ಅಸಾಸ್ ಎಜುಕೇಶನ್ ಸೆಂಟರ್ ಹಾಗೂ ಅಸಾಸ್ ಸುನ್ನೀ ಮದರಸ ಮತ್ತು ಎಸ್ಬಿಎಸ್ ಮಲ್ಲೂರ್ ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಅಸಾಸ್ ಮಲ್ಲೂರ್ ಸಂಸ್ಥೆಯಲ್ಲಿ ವಿಜ್ರಂಭನೆಯಿಂದ ಆಚರಿಸಲಾಯಿತು. ಧ್ವಜರೋಹಣವನ್ನು ಸ್ಥಳೀಯ ನೇತಾರರಾದ ಮುಹಮ್ಮದ್ ಹಾಗೂ ಅಬ್ದುಲ್ ಮಜೀದ್ ರವರು ನೆರವೇರಿಸಿದರು. ಅಸಾಸ್ ಸಂಸ್ಥೆಯ ಸದರ್ ಮುದರ್ರಿಸ್ ಖಾಸಿಮುಲ್ ಮದನಿ ದುಆ ನೆರವೇರಿಸಿದರು.
ಭಾರತ ಸ್ವಾತಂತ್ರ್ಯಕ್ಕಾಗಿ
ನಮ್ಮ ಹಿರಿಯರು ಅಹೋರಾತ್ರಿ ದುಡಿದು ಮಡಿದ ತ್ಯಾಗವನ್ನು ಸ್ಮರಿಸುತ್ತಾ. ಧರ್ಮ ಭೇದವಿಲ್ಲದೆ ಸಮರಗೈದು ನಮಗೆ ಅವರು ಕೊಟ್ಟ ಸ್ವಾತಂತ್ರ್ಯವನ್ನು ನಾವು ಪರಸ್ಪರ ಸೌಹಾರ್ದತೆಯ ಮೂಲಕ ಉಳಿಸಿಕೊಳ್ಳಬೇಕು.
ಭಾರತದಲ್ಲಿ ಸಂವಿಧಾನ ಬದ್ದವಾಗಿ ಎಲ್ಲರೂ ಜೀವಿಸಬೇಕು. ನಮ್ಮ ರಾಷ್ಟ್ರದ್ವಜದ ಸಂದೇಶವೂ ಅದಾಗಿದೆ ಎಂದೂ ಮಲ್ಲೂರ್ ನಲ್ಲಿ ತಲೆಎತ್ತಿ ನಿಂತ ಅಸಾಸ್ ಸಂಸ್ಥೆಯ ಬಗ್ಗೆ ಹೆಮ್ಮೆಯ ವಿಚಾರವನ್ನು ಸಭೆಯಲ್ಲಿ ಮಾತನಾಡಿ ಸಂದೇಶವನ್ನ ಅಲ್ ಮದೀನ ಯತೀಮ್ ಖಾನ ಮಂಜನಾಡಿ ದಮಾಮ್ ವಲಯ ಪ್ರ ಕಾರ್ಯದರ್ಶಿ ಎಮ್ ಜಿ ಇಖ್ಬಾಲ್ ಮಲ್ಲೂರ್ ನೀಡಿದರು. ಸ್ವಾತಂತ್ರ್ಯ ದಿನಾಚರಣೆ ಆಚರಿಸುವ ಮಹತ್ವ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಹುತಾತ್ಮರಾದ ಮಹನೀಯರು ಮಾಡಿದ ಸರ್ವತೋಮುಖ ಕಾರ್ಯಗಳನ್ನ ವಿವಿಧ ಜಾತಿ ಧರ್ಮಗಳ ಸಂಕರ ಭೂಮಿ. ಭಾರತೀಯರಾದ ನಾವು ಜಾತಿ ನೋಡದೆ ಒಂದೇ ತಾಯಿಯ ಮಕ್ಕಳಂತೆ ಜೀವಿಸಬೇಕಿದೆ. ಸೌಹಾರ್ಧ ಭಾರತವನ್ನು ಕಟ್ಟಬೇಕಿದೆ ಎಂದು ಅಧ್ಯಕ್ಷತೆ ವಹಿಸಿ ಅಸಾಸ್ ಚಯರ್ಮೇನ್ ಅಶ್ರಫ್ ಸಅದಿ ಮಲ್ಲೂರ್ ಮಾತನಾಡಿದರು ದರ್ಸ್ ವಿಧ್ಯಾರ್ಥಿಗಳು ರಾಷ್ಟ್ರಗೀತೆ ಹಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಹಿಫ್ಲ್ ಖುರ್ಆನ್ ಪ್ರಾಂಶುಪಾಲ ಆಸಿಫ್ ನೂರಿ ಬರಕಾತಿ ಛತ್ತೀಗಢ್ ,ಇದ್ದಿನಬ್ಬ, ಸಿದ್ದೀಖ್, ನಾಸಿರ್,ರಹ್ಮಾನ್ ಭಾಗವಹಿಸಿದ್ದರು ಪ್ರಾರಂಭದಲ್ಲಿ ಸಂಸ್ಥೆಯ ಮೆನೇಜರ್ ಆರ್,ಕೆ ಮದನಿ ಅಮ್ಮೆಂಬಳ ಸ್ವಾಗತಿಸಿ,ಆಫೀಸ್ ಮನೇಜರ್ ಅನ್ಸಾರ್ ಮಲ್ಲೂರ್ ವಂದಿಸಿದರು
ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...
Comments
Post a Comment