SYS ಕಾವೂರು ಸೆಂಟರ್ ಹಾಗೂ SSF ಕಾವೂರು ಸೆಕ್ಟರ್ ಜಂಟಿ ಆಶ್ರಯದಲ್ಲಿ ಕಾವೂರು ಜಂಕ್ಷನ್ ಬಳಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
SYS ಕಾವೂರು ಸೆಂಟರ್ ಹಾಗೂ SSF ಕಾವೂರು ಸೆಕ್ಟರ್ ಜಂಟಿ ಆಶ್ರಯದಲ್ಲಿ ಕಾವೂರು ಜಂಕ್ಷನ್ ಬಳಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. SYS ಅಧ್ಯಕ್ಷರಾದ ಸುಲೈಮಾನ್ ಕೆ.ಕೆ. ಹಾಗೂ SSF ಅಧ್ಯಕ್ಷ ಶಫೀಖ್ ರವರು ಧ್ವಜಾರೋಹಣಗೈದರು. SSF ದ.ಕ. ಜಿಲ್ಲಾ ಸಮಿತಿ ಸದಸ್ಯ ಸಿರಾಜುದ್ದೀನ್ ನಿಝಾಮಿಯವರು ಸಭೆಯನ್ನು ಉದ್ಘಾಟಿಸಿ ಸಂದೇಶ ಭಾಷಣ ಮಾಡಿದರು. ಭ್ರಷ್ಟಾಚಾರ ಹಾಗೂ ಕೋಮುವಾದ ಈ ದೇಶದ ಪ್ರಗತಿಗೆ ಮಾರಕವಾದ ಅತಿ ದೊಡ್ಡ ಪಿಡುಗುಗಳು. ನಮ್ಮ ಪೂರ್ವಿಕರು ಗಳಿಸಿಕೊಟ್ಟ ಸ್ವಾತಂತ್ರ್ಯಕ್ಕೆ ಅರ್ಥ ಬರಬೇಕಾದರೆ, ನಾಡಿನ ಪ್ರಜೆಗಳೆಲ್ಲರೂ ಈ ಪಿಡುಗುಗಳ ನಿರ್ಮೂಲನೆಗೆ ಕೈ ಜೋಡಿಸಬೇಕು ಎಂದು ಅವರು ಕರೆ ಕೊಟ್ಟರು. ಮರಕಡ ಮಸೀದಿಯ ಧರ್ಮಗುರುಗಳಾದ ಇಸ್'ಹಾಖ್ ಸಖಾಫಿ ಮುಖ್ಯ ಭಾಷಣಗೈದರು. ಕೋಮುವಾದ ಪ್ರೇರಿತ ಹತ್ಯೆಗಳು ಭಾರತದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು, ಧರ್ಮಗಳ ನೇತಾರರು ಇದಕ್ಕೆ ಕಡಿವಾಣ ಹಾಕಬೇಕಾಗಿದೆ. ನ್ಯಾಯ ವ್ಯವಸ್ಥೆ ಬಲಿಷ್ಠವಾಗಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾದರೆ ಮಾತ್ರ ನಮ್ಮ ಕನಸಿನ ಭಾರತ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಮುಹಮ್ಮದ್ ಮುಸ್ಲಿಯಾರ್, ಅಬ್ದುಲ್ ಖಾದಿರ್, ಕೆ.ಎಚ್. ಬಾವ, ಇಬ್ರಾಹಿಂ ಹಾಜಿ, ಸ್ವದಖತುಲ್ಲಾ ಮುಂತಾದ ನೇತಾರರು, ಗಣ್ಯರು ಉಪಸ್ಥಿತರಿದ್ದರು. SSF ಕಾರ್ಯದರ್ಶಿ ಅಝ್ಮಾಲ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
Comments
Post a Comment