Skip to main content

ಬನ್ನಿ ಮಾನವ ಭಾರತ ಕಟ್ಟೋಣ ✍ಹಾರಿಸ್ ಸೋಕಿಲ..

   ವಿಶ್ವದಲ್ಲೇ ಅತಿದೊಡ್ಡ ಜಾತ್ಯಾತೀತ ಪ್ರಜಾಪ್ರಭುತ್ವ ರಾಷ್ಟ್ರದ ಸ್ವಾತಂತ್ರ್ಯೋತ್ಸವಕ್ಕೆ 71 ರ ಹರೆಯ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ತಮ್ಮ ಪ್ರಾಣವನ್ನು ತೆತ್ತ ಜಾತಿ ಮತ -ಭೇದ ರಹಿತ ಸಂಘಟಿತ ಹೋರಾಟಕ್ಕೆ ಅಭೂತಪೂರ್ವ ವಿಜಯವನ್ನು ಕಂಡ ಶುಭ ಮುಹೂರ್ತಕ್ಕೆ ವಾರ್ಷಿಕೋತ್ಸವದ ಸಂಭ್ರಮ. ನಮ್ಮ ಪೂರ್ವಿಕರು ಯಾವೊಂದು ಮನೋಭಾವದಲ್ಲಿ ನೆಲೆನಿಂತು ಎಂತಹ ಭಾರತದ ಕನಸನ್ನು ಕಂಡರೂ ಅದಕ್ಕೆ ತದ್ವಿರುದ್ಧವಾದ ಜಾತಿ-ಮತ ನೆಲ-ಗಡಿ -ಭಾಷೆ ವಿಷಯದಲ್ಲಿ ಭಾರತಂಬೇಯ ಮಕ್ಕಳಾದ ನಾವು ಪರಸ್ಪರ ಕೆಸರಾಟ ಮಾಡುವ ಬದಲು ಪೂರ್ವಿಕ ಹುತಾತ್ಮ ದೇಶ ಪ್ರೇಮಿಗಳ ಕನಸನ್ನು ನನಸಾಗಿಸುವ ಕುರಿತು ದೃಢ ಪ್ರತಿಜ್ಞೆಗಯ್ಯೋಣ.
  "ಸಾರೆ ಜಹಾಂಸೆ ಅಚ್ಚ ಹಿಂದೂಸ್ಥಾನ್ ಹಮಾರ " ಇದು ವಿವಿಧತೆಯಲ್ಲಿ ಏಕತೆ (Unity In Diversity)  ಹೊಂದಿದ ಈ ದೇಶವನ್ನು ತಮ್ಮ ಕರಾಳ ಹಸ್ತದಲ್ಲಿ  ಬಂಧಿಸಲು ಕುತಂತ್ರ ಹೆಣೆದು ಯಶಕಂಡ ಬ್ರಿಟಿಷರ (Divide and Rule) "ಹೊಡೆದು ಆಳುವ ನೀತಿ" ಅಥವಾ ಈ ದೇಶದ ಪ್ರಜೆಗಳನ್ನು ಜಾತಿ ಧರ್ಮದ ಹೆಸರಲ್ಲಿ ಪರಸ್ಪರ ಬಿರುಕು ಸೃಷ್ಟಿಸಿ ತಮ್ಮ ಅಧಿಕಾರವನ್ನು ಈ ದೇಶದ ಉದ್ದಗಲಕ್ಕೂ ವ್ಯಾಪಿಸಿದ ಬಿಳಿಯರಿಂದ ದೇಶ ವಿಮೋಚನೆಗೆ ದೇಶಕಂಡ ಹೆಮ್ಮೆಯ ರಾಷ್ಟ್ರಕವಿ ಅಲ್ಲಾಮ ಇಕ್ಬಾಲರು ಹಾಡಿದ ಸೌಹಾರ್ದತೆಯ ಸಂದೇಶವಾಗಿತ್ತು ಇದು. ಟೋಪಿ ಧರಿಸಿದ ಅಬ್ದುಲ್ ಕಲಾಂ ಅಝಾದರನ್ನೂ ಬ್ರಾಹ್ಮಣರಾದ ಮಹಾತ್ಮಗಾಂಧೀಜಿಯನ್ನು ಭಾರತೀಯತೆ ಎಂಬ ಸರಪಳಿಯಲ್ಲಿ ಪೋಣಿಸಿ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ಪರಕೀಯಾರದ ಬಿಳಿ ಪಿಶಾಚಿಗಳನ್ನು ಒದ್ದೋಡಿಸಲು ಸಹಕಾರಿಯಾಯಿತು.
   ಕೇವಲ ವ್ಯಾಪಾರಕ್ಕಾಗಿ ಬಂದಂತ ಬ್ರಿಟಿಷರು ಇಲ್ಲಿನ ಅಗಾಧವಾದ ಸಂಪತ್ತು ಕಂಡು ನಿಬ್ಬೆರಗಾದರು ಇಡೀ ದೇಶದ ಅಧಿಕಾರವನ್ನು ಅಕ್ರಮವಾಗಿ ವಹಿಸಿಕೊಂಡು ಆಂಗ್ಲರು ದೇಶದ ಪ್ರಜೆಗಳ ಹಿತವನ್ನು ಕಡೆಗಣಿಸಿದರು ಸಂಪತ್ತುಗಳನ್ನು ಸೂರೆಗೈದು ಬ್ರಿಟನ್ ಗೆ ಸಾಗಿಸಿದರು ಕ್ರಮೇಣ ದೇಶದ ಕೆಲವು ಮುತ್ಸದ್ದಿಗಳು ಬ್ರಿಟಿಷರ ಕಪಿಮುಷ್ಟಿಯಿಂದ ದೇಶವನ್ನು ಬಿಡಿಸಲು ರಂಗಕ್ಕಿಳಿದರು ಪ್ರಜೆಗಳಲ್ಲಿ ದೇಶೀಯ ಪ್ರಜ್ಞೆ ಮೂಡಿಸಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ದಂಗೆಯೇಳುವಂತೆ ಪ್ರಚೋದಿಸಿದರು.
  1857ರಲ್ಲಿ ಸಿಪಾಯಿ ದಂಗೆ ಎಂಬ ಹೆಸರಿನಲ್ಲಿ ನೆಡೆದ ಹೋರಾಟವು ಪ್ರಥಮ ಸ್ವಾತಂತ್ರ್ಯ ಚಳವಳಿಯಾಗಿತ್ತು ಅದರ ನಂತರ ದೇಶದಾದ್ಯಂತ ಚಳವಳಿಗಳು ನಡೆದವು. ಬ್ರಿಟಿಷರು ಚಳವಳಿಗಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳತೊಡಗಿದರು ಇದರಿಂದಾಗಿ ಸಾವಿರಾರು ಜನರು ಗಲ್ಲಿಗೇರಿದರು ಲಕ್ಷಾಂತರ ಜನ ಅಂಡಮಾನ್ ದ್ವೀಪದ ನರಕ ಯಾತನೆ ಅನುಭವಿಸಿದರು ಅದೆಷ್ಟೋ ಜನ ದೇಶದ ಜೈಲುಗಳಲ್ಲೂ ತ್ರೀವ ತರದ ಹಿಂಸೆಗಳಿಗೆ ಗುರಿಯಾದರು.
  ಮಹಾತ್ಮಗಾಂದೀಜಿ,ಮೌಲಾನ ಅಬ್ಬುಲ್ ಕಲಾಂ ಅಝಾದ್, ಜವಹರಲಾಲ್ ನೆಹರು, ಮೌಲಾನ ಮುಹಮ್ಮದ್ ಅಲೀ, ಸುಭಾಶ್ಚಂದ್ರ ಭೋಸ್ ,ವಲ್ಲಭ ಭಾಯ್ ಪಟೇಲ್ ಮುಂತಾದ ಮಹಾನುಭಾವರಾದವ ನೇತೃತ್ವದಲ್ಲಿ ಹಿಂದೂ ಮುಸ್ಲಿಂ ಸಹೋದರರು ಬೇದ -ಭಾವವಿಲ್ಲದೆ ಕೆಚ್ಚೆದೆಯಿಂದ ಹೋರಾಡಿದರು ಬ್ರಿಟಿಷರು ಎಷ್ಟೇ ಹಿಂಸೆ ಕೊಟ್ಟರೂ ಹೋರಾಟ ಮುಂದುವರಿಯುತ್ತಲೇ ಇತ್ತು ಕೊನೆಗೆ ಗತಿಗೆಟ್ಟ ಬ್ರಿಟಿಷರು 1947 ಆಗಸ್ಟ್ 15 ರಂದು ಅಧಿಕಾರ ಬಿಟ್ಟುಕೊಟ್ಟರು ಅಂಧಿನಿಂದ ನಮ್ಮ ದೇಶ ಸ್ವತಂತ್ರವಾಯಿತು.
  ಅದರೇ ಅದೇ ಆಗಸ್ಟ್ 13 ಮತ್ತು 14 ನೇ ದಿನಗಳಲ್ಲಿ ಭಾರತವನ್ನು ಬ್ರಿಟಿಷರು ಎರಡು ತುಂಡುಗಳನ್ನಾಗಿ ಮಾಡಿ ಪಾಕಿಸ್ತಾನ ಮತ್ತು ಭಾರತ ಎಂದು ಎರಡು ದೇಶಗಳಾಗಿ ವಿಭಹಿಸಿದರು ಪಾಕಿಸ್ತಾನಕ್ಕೆ ಸೇರಿದ ಬಾಂಗ್ಲಾದೇಶ ಮುಂದೆ ಪಾಕಿಸ್ತಾನದಿಂದ ಬಿಡುಗಡೆಗೊಂಡು ಸ್ವತಂತ್ರವಾಯಿತು ಹಾಗೆ ಬ್ರಿಟಿಷರ ದೆಸೆಯಿಂದ ಭಾರತ ಮೂರು ತುಂಡಾಯಿತು ಅವರು ಅಧಿಕಾರ ಬಿಟ್ಟುಕೊಟ್ಟು 71 ವರ್ಷಗಳಾದರೂ ಅವರು ಮಾಡಿಹೋದ ವಿಭಜನೆಯ ದುಷ್ಪರಿಣಾಮವನ್ನು ಮೂರು ದೇಶಗಳು ಇಂದಿಗೂ ಅನುಭವಿಸುತ್ತಿದೆ.
    ವಿಶ್ವದ ಯಾವುದೇ ಆಡಳಿತ ಹಾಗೂ ಸಂವಿಧಾನಕ್ಕೆ ಭಾರತವನ್ನು ಹೋಲಿಸೂದಾದರೆ ಈ ದೇಶ ಅದ್ವಿತೀಯ ಹಾಗೂ ಉತ್ಕೃಷ್ಟ ಸ್ಥಾನದಲ್ಲಿ ರಾರಾಜಿಸುತ್ತದೆ.ಕಾರಣ ಇಲ್ಲಿ ಬದುಕುವ ಜನರ ಸಂಸ್ಕತಿಯು ಹಲವು ವರ್ಣಗಳಿಂದ ಕೂಡಿದ್ದು ಜಾತ್ಯಾತೀತತೆ ಹಾಗೂ ಏಕತೆಯ ವಿಷಯದಲ್ಲಿ ಎಲ್ಲರೂ ಸಮಾನರು.ಲೋಕದ ಹಿರಿಯಣ್ಣ ಅಮೇರಿಕಾದ ಶ್ವೇತ ಭವನಕ್ಕೆ ಕರಿಯಾರಾದ ಒಬಾಮ ಅಧ್ಯಕ್ಷರಾಗಿ ಕಾಲಿಟ್ಟಾಗ ಅದೊಂದು ಲೋಕವೇ ಕೌತುಕ ಪಡುವ ವಿಸ್ಮಯಕಾರಿ ಸನ್ನಿವೇಶವಾಯಿತು.
     ಅದರೇ ಭಾರತದಲ್ಲಿ ಅಂತಹ ವಿಚಾರಗಳು ಸರ್ವೆ ಸಾಮಾನ್ಯ ಇಲ್ಲಿ ಜಾತಿ ವರ್ಣ ಪಂಗಡದ ಅನುಪಾತದಲ್ಲಿ ಈ ದೇಶದ ಪ್ರಜೆಗಳು ತಮ್ಮ ಪ್ರತಿನಿಧಿಗಳನ್ನು ಆರಿಸೂದಿಲ್ಲ ,ಆದ್ದರಿಂದ ದೇಶದ ಪರಮೋಚ್ಚ ಸ್ಥಾನಕ್ಕೆ ಈ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅತ್ಯಂತ ಅಲ್ಪ ಸಂಖ್ಯಾತರಾದ ಸಿಕ್ಕ್ ಜನಾಂಗದಿಂದಲೂ ಮುಸ್ಲಿಂ ಸಮುದಾಯದಿಂದಲೂ ಈ ಹುದ್ದೆಗೆ ಅಯ್ಕೆಯಾಗಿದ್ದಾರೆ ಇಲ್ಲಿ ಅಧಿಕಾರದ ಮಾನದಂಡ ಅರ್ಹತೆಯೇ ಹೊರತು ಜಾತಿ ಪಂಗಡಗಳಲ್ಲ ಇನ್ನು ದೇಶದ ಇತಿಹಾಸವನ್ನು ಅಧ್ಯಯನ ಮಾಡಿದರೆ ಇಲ್ಲಿನ ಸೌಹಾರ್ದತೆಯ ಪರಂಪರೆಗೆ ಹಲವಾರು ನಿದರ್ಶನಗಳು ಸಿಗುತ್ತದೆ.ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕುರಿತು ಚಿಕ್ಕ ಬಾಲ ಪಾಠವನ್ನು ಅರಿತವರು ಯಾವತ್ತೂ ಮತೀಯವಾದಿಯಾಗಲೂ ಸಾಧ್ಯವಿಲ್ಲ.ಈ ದೇಶಕ್ಕಾಗಿ ಸಮರ ಸಾರಿದ ವಿರಕಲಿಗಳು ಭಾರತೀಯತೆ ಎಂಬ ಒಂದೇ ಒಂದು ಕೊಂಡಿಯಿಂದ ಸಹೋದರತೆಯನ್ನು ಬೆಸೆದು ಈ ಸ್ವಾತಂತ್ರ್ಯಕ್ಕೆ ಪೂರ್ಣ ಇತಿಹಾಸವನ್ನು ಬರೆದರು,ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಜಾತ್ಯಾತೀತ ಪರಂಪರೆಯನ್ನು ಕನಸಾಗಿ ಕಂಡರು.ಆದರೆ ಸ್ವಾತಂತ್ರ್ಯ ಪೂರ್ವದಲ್ಲೇ ಆ ಬದ್ರಬುನಾದಿಗೆ ಬ್ರಿಟಿಷರ ಚೇಲಾಗಳಾದ ಕೆಲವೊಂದು ಫ್ಯಾಸಿಸ್ಟ್ ಶಕ್ತಿಗಳಿಂದ ಕೊಡಲಿಯೇಟು ತಗುಲಿತು,ಪ್ರಥಮದಲ್ಲೇ ಅಖಂಡ ಭಾರತವನ್ನು ವಿಭಜಿಸುವಲ್ಲಿ ಇವರ ಪ್ರಮಾನತಗೆ ಯಶಸ್ವಿ ಸಿಕ್ಕಿತು.ಇದು ಇನ್ನೂ ಮುಂದುವರಿದು ಈ ದೇಶದ ಸ್ವಾತಂತ್ರ್ಯಕ್ಕೆ ರುವಾರಿಯಾದ ರಾಷ್ಟ್ರಪಿತ ಮಹಾತ್ಮ ಗಾಂದೀಜಿಯು ಹಾಡುಹಗಲೇ ದೇಶದವನಾದ ಮತೀಯವಾದಿಯ ಗುಂಡಿಗೆ ಬಲಿಯಾಗಬೇಕಾಯಿತು ಈ ಸಂದರ್ಭದಲೆಲ್ಲಾ ಇಲ್ಲಿಯ ಬಹುಸಂಖ್ಯಾತರನ್ನು ಅಲ್ಪ ಸಂಖ್ಯಾತರ ವಿರುದ್ಧ ಎತ್ತಿಕಟ್ಟಿ ಸಾವಿರಾರು ಜನರ ಮಾರಣ ಹೋಮಕ್ಕೆ ಕಾರಣವಾಯಿತು ಮಿಲಿಯಗಟ್ಟಲೆ ಆರ್ಥಿಕ ಸಂಕಷ್ಟಕ್ಕೂ ಗುರಿಯಾಯಿತು ಈ ಎಲ್ಲಾ ಸಂಧರ್ಭದಲ್ಲೂ ಇದರ ಪಿತೂರಿ ನಡೆಸಿದವರು ಸ್ವಾರ್ಥ ಹಿತಾಸಕ್ತಿಗಳಾದ ಹಾಗೂ ಮತೀಯವಾದಿಗಳಾದ ರಾಜಕಾರಣಿಗಳೇ ಕಾರಣರಾಗಿದ್ದಾರೆ ಈ ಪ್ರಯತ್ನಕ್ಕೆ ದೇಶದ ಕೆಲವೊಂದು ರಾಜ್ಯದ ಆಡಳಿತ ವ್ಯವಸ್ಥೆಯೇ ಭಾಗಿಯಾಗಿರೂದು ಭಾರತಾಂಭೆಯ ದುರಂತೇ ಸರಿ.ಈ ಎಲ್ಲಾ ಸನ್ನಿವೇಶಗಳನ್ನು ಅಧ್ಯನ ನಡೆಸಿದರೆ ಇದು ಭದ್ರತೆಗೆ ಆಂತಕಕಾರಿಯಾಗಿದೆ ಸದ್ಯಬಲಿಷ್ಟ ರಾಷ್ಟ್ರಗಳ ಸಾಲಿಗೆ ಸೇರಿದ ಭಾರತ ತನ್ನ ಒಡಲಿನಲ್ಲಿ ಇರುವ ಆಂತರಿಕ ಕಚ್ಚಾಟದಿಂದ ಇನ್ನೊಂದು ಪರಕೀಯ ದಾಳಿಗೆ ತುತ್ತಾದೀತೆ ಎಂಬ ಭಯ ದೇಶ ಪ್ರೇಮಿಗಳನ್ನು ಕಾಡುತ್ತಿದೆ.ಆದ್ದರಿಂದ ನೆರೆಹೊರೆಯವರು ನಮ್ಮ ಮೇಲೆ ದಾಳಿಮಾಡೂದನ್ನು ತಡೆಯಲು ಮನೆಯಲ್ಲಿರುವ ನಾವು ಪರಸ್ಪರ ಸಹೋದರರಾಗಿ ಜಾತಿಮತ ವ್ಯತ್ಯಾಸವನ್ನು ಮರೆತು ಜಾತ್ಯಾತೀತತೆಯಲ್ಲಿ ಕೈಜೋಡಿಸೂದು ಕಾಲದ ಬೇಡಿಯಾಗಿದೆ.ಗಡಿ ಪ್ರದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ, ಚೀನಾಗಳಿಂದ ನಮ್ಮ ಶತ್ರುಗಳು ದೇಶದೊಳಗೆ ನುಗ್ಗಲು ಹವಣಿಸುತ್ತಿರುವಾಗ ಭಾರತವೆಂಬ ಮನೆಯೊಳಗಿರುವ ನಾವು ಕಚ್ಚಾಟದಲ್ಲಿದ್ದರೆ ದೇಶವು ಮತ್ತೊಂದು ವಿದೇಶಿ ದಾಳಿಗೆ ತುತ್ತಾದೀತೆ? ಎಂಬ ಕರಾಳ ಭಯ ನಮ್ಮನ್ನು ಆವರಿಸುತ್ತಿದೆ ಕಾಡಿನಲ್ಲಿರುವ ಕ್ರೂರ ಮೃಗಗಳು ಅಂದರೆ ಹುಲಿ ಮತ್ತೊಂದು ಹುಲಿಯನ್ನು ,ಸಿಂಹ ಮತ್ತೊಂದು ಸಿಂಹವನ್ನು ಕೊಂದ ಉದಾಹರಣೆಗಳಿಲ್ಲ ಆದರೇ ಮನುಷ್ಯ ಮನುಷ್ಯರನ್ನು ಕೊಲ್ಲುತಿದ್ದಾರೆ ಧರ್ಮ - ಜಾತಿ ಭಾಷೆ ಯಾವೂದಾದರೇನು ದೇಹದಲ್ಲಿ ಹರಿಯುವ ರಕ್ತದ ಬಣ್ಣವೊಂದೆ ಸೇವಿಸುವ ನೀರಿನ ಬಣ್ಣವೊಂದೆ ಎಂಬುದನ್ನು ಅರಿಯಬೇಕು.
    ಒಟ್ಟಿನಲ್ಲಿ ನಾವೀಗ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದೇವೆ ಮತ ಜಾತಿ ಪಂಗಡಗಳಿಂದ ಬೇರ್ಪಟ್ಟ ಕೇವಲ ಮಾನವೀಯ ಮೌಲ್ಯಗಳಿಗೆ ಬೆಲೆಕೊಟ್ಟು ನಮ್ಮ ಪೂರ್ವಿಕ ದೇಶಪ್ರೇಮಿಗಳ ಹಾದಿಯಲ್ಲಿ ಸಾಗುವ ಪ್ರತಿಜ್ಷೆಗಯ್ಯೋಣ.
  *ಜೈ ಭಾರತ್*..

*Happy Independence day to all my dear frnds*

*✍ಹಾರಿಸ್ ಸೋಕಿಲ..*

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.