ಎಸ್ಸೆಸ್ಸೆಫ್ ಬೈತಾರ್ ಶಾಖೆ ವತಿಯಿಂದ ಸ್ನೇಹಸಭೆ ಶಾಖಾಧ್ಯಕ್ಷರಾದ ಮುನೀರ್ ರಾಜಗುಡ್ಡೆ ಇವರ ಅಧ್ಯಕ್ಷತೆಯಲ್ಲಿ 27 - 08 - 2017 ರಂದು ಬೈತಾರ್ ಮುಹ್ಯಿದ್ದೀನ್ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮದ್ರಸ ಅಧ್ಯಾಪಕರಾದ ಕರೀಂ ಸಖಾಫಿ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು. ಬುಸ್ತಾನುಲ್ ಉಲೂಂ ಮದ್ರಸ ಬೈತಾರ್ ಮುಖ್ಯೋಪಾಧ್ಯಾಯರಾದ ಅನ್ಸಾರ್ ಸಅದಿ ಸ್ವಾಗತಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯ ಮುಸ್ತಫ ಪಾವೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿದರು. ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಕೋಶಾಧಿಕಾರಿ ತೌಸೀಫ್ ಸಅದಿ ಹರೇಕಳ ಹಾಗು ಎವರೀಸ್ ಕುಟಿನ್ಹ ಗಟ್ಟಿಮೊಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬೈತಾರ್ ಮಸೀದಿ ಅಧ್ಯಕ್ಷರಾದ ಮುಸ್ತಫ ಎಂ ಐ ಆರ್, ಕರೀಂ ಹಾಜಿ ಉಂಬುದ, ಶಾಖಾ ಉಪಾಧ್ಯಕ್ಷರುಗಳಾದ ಆಸಿಫ್ ಹಾಗು ಮೊಹಮ್ಮದ್, ಶಾಖಾ ಮಾಜಿ ಅಧ್ಯಕ್ಷ ಅಬ್ದುಲ್ಲ ರಾಜಗುಡ್ಡೆ, ರಫೀಕ್ ಬನಬಳಿ, ನಾಗರಾಜ ಬನಬಳಿ, ಅಲ್ಪಿ ಡಿಸೋಜ, ಬಾಲಣ್ಣ ಬನಬಳಿ ಹಾಗು ಎಸ್ಸೆಸ್ಸೆಫ್ ಹಾಗು ಎಸ್ ವೈ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಮಸೀದಿ ಅಧ್ಯಾಪಕರಾದ ಮಾಹಿನ್ ಮುಸ್ಲಿಯಾರ್ ಕೊನೆಯಲ್ಲಿ ದುವಾಗೈದರು. ಶಾಖಾ ಜತೆ ಕಾರ್ಯದರ್ಶಿ ಶಂಸುದ್ದೀನ್ ಬೈತಾರ್ ಧನ್ಯವಾದಗೈದರು
ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...
Comments
Post a Comment