕಾಗಿ ಕಾರ್ಯಚರಿಸಲು ಎಸ್ಸೆಸ್ಸೆಫ್ ಉಚ್ಚಿಲ ಸೆಕ್ಟರ್ ಕಾರ್ಯಕರ್ತರ ತರಗತಿಯಲ್ಲಿ -- ಜಿ.ಎಂ. ಉಸ್ತಾದ್*
*ಕಾಪು:ಆಗಸ್ಟ್ 28;* ಎಸ್ಸೆಸ್ಸೆಫ್ ಉಚ್ಚಿಲ ಸೆಕ್ಟರ್ ವತಿಯಿಂದ ನಡೆಸಲ್ಪಡುವ ಕಾರ್ಯಕರ್ತರ ಮಾಸಿಕ ಅಧ್ಯಯನ ಆಧ್ಯಾತ್ಮಿಕ ತರಗತಿ ನಿನ್ನೆ (ಆಗಸ್ಟ್ 27) ಕಾಪು ಜೇಸಿಐ ಭವನದಲ್ಲಿ ನಡೆಯಿತು.
ದ.ಕ. ಜಲ್ಲಾ ಉಪಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಸೆಕ್ಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಹನೀಫಿ ಸ್ವಾಗತಿಸಿದರು. ಎಸ್ಸೆಸ್ಸೆಫ್ ಇಹ್ಸಾನ್ ಕನ್ವೀನರ್ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ತರಗತಿಯನ್ನು ಉದ್ಘಾಟಿಸಿದರು.
ನಂತರ ಸಂಘಟನಾ ಮೇರು ವ್ಯಕ್ತಿತ್ವ *ಜಿ.ಎಂ. ಉಸ್ತಾದ್* ಕಾರ್ಯಕರ್ತರ ಮನ ಮುಟ್ಟುವ ಶೈಲಿಯಲ್ಲಿ ಸುಮಾರು ಒಂದೂವರೆ ಗಂಟೆಗಳ ಸವಿಸ್ತಾರವಾದ ತರಗತಿ ಮಂಡಿಸುವುದರೊಂದಿಗೆ ಶಾಖಾವಾರು ಮಾಹಿತಿ ವಿನಿಮಯ ನಡೆಸಿದರು.
ಸುನ್ನೀ ಅಧ್ಯಾಪಕರ ಒಕ್ಕೂಟ ಕಾಪು ರೇಂಜ್ ಅಧ್ಯಕ್ಷ ಕೆ.ಪಿ. ಅಬ್ದುರ್ರಝಾಖ್ ಖಾಸಿಮಿ, SYS ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಿಯ್ಯುದ್ದೀನ್ ಹಾಜಿ ಗುಡ್'ವಿಲ್, ಉಚ್ಚಿಲ ಸೆಕ್ಟರ್ ಉಸ್ತುವಾರಿ ಶಾಹುಲ್ ಹಮೀದ್ ನಈಮಿ, ಮುಹಮ್ಮದ್ ಇಕ್ಬಾಲ್ ಮದನಿ ಬೆಳಪು, ಬಶೀರ್ ಹನೀಫಿ ಕೊರಂಟಿಕಟ್ಟೆ, ಶಂಸುದ್ದೀನ್ ಝುಹ್ರಿ ಬೆಳಪು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಮ್ಮನ್ನಗಲಿದ ಕಾರ್ಯಕರ್ತರ ಹೆಸರಿನಲ್ಲಿ ತಹ್'ಲೀಲ್ ಸಮರ್ಪಿಸಲಾಯಿತು.
ಪೊಲಿಪು ಮಸ್ಜಿದ್ ಖತೀಬ್ ಇರ್ಶಾದ್ ಸಅದಿ ಆಶಂಸಾ ಮಾತುಗಳನ್ನಾಡಿದರು. ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಅಹ್ಮದ್ ಶಬೀರ್ ಸಖಾಫಿ ಕಾರ್ಯಕ್ರಮ ನಿರೂಪಿಸಿ, ಸೆಕ್ಟರ್ ಸದಸ್ಯ ಎಂ.ಕೆ. ಇಬ್ರಾಹಿಂ ಮಜೂರು ದನ್ಯವಾದ ಸಲ್ಲಿಸಿದರು.
_ಸಮಯಕ್ಕೆ ಮಹತ್ವ ನೀಡಿರುವುದು ವಿಶೇಷವಾಗಿತ್ತು._
_ತರಗತಿ ಒಟ್ಟು ಸಮಯ: 2:30ಗಂಟೆಗಳು._
🔅 _ಪ್ರಕಟಣೆ:- SSF Ⓜedia 🌀ell_
Comments
Post a Comment