Skip to main content

ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ಆಶ್ರಯದಲ್ಲಿ ನಶಾತ್ ಕ್ಯಾಂಪ್

ಎಸ್ ಎಸ್ ಎಫ್ ಬಂಟ್ವಾಳ ಸೆಕ್ಟರ್ ನಶಾತ್ ಕ್ಯಾಂಪ್ ಇತ್ತೀಚೆಗೆ ಹಿದಾಯತುಲ್ ಇಸ್ಲಾಂ ಮದ್ರಾಸ ಪೆರಾಳದಲ್ಲಿ ನಡೆಯಿತು.
ಸಯ್ಯದ್ ಹಂಝ ತಂಗಳ್ರವರ ನೇತೃತ್ವದಲ್ಲಿ  ಮುಖಾಂ ಝಿಯಾರತ್ ಮಾಡಿ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಲಾಯಿತು._
_ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷರಾದ. ಮನ್ಸೂರ್ ವಗ್ಗರವರು ವಹಿಸಿದರು._ _ಎಸ್ಎಸ್ಎಫ್ ಬಂಟ್ವಾಳ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು._
ಸಿದ್ದಿಕ್ ಸಅದಿ _ಉಸ್ತಾದರು ಕಿರಾ ಅತ್ ಪಠಿಸಿ,_
_ಪೆರಾಳ ಜುಮಾ ಮಸೀದಿಯ  ಖತೀಬರಾದ  ಉಸ್ಮಾನ್ ಸಖಾಫಿ ಉಸ್ತಾದರು ಉದ್ಘಾಟಿಸಿದರು._

_ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ  ಮುಹಮ್ಮದ್ ಅಲಿ ತುರ್ಕಳಿಕೆ  ಸಾಂಘಿಕ ಬದುಕು ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಸಂಘಟನೆಯಲ್ಲಿ ಕಾರ್ಯಚರಿಸುವುದು ನಮ್ಮ ಇಹ ಪರ ವಿಜಯಗೊಳಿಸುವ ಉದ್ದೇಶದಿಂದ ಆಗಿರಬೇಕು._  _2-3 ವರ್ಷಗಳ ಮಗು ಕೂಡಾ  ಮಾತನಾಡುತ್ತದೆ. ಮಾತಿನ ಶೈಲಿಯನ್ನು ಕಲಿಯಲು ಹಲವಾರು ವರ್ಷಗಳು ಬೇಕಾಗುತ್ತದೆ._
_ಹಿರಿಯರನ್ನು ಹೇಗೆ ಗೌರವಿಸಬೇಕು,ಹಿರಿಯರೊಂದಿಗೆ ಹೇಗಿರಬೇಕು, ಯಾರೊಂದಿಗೆ ಹೇಗೆ ಮಾತನಾಡಬೇಕೆಂದು ಸಂಘಟನೆಯು ಕಲಿಸುತ್ತದೆ._ _ನಮ್ಮನ್ನು ಅಲ್ಲಾಹನು ಇಷ್ಟಪಡಬೇಕಾದರೆ ನಮ್ಮ  ದಿನನಿತ್ಯದ ಜೀವನದಲ್ಲಿ ಇಸ್ಲಾಮಿನ ಆದರ್ಶವಿರಬೇಕು. ಸುನ್ನತ್ ಮಾತಿನ ವಿಷಯದಲ್ಲಿ ಮುಂದೆ ಇಟ್ಟ ಹೆಜ್ಜೆಯನ್ನು ಹಿಂದೆ ಇಡದೆ ಧೈರ್ಯವಾಗಿ ಮುನ್ನುಗ್ಗಬೇಕೆಂದು ಕರೆ ನೀಡಿದರು._
_ನಂತರ. ಸಯ್ಯದ್ ಹಂಝ ತಂಙಳ್ ರವರು ನಮ್ಮ ದಿನಚರಿ ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಸೂರತ್ ಮುಲ್ಕ್ ಮತ್ತು ವಾಕಿಆ ಸೂರತಿನ ಮಹತ್ವ ತಿಳಿಸಿದರು. ಕಾರ್ಯಕರ್ತರಲ್ಲಿ ದಿನನಿತ್ಯವೂ ಓದಬೇಕಾಗಿ ತಿಳಿಸಿದರು._
_ನಂತರ. ಇಸಾಕ್ ಝುಹುರಿ ಉಸ್ತಾದರು ಸಂಘಟನೆಯ ಆಧ್ಯಾತ್ಮಿಕತೆ ಎಂಬ ವಿಷಯದಲ್ಲಿ ತರಗತಿ ನಡೆಸಿದರು._
_ಅಲ್ಲಾಹನು ನಮಗೆ ಮುಸ್ಲಿಂ ಆಗಿ ಜನಿಸುವ ಭಾಗ್ಯ ನೀಡಿದ್ದಾನೆ. ನಾವು ಒಳ್ಳೆಯವನಾಗಿ, ನಮ್ಮೊಂದಿಗೆ ಇರುವ ಇತರರನ್ನು ಒಳ್ಳೆಯದಾಗಿಸಬೇಕು. ಸಂಘಟನೆಯಲ್ಲಿ ನಿಷ್ಕಳಂಕ ಮನಸ್ಸಿನಿಂದ ಕಾರ್ಯಚರಿಸಬೇಕು. ವ್ಯಕ್ತಿ ಜೀವನ ಒಳ್ಳೆಯದಾಗಿಸಲು ಇಹ ಪರ ವಿಜಯ ಗೊಳಿಸಲು ಅಲ್ಲಾಹನು  ಎಸ್‌ ಎಸ್ ಎಫ್‌ ಎಂಬ ಸಂಘಟನೆಯನ್ನು ನೀಡಿದ್ದಾನೆ. ನಮ್ಮ ಕಾರಣದಿಂದ ಒಬ್ಬನು ಒಳ್ಳೆಯದಾದರೆ ನಮ್ಮ ಪರ ಲೋಕ ವಿಜಯಕ್ಕೆ ಅದುವೇ ಸಾಕು. ಎಂಬ ಉಪದೇಶ ನೀಡಿದರು._ _ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಅಬ್ದುಲ್ ಖಾದರ್ ಪೆರಾಲ, ಡಿವಿಷನ್ ಉಪಾಧ್ಯಕ್ಷರಾದ ಅಕ್ಬರ್ ಅಲಿ ಮದನಿ ಭಾಗ ವಹಿಸಿದರು._ _ಸೆಕ್ಟರ್ ಎಕ್ಸಿಕ್ಯೂಟಿವ್  ಮೆಂಬರ್ ಸಹಿತ ನೂರರಷ್ಟು ಕಾರ್ಯಕರ್ತರು ಭಾಗವಹಿಸಿ ಕ್ಯಾಂಪಿನ ಸದುಪಯೋಗ ಪಡೆದುಕೊಂಡರು._
ಕೊನೆಯಲ್ಲಿ ಡಿವಿಜನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ಇವರ ನೇತೃತ್ವದಲ್ಲಿ ಶಾಖಾ ಸಬಲೀಕರಣ ಎಂಬ ವಿಷಯದಲ್ಲಿ ಮಹತ್ವಪೂರ್ಣವಾದ ಚರ್ಚೆ ನಡೆಯಿತು.

*✍🏻ಹಾರಿಸ್ ಪೆರಿಯಪಾದೆ*

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.