ತಖ್ವಾ ಜುಮಾ ಮಸೀದಿ ಹಾಗು ಖವ್ವತುಲ್ ಇಸ್ಲಾಂ ಮದ್ರಸ ಪಟ್ಲ ಇದರ ಆಶ್ರಯದಲ್ಲಿ ಪ್ರಾರ್ಥನಾ ಸಂಗಮ ಹಾಗು ಹಜ್ ಯಾತ್ರೆ ಗೈಯ್ಯುತ್ತಿರುವ ಪಟ್ಲ ಜುಮಾ ಮಸೀದಿಯ ಖತೀಬರಾದ ಮೋಙಂ ಫೈಝಿ ಉಸ್ತಾದರಿಗೆ ಬೀಳ್ಕೊಡುಗೆ ಸಮಾರಂಭ ಪ್ರಸ್ತುತ ಮಸೀದಿ ಮದ್ರಸದ ಅಧ್ಯಕ್ಷರಾದ ಮಹಮೂದ್ ಹಾಜಿಯವರ ಅಧ್ಯಕ್ಷತೆಯಲ್ಲಿ ಪಟ್ಲದ ಮದ್ರಸ ಹಾಲ್ ನಲ್ಲಿ ಜರುಗಿತು.
ಪಟ್ಲ ಮಸೀದಿಯ ಮುದರ್ರಿಸ್ ಹಾಗು ಸಹ ಖತೀಬರಾದ ಅಬೂ ಮುಖ್ತಾರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಫೈಝಿ ಉಸ್ತಾದರ ವ್ಯಕ್ತಿತ್ವ, ಸರಳ ಸ್ವಭಾವ ನಮಗೆ ಮಾದರಿ ಅಂದರು. ಮದ್ರಸ ಅಧ್ಯಾಪಕರಾದ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿ ಫೈಝಿ ಉಸ್ತಾದರು ಕೇವಲ ಪಟ್ಲ ಎಂಬ ಊರಿನ ಉಸ್ತಾದ್ ಮಾತ್ರವಲ್ಲದೆ ಇಡೀ ಉಳ್ಳಾಲದ ಸುನ್ನೀ ಸಮುದಾಯದ ಮಾರ್ಗದರ್ಶಿಯೂ ನಾಯಕರೂ ಆಗಿರುವರು ಎಂದು ತಿಳಿಸಿದರು. ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಕಿಂಚಿತ್ತೂ ಸಡಿಲ ಮನೋಭಾವ ತೋರಿಸದೆ ಎದೆಗಾರಿಕೆಯೊಂದಿಗೆ ಹೇಳುವ ವ್ಯಕ್ತಿತ್ವ ಅವರದಾಗಿದೆ. ಅವರು ಹದಿನೆಂಟು ವರ್ಷಗಳಿಂದ ಹಿರಿಯರಿಗಾಗಿ ಕುರಾನ್ ಸ್ಟಡೀ ಕ್ಲಾಸ್ ನಡೆಸಿಕೊಂಡು ಬರುತ್ತಿದ್ದು, ಅವರ ಮುಖಾಂತರ ಅದೆಷ್ಟೋ ಮಂದಿ ಇಂದು ಕುರಾನ್ ಸಲೀಸಾಗಿ ಓದಬಲ್ಲವರಾಗಿದ್ದಾರೆ ಎಂದು ತಿಳಿಸಿದರು. ಪಟ್ಲ ಮೋಙಂ ಫೈಝಿ ಉಸ್ತಾದರು ಮುಖ್ಯ ಪ್ರಭಾಷಣ ನಡೆಸಿ ಹಜ್ ಎಂಬುದು ಇಸ್ಲಾಮಿನ ಮೂಲಭೂತ ಕಾರ್ಯಗಳಲ್ಲೊಂದಾಗಿದ್ದು ಸಾಧ್ಯವಿರುವವರು ಆಯುಷ್ಯದಲ್ಲಿ ಒಮ್ಮೆ ಹಜ್ ನಿರ್ವಹಿಸುವುದು ಕಡ್ಡಾಯವಾಗಿದೆ ಅಂದರು. ಹಜ್ ಯಾತ್ರೆಗೈಯ್ಯುವವರೊಂದಿಗೆ ದುಆ ಅಪೇಕ್ಷಿಸುವುದು ಪ್ರವಾದಿ ಸ.ಅ ರವರು ನಮಗೆ ತೋರಿಸಿದ ಮಾದರಿಯಾಗಿದ್ದು ಇಸ್ಲಾಮಿನ ಖಲೀಫರಾದ ಉಮರ್ ರ.ಅ ಉಮ್ರಾ ಯಾತ್ರೆಗಾಗಿ ಮಕ್ಕಾಕ್ಕೆ ಹೊರಟು ನಿಂತಾಗ ಉಮರ್ ರ.ಅ ರವರೊಂದಿಗೆ ಓ ನನ್ನ ಪ್ರೀತಿಯ ಮಿತ್ರ.. "ನೀನು ಮಕ್ಕಾಕ್ಕೆ ಉಮ್ರಾ ಯಾತ್ರೆಗಾಗಿ ಹೊರಟು ನಿಂತಿರುವೆ. ತನ್ನ ದುಆದಲ್ಲಿ ನಮ್ಮನ್ನು ಮರೆಯಬಾರದು" ಎಂದು ಪ್ರವಾದಿ ಸ.ಅ ರವರು ದುಆ ಅಪೇಕ್ಷಿಸಿದ್ದರು ಎಂದು ತಿಳಿಸಿದರು. ಮುಂದುವರಿದು ಫೈಝಿ ಉಸ್ತಾದರು ಮದ್ರಸ ಮತ್ತು ಪಳ್ಳಿ ದರ್ಸ್ ಇದರ ಮಹತ್ವವನ್ನು ವಿವರಿಸಿದರು. ಬಳಿಕ ಪಟ್ಲ ಮಸೀದಿ ಮದ್ರಸ ಆಡಳಿತ ಸಮಿತಿ, ಎಸ್ಸೆಸ್ಸೆಫ್ ಪಟ್ಲ ಶಾಖೆ ಹಾಗು ಪಳ್ಳಿ ದರ್ಸ್ ವಿದ್ಯಾರ್ಥಿಗಳ ವತಿಯಿಂದ ಹಜ್ ಯಾತ್ರೆಗೆ ಹೊರಟಿರುವ ಪಟ್ಲ ಉಸ್ತಾದರಿಗೆ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸದ್ರಿ ಮಸೀದಿ ಮದ್ರಸದ ಅಧ್ಯಾಪಕರಾದ ಮುನೀರ್ ಲತೀಫಿ, ಇಬ್ರಾಹಿಂ ಮದನಿ, ಉಪಾಧ್ಯಕ್ಷ ಹಾರಿಸ್, ಜೊತೆ ಕಾರ್ಯದರ್ಶಿ ಅಬ್ದುಸ್ಸಮದ್, ಹಿರಿಯ ಮೇಧಾವಿ ಇಸ್ಮಾಯಿಲ್ ಹಾಜಿ ಉಪಸ್ಥಿತರಿದ್ದರು.
ಮದ್ರಸ ಮುಖ್ಯೋಪಾಧ್ಯಾಯರಾದ ಜಮಾಲ್ ಮುಸ್ಲಿಯಾರ್ ಸ್ವಾಗತಿಸಿ ಕಾರ್ಯಕ್ರಮದ ಕೊನೆಗೆ ಧನ್ಯವಾದಗೈದರು.
ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...
Comments
Post a Comment