ಶೈಖುನಾ ಜಿ.ಎಂ. ಕಾಮಿಲ್ ಸಖಾಫಿ ಉಸ್ತಾದರ ಶಿಷ್ಯಂದಿರ 'ಸಿರಾಜುಲ್ ಫಲಾಹ್ ಅಸೋಸಿಯೇಶನ್ [SFA] ನೂತನ ಸಮಿತಿ ಅಸ್ತಿತ್ವಕ್ಕೆ
ಹಲವು ವರ್ಷಗಳ ಕಾಲ ದರ್ಸ್ ರಂಗದಲ್ಲಿದ್ದು ,ನೂರಾರು ಶಿಷ್ಯ ಸಮೂಹವನ್ನು ಸಮಾಜಕ್ಕೆ ಅರ್ಪಿಸಿದ ಶೈಖುನಾ ಜಿ.ಎಂ.ಉಸ್ತಾದರ. ಶಿಷ್ಯಂದಿರ ಸಂಗಮ ದಿನಾಂಕ-23/8/2017 ರಂದು ಅಮ್ಮೆಂಬಳದಲ್ಲಿ ನಡೆಯಿತು.
ಶೈಖುನಾ ಜಿ ಎಂ ಉಸ್ತಾದರ ದುಆ ಆಶೀರ್ವಚನದ ನಂತರ ಬೃಹತ್ ಬದ್ರ್ ಮೌಲೀದ್ ಮಜ್ಲಿಸ್' ನಡೆಯಿತು. ಬಳಿಕ ನಮ್ಮಿಂದ ಅಗಲಿದ ಉಸ್ತಾದರ ಪ್ರಮುಖ ಶಿಷ್ಯಂದಿರಿಬ್ಬರಾದ ಮರ್ಹೂಂ ಮನ್ಸೂರ್ ಸಖಾಫಿ ಬೆಳ್ಮ ಹಾಗು ಮರ್ಹೂಂ ಅಶ್ರಫ್ ಮುಸ್ಲಿಯಾರ್,ಅಮ್ಮೆಂಬಳ ಇವರ ಮೇಲೆ ತಹ್ಲೀಲ್ ಸಮರ್ಪಣೆ ಗೈದು ದುಆಃ ಮಾಡಲಾಯಿತು. ನಂತರ ಪ್ರಾರಂಭ ಗೊಂಡ ಸಭೆಯಲ್ಲಿ ರಫೀಖ್ ಸಖಾಫಿ ಮುರ ಪ್ರಾಸ್ತಾವಿಕ ಭಾಷಣ ಮಾಡಿದರು.ತದನಂತರ ಶೈಖುನಾ ಉಸ್ತಾದರಿಂದ ಆಧ್ಯಾತ್ಮಿಕ ತರಗತಿ ನಡೆಯಿತು.
ಬಳಿಕ. ಸಿರಾಜುಲ್ ಫಲಾಹ್ ಅಸೋಸಿಯೇಶನ್[SFA] ಹೆಸರಿನೊಂದಿಗೆ ನೂತನ ಸಮಿತಿಯನ್ನು ರಚಿಸಲಾಯಿತು.
ಸಿರಾಜುಲ್ ಫಲಾಹ್ ಅಸೋಸಿಯೇಶನ್ ( SFA ) ಇದರ 2017-18 ರ ನೂತನ ಸಾರಥಿಗಳು.
ನಿರ್ದೇಶಕರು : ಶೈಖುನಾ ಜಿ.ಎಂ.ಎಂ.ಕಾಮಿಲ್ ಸಖಾಫಿ.
ಅಧ್ಯಕ್ಷರು : ರಫೀಖ್ ಸಖಾಫಿ ಮುರ.
ಉಪಾಧ್ಯಕ್ಷರು : ಅಬ್ದುಲ್ ಹಮೀದ್,ಕುಕ್ಕಾಜೆ,
ಸಫ್ವಾನ್ ಸಖಾಫಿ,ಮೂಡ ಬಿದ್ರೆ.
ಪ್ರ.ಕಾರ್ಯದರ್ಶಿ : ಅಬ್ದುರ್ರಹ್ಮಾನ್ ಮುಸ್ಲಿಯಾರ್,ಬೋಳಿಯಾರ್.
ಜತೆ ಕಾರ್ಯದರ್ಶಿಗಳು : ನಾಸಿರ್ ಮದನಿ ಸೂರಿಂಜೆ,
ಇಕ್ಬಾಲ್ ಮಾರಿಪಳ್ಳ.
ಕೋಶಾಧಿಕಾರಿ : ಹೈದರ್ ಮದನಿ ಕೋಟೆ ಸೂರಿಂಜೆ.
ಸಂಘಟನಾ ಕಾರ್ಯದರ್ಶಿ : ಮುಹಮ್ಮದ್ ಸಖಾಫಿ ಕನ್ಯಾಡಿ.
ಕಾರ್ಯಕಾರಿ ಸಮಿತಿ ಸದಸ್ಯರು
ಇಸ್ಮಾಈಲ್ ಮುಸ್ಲಿಯಾರ್ ಗೋಳ್ತ ಮಜಲ್, ಜಿ.ಎಂ.ಬಶೀರ್ ಮದನಿ ಪಾಣೆ ಮಂಗಳೂರು,
ಶರೀಫ್ ಸಖಾಫಿ ಉರುಮಣೆ,
ಇಮ್ರಾನ್ ಉಳ್ಳಾಲ,
ಪಿ.ಕೆ.ಎಂ.ಹನೀಫ್ ಉರುವಾಲು ಪದವು,
ಪಿ.ಎಸ್.ಅಶ್ರಫ್ ಮಸ್ಲಿಯಾರ್,ಮೋಂತಿಮಾರ್,
ಬದ್ರುದ್ದೀನ್ ಅಮ್ಮೆಂಬಳ,
ಉಬೈದುಲ್ಲಾ ಸಖಾಫಿ ಸಜೀಪ,
ಅಬ್ದುರ್ರಹ್ಮಾನ್ ಬದ್ರೀ,ಸಾಗರ,
ಮುಬಾರಕ್ ಬೋಳಿಯಾರ್ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಇದೇ ಸಮಯದಲ್ಲಿ ಕೆಲವು ತಿಂಗಳುಗಳ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಉಸ್ತಾದರ ಶಿಷ್ಯ ಎನ್.ಎಸ್.ಅಬೂಬಕ್ಕರ್ ಅವರಿಗೆ ಶಿಷ್ಯಂದಿರು ಸಂಗ್ರಹಿಸಿದ್ದ ಬಾಕಿ ಮೊತ್ತವನ್ನು ಹಸ್ತಾಂತರಿಸಲಾಯಿತು.
Comments
Post a Comment