ಎಸ್ಸೆಸ್ಸೆಫ್ ಪಟ್ಲ ಶಾಖೆಯ ಆಶ್ರಯದಲ್ಲಿ 71 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವು ಪಟ್ಲ ಶಾಖಾ ಮೈದಾನದಲ್ಲಿ ಶಾಖಾಧ್ಯಕ್ಷರಾದ ಶೌಕತ್ ರವರ ನೇತ್ರತ್ವದಲ್ಲಿ ನಡೆಯಿತು.
ಪಟ್ಲದ ತಖ್ವಾ ಜುಮಾ ಮಸೀದಿ ಮುದರ್ರಿಸರಾದ ಅಲ್ ಹಾಜಿ ಅಬೂ ಮುಖ್ತಾರ್ ಸಖಾಫಿ ಪ್ರಾರ್ಥನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಖುವ್ವತುಲ್ ಇಸ್ಲಾಂ ಮದ್ರಸ ಪ್ರಾಧ್ಯಾಪಕರಾದ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸಂದೇಶ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಪಟ್ಲ ಮದ್ರಸ ಮುಖ್ಯೋಪಾಧ್ಯಾಯರಾದ ಜಮಾಲ್ ಉಸ್ತಾದ್, ಅಧ್ಯಾಪಕರಾದ ಮುನೀರ್ ಲತೀಫಿ, ಪಟ್ಲ ಮಸೀದಿ ಅಧ್ಯಕ್ಷರಾದ ಮಹಮೂದ್ ಹಾಜಿ, ಸಯ್ಯಿದ್ ಮದನಿ ದರ್ಗಾ ಕೇಂದ್ರ ಸಮಿತಿ ಸದಸ್ಯ ಮೊಯ್ದಿನಾಕ, ಪಟ್ಲ ಮಸೀದಿ ಉಪಾಧ್ಯಕ್ಷರಾದ ಹಾರಿಸ್, ಎಸ್ಸೆಸ್ಸೆಫ್ ಪಟ್ಲ ಶಾಖಾ ಪ್ರಧಾನ ಕಾರ್ಯದರ್ಶಿ ಶರೀಫ್ ಹಾಗು ವಿದ್ಯಾರ್ಥಿಗಳು, ಊರ ನಾಗರಿಕರು ಉಪಸ್ಥಿತರಿದ್ದರು. ಪಟ್ಲ ಮಸೀದಿ ಪ್ರಧಾನ ಕಾರ್ಯದರ್ಶಿ ಸದ್ದಾಂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...
Comments
Post a Comment