ಉರುವಾಲು ಪದವು ಡೆವಲಪ್ ಮೆಂಟ್ ಕಮಿಟಿ[UDC],ರಿಯಾದ್,ಸೌದಿ ಅರೇಬಿಯಾ 'ವಾರ್ಷಿಕ ಮಹಾಸಭೆ' ನೂತನ ಅಧ್ಯಕ್ಷರಾಗಿ-ಪಿ.ಕೆ ದಾವೂದ್ ಸಅದಿ ಆಯ್ಕೆ
ರಿಯಾದ್: ತಮ್ಮ ಕುಟುಂಬ ನಿರ್ವಹಣೆಗಾಗಿ ಪ್ರವಾಸಿ ಜೀವನ ನಡೆಸುತ್ತಿರುವ ಉರುವಾಲು ಪದವು ಜಮಾಅತ್ತಿನ ಸುನ್ನೀ ಕಾರ್ಯಕರ್ತರು,ತಮಗೆ ಸಿಗುವ ಸಂಬಳದಿಂದ ಒಂದಲ್ಪ ತಮ್ಮ ಊರಿನಲ್ಲಿರುವ ಕಡು ಬಡವರ ಸಹಾಯ ಮಾಡುವ ಮತ್ತು ಜಮಾಅತ್ತಿನ ಸರ್ವಾಂಗೀಣ ಅಭಿವೃದ್ದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಳೆದೊಂದು ವರ್ಷ ಹಿಂದೆ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಅಸ್ತಿತ್ವಕ್ಕೆ ಬಂದ ಸಮಿತಿ 'ಉರುವಾಲು ಪದವು ಡೆವಲ್ಪ್ ಮೆಂಟ್ [UDC]'ರಿಯಾದ್ ಸೌದಿ ಅರೇಬಿಯಾ,
ಇದರ. ಸ್ವಲಾತ್ ವಾರ್ಷಿಕ ಮತ್ತು ವಾರ್ಷಿಕ ಮಹಾಸಭೆಯು ದಿನಾಂಕ -8/9/2017 ಶುಕ್ರವಾರ ಅಬ್ದುಲ್ ಕರೀಮ್ ಲತೀಫಿ,ಬೇಂಗಿಲ (ಆರ್ಗನೈಝರ್,ಮದೀನತುಲ್ ಉಲೂಂ ಎಜಿಕೇಶನ್ ಅಕಾಡೆಮಿ,ಮೂಡಡ್ಕ, ಸೌದಿ ಘಟಕ)ಇವರ ನೇತೃತ್ವದಲ್ಲಿ ನಡೆಯಿತು.
ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿ ಉರುವಾಲು ಪದವು ಸ್ವಾಗತಿಸಿ ಸಮಿತಿಯ ಚೊಚ್ಚಲ ಒಂದು ವರ್ಷದ ಕಾರ್ಯ ಚಟುವಟಿಕೆಯ ಕುರಿತು ಹೃಸ್ವ ವಾಗಿ ವಿವರಿಸಿದರು.
ಸಂಶುದ್ದೀನ್ ಝುಹ್ರಿ ಖಿರಾಅತ್ ಪಠಿಸಿದ ಸಭೆಯನ್ನು ಇಸ್ಹಾಖ್ ಮದನಿ ಉರುವಾಲು ಪದವು ಉದ್ಘಾಟಿಸಿದರು.
ಬಳಿಕ ಕಾರ್ಯದರ್ಶಿ ದಾವೂದ್ ಸಅದಿ ಮಂಡಿಸಿದ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರ ಮಂಡನೆ'ಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ತದನಂತರ ಸಮಿತಿ ಹಾಲಿ ಅಧ್ಯಕ್ಷರಾಗಿದ್ದ ಅಬ್ದುಲ್ಲತೀಫ್ ಉರುವಾಲು ಪದವು ಅವರಿಂದ ಭಾಷಣ ನಡೆಯಿತು.
ಬಳಿಕ ಸಭೆಯ ಅಧ್ಯಕ್ಷರಾದ ಅಬ್ದುಲ್ ಕರೀಮ್ ಲತೀಫಿ,ಬೇಂಗಿಲ ಇವರ ಅದ್ಯಕ್ಷೀಯ ಭಾಷಣ ಮತ್ತು ಹಾಲಿ ಸಮಿತಿಯನ್ನು ಬರ್ಕಾಸು ಗೊಳಿಸಿ ನೂತನ ಸಮಿತಿಯ ರಚನೆ ನಡೆಯಿತು.
2017-18ರ ನೂತನ ಸಮಿತಿ ಅಸ್ತಿತ್ವಕ್ಕೆ
ನೂತನ ಸಾರಥಿಗಳು
ಗೌರಾವಧ್ಯಕ್ಷರು: ಡಿ.ಪಿ.ಯೂಸುಫ್ ಸಖಾಫಿ,ಬೈತಾರ್
ಸಲಹೆಗಾರರು: ಪಿ.ಕೆ.ಯಾಕುಬ್ ಮದನಿ,ಉರುವಾಲು ಪದವು
: ಅಬ್ದುಲ್ಲತೀಫ್,ಉರುವಾಲು ಪದವು
ಅದ್ಯಕ್ಷರು:
ಪಿ.ಕೆ.ದಾವೂದ್ ಸಅದಿ,ಉರುವಾಲು ಪದವು
ಉಪಾಧ್ಯಕ್ಷರು:
ಶರೀಫ್,ಉರುವಾಲು ಪದವು
ಪಿ.ಕೆ.ಎಂ.ಆಸಿಫ್,ಉರುವಾಲು ಪದವು
ಪ್ರ.ಕಾರ್ಯದರ್ಶಿ: ಸಂಶುದ್ದೀನ್ ಝುಹ್ರಿ,ಉರುವಾಲು ಪದವು
ಜೊತೆ,ಕಾರ್ಯದರ್ಶಿ
ನಾಸಿರ್.ಪಿ.ಉರುವಾಲು ಪದವು
ಪಿ.ಕೆ.ಸಿದ್ದೀಖ್,ಉರುವಾಲು ಪದವು
ಕೋಶಾಧಿಕಾರಿ: ಇಸ್ಹಾಖ್ ಮದನಿ,ಉರುವಾಲು ಪದವು
ಸಂಚಾಲಕರು: ಪಿ.ಕೆ.ಎಂ.ಹನೀಫ್,ಉರುವಾಲು ಪದವು
ಇದೇ ಸಂದರ್ಭದಲ್ಲಿ ಪ್ರವಾಸಿ ಜೀವನಕ್ಕೆಅಲ್ಪಾವದಿಯ ವಿರಾಮ ಹಾಕಿ ಊರಿಗೆ ತೆರಳುತ್ತಿರುವ ಸಮಿತಿಯ ಸಕ್ರೀಯ ಕಾರ್ಯಕರ್ತ ಅಶ್ರಫ್ ಉರುವಾಲು ಪದವು ಹಾಗೂ ರಜಾ ಅವಧಿಯಲ್ಲಿ ಊರಿಗೆ ತೆರಳುತ್ತಿರುವ ನೂತನ ಸಮಿತಿ ಉಪಾಧ್ಯಕ್ಷರಾದ ಶರೀಫ್ ಉರುವಾಲು ಪದವು,ಸಕ್ರೀಯ ಕಾರ್ಯಕರ್ತ ಅಬ್ಬಾಸ್ ಉರುವಾಲು ಪದವು ಅವರನ್ನು ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಇತ್ತೀಚೆಗೆ ಜಮಾಅತ್ತಿನಲ್ಲಿ ಮರಣ ಹೊಂದಿದ ಇರ್ವರ ಮೇಲೆ ಮಯ್ಯಿತ್ ನಮಾಝ್ ಹಾಗೂ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಇದೇ ಸಮಯ ನಡೆಯಿತು.
ನೂತನ ಸಮಿತಿಯ ಎಲ್ಲಾ ಸಾರಥಿಗಳಿಗೆ ಅಭಿನಂದನೆಗಳು
_uruval padavu development commity[UDC],riyad,saudi arabiya_
Comments
Post a Comment