ಕಟಪಾಡಿ : ದೇಶಭಿಮಾನವನ್ನು ಹೇಳುವುದರೊಂದಿಗೆ ಮಾನವಿಯತೆಗೆ ಬೆಲೆ ಇಲ್ಲದ ಈ ಒಂದು ಸಂದರ್ಭದಲ್ಲಿ ಮಾನವನು ಮಾನವೀಯತೆಯ ಬೆಲೆಯನ್ನು ಕಂಡುಕೊಳ್ಳಬೇಕು ಎಂದು 71 ನೆಯ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಸ್ಸೆಸ್ಸೆಪ್ ಕಟಪಾಡಿ ಸೆಕ್ಟರ್ ವತಿಯಿಂದ ಕಟಪಾಡಿ ಬಸ್ ನಿಲ್ದಾಣ ಬಳಿ ನಡೆದ "ಸ್ವಾತಂತ್ರ್ಯ ಸ್ನೇಹ ಸಂಘಮ" ಕಾರ್ಯಕ್ರಮದಲ್ಲಿ ಮುಖ್ಯ ಸಂದೇಶ ಭಾಷಣ ಮಾಡಿದ ಎಸ್ಸೆಸ್ಸೆಪ್ ಕಟಪಾಡಿ ಸೆಕ್ಟರ್ ಅಧ್ಯಕ್ಷರಾದ ಶರ್ವಾನಿ ಉಸ್ತಾದ್ ಮಣಿಪುರ ಇವರು ಮಾತನಾಡಿದರು. ಉಡುಪಿ ಡಿವಿಷನ್ ಉಪಾಧ್ಯಕ್ಷರಾದ ರಶೀದ್ ಉಸ್ತಾದ್ ಕಟಪಾಡಿ ಕಾರ್ಯಕ್ರಮದ ದುವಾ ಹಾಗು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಎಸ್ಸೆಸ್ಸೆಪ್ ಉಡುಪಿ ಡಿವಿಷನ್ ಜೊತೆ ಕಾರ್ಯದರ್ಶಿ ನವಾಝ್ ಮಣಿಪುರ, ಕಟಪಾಡಿ ಪಂಚಾಯತ್ ಸದಸ್ಯರಾದ ನಹೀಮ್ ಬಾಯ್, ಸ್ಥಳೀಯ ಉದ್ಯಮಿಯಾದ ವಾಸುದೇವ,ಕಟಪಾಡಿ ಶಾಖಾ ಅಧ್ಯಕ್ಷರಾದ ಮಜೀದ್ ಕಟಪಾಡಿ,ಸರಕಾರಿಗುಡ್ಡೆ ಶಾಖಾ ಅಧ್ಯಕ್ಷ ಇಸ್ಮಾಹಿಲ್,ಆಸೀಪ್ ಹಾಗು ಇನ್ನತರರು ಉಪಸ್ಥಿತಿತರಿದ್ದರು.ಶರ್ವಾನಿ ಉಸ್ತಾದ್ ವಂದಿಸಿದರು.
ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...
Comments
Post a Comment