ಬೆಳಪು: ಆಗಸ್ಟ್ 16; ಬದರ್ ಜುಮಾ ಮಸ್ಜಿದ್, ಸುನ್ನೀ ಯುವಜನ ಸಂಘ (SYS) ಕಾಪು ಸೆಂಟರ್, SYS ಬೆಳಪು ಬ್ರಾಂಚ್ ಹಾಗೂ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಬೆಳಪು ಶಾಖೆ ಜಂಟಿ ಆಶ್ರಯದಲ್ಲಿ *71ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮಿಲನ* ಬೆಳಪು ಮಸ್ಜಿದ್ ಬಳಿ ನಡೆಯಿತು.
ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷ ಡಾII ದೇವಿಪ್ರಸಾದ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿ, SSF ರಾಜ್ಯ ಸಮಿತಿ ಸದಸ್ಯ ಯುವ ಖ್ಯಾತ ವಾಗ್ಮಿ ಹಾಫಿಳ್ ಯಹ್'ಕೂಬ್ ಸಅದಿ, ಅಲ್-ಅಫ್'ಳಲಿ ನಾವೂರು ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.
SYS ಬೆಳಪು ಬ್ರಾಂಚ್ & ಮಸ್ಜಿದ್ ಅಧ್ಯಕ್ಷ ಕರೀಮ್ ಹಾಜಿ ಕಳತ್ತೂರು ಅಧ್ಯಕ್ಷತೆಯಲ್ಲಿ ಮಸ್ಜಿದ್ ಖತೀಬರಾದ ಮುಹಮ್ಮದ್ ಇಕ್ಬಾಲ್ ಮದನಿ ಉದ್ಘಾಟಿಸಿದರು.
ಕರ್ನಾಟಕ ಸುನ್ನೀ ಉಲಮಾ ಒಕ್ಕೂಟ ಸದಸ್ಯ ಅಲ್ಹಾಜ್ ಪಿ.ಬಿ. ಅಹ್ಮದ್ ಮುಸ್ಲಿಯಾರ್ (ಕಾಪು ಉಸ್ತಾದ್) ಪ್ರಾರ್ಥನೆ ಸಲ್ಲಿಸಿ, ಮಜೂರು ಮಸ್ಜಿದ್ ಖತೀಬರಾದ ಎಂ.ಕೆ. ಅಬ್ದುರ್ರಶೀದ್ ಸಖಾಫಿ, ಅಲ್-ಕಾಮಿಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
SSF ಕಾಪು ಡಿವಿಷನ್ ಅಧ್ಯಕ್ಷ ಮುಹಿಯ್ಯುದ್ದೀನ್ ಸಖಾಫಿ, SYS ಕಾಪು ಸೆಂಟರ್ ಪ್ರ.ಕಾರ್ಯದರ್ಶಿ ಅಹ್ಮದ್ ಶಬೀರ್ ಸಖಾಫಿ, ಉಚ್ಚಿಲ ಸೆಕ್ಟರ್ ಉಸ್ತುವಾರಿ ಶಾಹುಲ್ ಹಮೀದ್ ನಈಮಿ, ಪಕೀರ್ಣಕಟ್ಟೆ ಮಸ್ಜಿದ್ ಖತೀಬ್ ಬಶೀರ್ ಮದನಿ ಕೋಡಿ, SYS ಕಾಪು ಸೆಂಟರ್ ಕಾರ್ಯದರ್ಶಿ ಇಕ್ಬಾಲ್ ಪಕೀರ್ಣಕಟ್ಟೆ, ಜಮಾಅತ್ ಕಾರ್ಯದರ್ಶಿ ಮುಕ್ತಾರ್ ಅಬ್ಬಾಸ್, ಮಸ್ಜಿದ್ ಗೌರವಾಧ್ಯಕ್ಷ ಹಸನ್ ಕಲ್ಲಂಜ, SYS ರಾಜ್ಯ ಕೌನ್ಸಿಲರ್ ಅಬ್ದುಲ್ಲಾ ಸೂಪರ್'ಸ್ಟಾರ್, SSF ಉಚ್ಚಿಲ ಸೆಕ್ಟರ್ ಪ್ರ.ಕಾರ್ಯದರ್ಶಿ ಫಾರೂಕ್, ಬದ್ರಿಯ ಯಂಗ್'ಮೆನ್ಸ್ ಅಧ್ಯಕ್ಷ ಹೈದರ್ ಹಸನ್, SSF ಬೆಳಪು ಶಾಖೆ ಅಧ್ಯಕ್ಷ ಅಕ್ರಮ್ ಅಬ್ಬಾಸ್, ಟಿಪ್ಪು ಬಾಯ್ಸ್ ಅಧ್ಯಕ್ಷ ನವಾಝ್, ನಿರ್ವಹಣಾ ಸಮಿತಿ ಚಯರ್'ಮ್ಯಾನ್ ಎಂ.ಎಸ್. ಮುಹಮ್ಮದ್, ಕನ್ವೀನರ್ ಆಸಿಫ್ ಬೆಳಪು, ಯಹ್'ಕೂಬ್ ಸಖಾಫಿ, ಶಂಸುದ್ದೀನ್ ಝುಹ್'ರಿ, ಹಸನ್ ಸಖಾಫಿ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಎಂ.ಕೆ. ಇಬ್ರಾಹಿಂ ಮಜೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...
Comments
Post a Comment