*ಪತ್ರಕರ್ತೆ ಗೌರಿ ಲಂಕೇಶರ ಹತ್ಯೆ ಫ್ಯಾಶಿಸ್ಟ್ ಶಕ್ತಿಗಳ ವಿರುದ್ಧದ ಧ್ವನಿಯನ್ನು ಇಲ್ಲವಾಗಿಸುವ ಪ್ರಯತ್ನ : ಸುನ್ನೀ ಸಾಹಿತ್ಯ ಮಂಡಳಿ.*
ಮಂಗಳೂರು : ಸಮಾಜದಲ್ಲಿ ಆಳವಾಗಿ ಬೇರೂರಿರುವ ಫ್ಯಾಶಿಸಂ ಸಿದ್ದಾಂತ ವನ್ನು ತನ್ನ ಹರಿತವಾದ ಲೇಖನಿಯಿಂದ ಖಂಡಿಸುತ್ತಿದ್ದ ದಿಟ್ಟ ಪತ್ರಕರ್ತೆ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ರವರ ಕೊಲೆ ಖಂಡನೀಯ.
ಎಂ.ಎಂ ಕಲ್ಬುರ್ಗಿ ,ಗೌರಿ ಲಂಕೇಶ್ ರಂತವರನ್ನು ಸಾಯಿಸುವುದರ ಮೂಲಕ ಫ್ಯಾಶಿಸಂ ವಿರುದ್ಧದ ಧ್ವನಿಯನ್ನು ಇಲ್ಲವಾಗಿಸುವ ಪ್ರಯತ್ನ ನಡೆಸುತ್ತಿದ್ದಾರೆ.
ಸಂಶೋಧಕ ಕಲ್ಬುರ್ಗಿಯವರ ಹತ್ಯೆ ಯ ನೆನಪು ಮಾಸುವ ಮುನ್ನವೇ ಗೌರಿ ಲಂಕೇಶ್ ರವರನ್ನು ಕೊಂದದ್ದು ಇಲ್ಲಿನ ನ್ಯಾಯ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಯಾವುದೇ ಒತ್ತಡಗಳಿಗೆ ಮಣಿಯದೆ ರಾಜ್ಯ ಸರ್ಕಾರವು ಗೌರಿ ಲಂಕೇಶ್ ರವರ ಕೊಲೆಯ ಆರೋಪಿಗಳನ್ನು ಬಂಧಿಸುವುದರ ಜೊತೆಗೆ ಅದರ ಹಿಂದಿರುವ ಶಕ್ತಿಗಳನ್ನು ಮಟ್ಟಹಾಕಬೇಕೆಂದು ಸುನ್ನೀ ಸಾಹಿತ್ಯ ಮಂಡಳಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದೆ.
Comments
Post a Comment