Skip to main content

*-ಹಿಂಸೆಯಿಂದ ಶಾಂತಿ ಅಸಾಧ್ಯ* *-ಶರೀಅತ್ ನಿಯಮ ಹಸ್ತಕ್ಷೇಪ ಖಂಡನೀಯ;* _ಅಬೂ ಹನ್ನತ್ ಮಹಮ್ಮದ್ ಸಾಖಾಫಿ ನೆಲ್ಯಾಡಿ_

ಮುಸ್ಲಿಮರು ಇಂದು ಅತ್ಯಂತ ಸಂತೋಷದಿಂದ ಇರುವ ಈ ಸಂದರ್ಭದಲ್ಲಿ  ಬಲಿ ಪೆರುನಾಳ್ ಆಚರಣೆ ಅಂಗವಾಗಿ ಹೊಸ ಹೊಸ ಬಟ್ಟೆಗಳನ್ನ ಧರಿಸಿ ಮಸೀದಿಗಳಲ್ಲಿ ಇರುವಾಗ, ಮನೆಗಳಲ್ಲಿ ವಿಧ ವಿಧದ ಆಹಾರ ಪದಾರ್ಥಗಳನ್ನು ಮಾಡಿ, ನಮ್ಮ ಮಕ್ಕಳ ಜೊತೆ ಸ್ನೇಹಿತರ ಜೊತೆ, ಕುಟುಂಬ ಸದಸ್ಯರ ಜತೆ ಸಂತೋಷ ಹಂಚಿಕೊಳ್ಳು ಈ ಸಂದರ್ಭದಲ್ಲಿ ಲೋಕದ ವಿವಿಧ ಭಾಗಗಳಲ್ಲಿ ಪಲಸ್ಥೀನ್, ಬರ್ಮಾ ದಂತಹ ವಿವಿಧ ದೇಶಗಳಲ್ಲಿ ಮುಸ್ಲಿಮರು ಅನುಭವಿಸಿಕೊಂಡಿರುವ ಕಷ್ಟಗಳು, ದೌರ್ಜನ್ಯಗಳು, ಅತೀ ಹಿಂಸಾತ್ಮಕ ಕೃತ್ಯಗಳು ಸಾಮಾನ್ಯವಲ್ಲ, ಮುಸ್ಲಿಮರು ಎಂಬ ಏಕೈಕ ಕಾರಣಕ್ಕೆ ಮಯನ್ಮಾರ್ ಎಂಬ ನಾಡಿನಲ್ಲಿ ಬೌದ್ಧ ಧರ್ಮದ ನಾಗರಿಕರು ಮುಸ್ಲಿಮರನ್ನು ಚಿತ್ರ ಹಿಂಸೆ ನೀಡಿ ಅತೀ ಭಯಾನಕ ರೀತಿಯಲ್ಲಿ ಅನಾಗರಿಕ ರೂಪದಲ್ಲಿ ಸಾಮೂಹಿಕ ಹತ್ಯೆ ಮಾಡುತ್ತಿರುವ ಹಿಂಸಾತ್ಮಕ ಕೃತ್ಯಗಳನ್ನು ವಾರ್ತಾ ಮಾಧ್ಯಮಗಳಲ್ಲಿ ಕಾಣಲು ಸಾಧ್ಯವಾಗಿದೆ. ಕೇವಲ ಮುಸ್ಲಿಮರು ಮಯನ್ಮಾರ್ ಎಂಬ ದೇಶದಲ್ಲಿ ನಿಲ್ಲಬಾರದು ಎಂಬ ಏಕೈಕ ಕಾರಣದಿಂದ ಲೋಕದ ಮುಂದೆ ನಾವು ಶಾಂತಿಗಾಗಿ ಹೋರಾಡುವುದು, ಹಿಂಸೆಯನ್ನು ವಿರೋದಿಸುವವರಾಗಿದ್ದೇವೆ ಎಂದು ಕೂಗಿ ಹೇಳುವ ಆ ಕ್ರೂರ ಬೌದ್ಧರ ನಿಜವಾದ ಮುಖ ಲೋಕದ ಮುಂದೆ ಅನಾವರಣವಾಗಿದೆ. ಬೌದ್ಧರು ಯಾರು? ಅವರ ನಿಜವಾದ ಉದ್ದೇಶವೇನು? ಅವರ ಲಕ್ಷ್ಯವೇನು? ಎಂದು ಇದೀಗ ಲೋಕಕ್ಕೆ ಮನವರಿಕೆಯಾಗಿದೆ. ಯಾವತ್ತೂ ಆಶಾಂತಿಯಿಂದ ಶಾಂತಿಯನ್ನು ಪಡೆಯಲು ಸಾಧ್ಯವಿಲ್ಲ. ಮೂಲಭೂತ ಸೌಕರ್ಯವೂ ಇಲ್ಲದ ಅಫ್ಘಾನ್ ಎಂಬ ದೇಶದಲ್ಲಿ ಶಾಂತಿಗಾಗಿ ಬಲಿಷ್ಠವಾದ ಅಮೇರಿಕಾ ಸೇರಿದಂತೆ ವಿವಿಧ ದೇಶಗಳು ಎಲ್ಲಾ ಆಯುಧಗಳನ್ನು ಉಪಯೋಗಿಸಿಕೊಂಡು ಅಕ್ರಮಿಸಿದರೂ ಕೂಡ ಶಾಂತಿಯನ್ನು ಪಡೆಯಲು ಸಾಧ್ಯವಾಗಿಲ್ಲ. ಲೋಕದ ವಿವಿಧ ಬುದ್ಧಿ ಜೀವಿಗಳು ಹೇಳಿದ ಒಂದಾಗಿದೆ ಶಾಂತಿಯನ್ನು ಯುದ್ಧದ ಮೂಲಕ ಪಡೆಯಲು ಸಾಧ್ಯವಿಲ್ಲ, ಉಗ್ರವಾದದಿಂದಲೋ ಅಶಾಂತಿಯಿಂದಲೋ ಇಲ್ಲಿ ಶಾಂತಿ ಪಡೆಯಲು ಸಾಧ್ಯವಿಲ್ಲ ಎಂದು ನೆಲ್ಯಾಡಿ ಕೇಂದ್ರ ಜುಮ್ಮಾ ಮಸೀದಿ ಖತೀರಾದ ಅಬೂ ಹನ್ನತ್ ಮಹಮ್ಮದ್ ಸಖಾಫಿ ಹೇಳಿದರು. 

ಮುಸ್ಲಿಮರ ನಡುವೆ ಇರುವ ಅನೈಕ್ಯವೇ ಇಂತಹ ಘಟನೆಗಳು ಸಂಭವಿಸಲು ಕಾರಣ, ಮುಸ್ಲಿಮರು ನಡುವೆ ಭೀಕರತೆ, ಉಗ್ರವಾಧತ್ವ ಅಧಿಕವಾಗಿದೆ, ಇದರ ಲಾಭವನ್ನು ಇತರ ಧರ್ಮೀಯರು ಪಡೆದು ಮುಸ್ಲಿಮರಿಗೆ ತಿರುಗಿ ಬೀಳುವ ಅವಸ್ಥೆ ಎದುರಿಸುತ್ತಿದ್ದೇವೆ.

*"ವಹ್ತಸಿಮೂ ಭಿಹಬ್ಲಿಲ್ಲಾಃಹಿ ಜಮೀಹಾಃ"*
ಎಲ್ಲರೂ ಅಲ್ಲಾಹುವಿನ ತೌಹೀದಿನಲ್ಲಿ ಜೀವಿಸಿ, ಯಾರ ನಡುವೆ  ಕೂಡ ಈ ವಿಷಯದಲ್ಲಿ ಭಿನ್ನತೆ ಉಂಟಾಗಬಾರದು. ಅಲ್ಲಾಹುವಿನ ತೌಹಿದ್ ಇದಾಗಿದೆ ನಿಜವಾದ ಇಸ್ಲಾಂ, ಇದನ್ನಾಗಿದೆ ಪೈಗಬಂರ್ (ಸ.ಅ) ನಮಗೆ ತೋರಿಸಿಕೊಟ್ಟಿದ್ದು. ನಿಮಗೆ ನೀಡಿದ್ದನ್ನು ನೀವು ಮುಷ್ಟಿ ಹಿಡಿಯಿರಿ,ಇದಾಗಿದೆ ಕುರ್ಆನ್ ಹೇಳಿ ಕೊಟ್ಟಿದ್ದು ಎಂದು  ಈ ಸಂದರ್ಭ ಹೇಳಿದರು.

ನಂತರ ಮಾಡುನಾಡುತ್ತಾ ಭಾರತೀಯರಾದ ನಾವು ಹೆಚ್ಚು ಗೌರವ ಕೊಡುವ ಒಂದಾಗಿದೆ ಸುಪ್ರೀಂ ಕೋರ್ಟ್, ಆದರೆ ಜಾತ್ಯಾತೀತ ರಾಷ್ಟ್ರವಾದ ಪ್ರಜಾ ಪ್ರಬುತ್ವವಾದ ಈ ಭಾರತ ದೇಶದಲ್ಲಿ ಜೀವನ ನಡೆಸುವ ಸರ್ವ ಧರ್ಮಿಯರಿಗೂ ಅವರವರ ಮತ ಆಚರಣೆಗಳು, ಅವರವರ ಧಾರ್ಮಿಕ ವಿಧಿ ವಿಧಾನಗಳು ಅವರವರಿಗೆ ಆಚರಿಸುವ, ಎಲ್ಲಾ ಹಕ್ಕುಗಳು, ಎಲ್ಲಾ  ಪೌರತ್ವವೂ, ಇಲ್ಲಿನ ಸಂವಿಧಾನ ಕಲ್ಪಿಸಿದೆ. ಇಲ್ಲಿನ ರಾಷ್ಟ್ರಪತಿ, ಸುಪ್ರೀಂ  ಕೋರ್ಟ್, ಪಾರ್ಲಿಮೆಂಟ್ ಸಹಿತ ಎಲ್ಲರೂ ಸಮ್ಮತಿಸಿದ ನಿಯಮವಾಗಿದೆ. ಮುಸ್ಲಿಮರ ಶರೀಹತ್ ನಿಯಮಗಳಲ್ಲಿ ಒಂದಾದ ಮುತ್ತಲಾಕ್ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಖಂಡನೀಯ,ಶರೀಹತನ್ನು ದಿಕ್ಕರಿಸುವ ಯಾವುದೋ ಒಂದೆರಡು ಜನರ ಕೋರಿಕೆ  ಮೇರೆಗೆ ಶರೀಹತ್ ನಿಯವನ್ನೇ ಬದಲಾವಣೆ ಮಾಡುವುದು ಮೂರ್ಖತನದ ಪರಮಾವದಿ, ಶರೀಹತ್ ನಿಯಮವನ್ನು ದಿಕ್ಕರಿಸುವ ಶೈತಾನುಗಳು ಎಲ್ಲಾ ಮನುಷ್ಯ ವರ್ಗದಲ್ಲೂ, ಎಲ್ಲಾ ಜಿನ್ನ್ ವರ್ಗದಲ್ಲೂ ಇವೆ. ಶರೀಹತ್ ನಿಯಮ ಸೇರಿದಂತೆ ಯಾವುದೇ ಧಾರ್ಮಿಕ ನಿಯಮಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಯಾರಿಗೂ ಅವಕಾಶವಿಲ್ಲ ಎಂದು ಮುಸ್ಲಿಮರ ಪವಿತ್ರ ಹಬ್ಬದಲ್ಲಿ ಒಂದಾದ ಬಲಿ ಪೆರ್ನಾಲ್ ಸಂದೇಶ ಬಾಷಣದಲ್ಲಿ ಹೇಳಿದರು.

ನಂತರ ಮಾತನಾಡಿದ ಅವರು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಖಂಡಿಸಿದ ಅವರು ನಮ್ಮ ಸಮುದಾಯದ ಹೆಣ್ಣು ಮಕ್ಕಳ ಕುರಿತು ಹೆಚ್ಚು ಗಮನ  ಹರಿಸಬೇಕಾದ ಕಾಲಗಟ್ಟದಲ್ಲಿ ನಾವಿದ್ದೇವೆ. ಕಾಲೇಜಿಗೆ ಹೋಗುವ ಒಂದು ಬುರ್ಖಾ ಧಾರಿಣಿಯಾದ ಮುಸ್ಲಿಂ ವಿದ್ಯಾರ್ಥಿನಿ ಅನ್ಯ ಸಮುದಾಯದ ಒಬ್ಬ ವಿದ್ಯಾರ್ಥಿ ಜತೆ ಸಾರ್ವಜನಿಕ ಸೌಚಾಲಯದಲ್ಲಿ ಸಿಕ್ಕಿ ಬಿದ್ದು ಅನ್ಯ ಸಮುದಾಯದ ಜನರು ಅವರನ್ನು ವಿಡಿಯೋ ಚಿತ್ರೀಕರಣ ಮಾಡಿಸಿದ್ದು ಸಮುದಾಯದ ಗತಿಕೇಡು ಎಂದು ಹೇಳಿದರೆ ತಪ್ಪಾಗಲಾರದು. ನಮ್ಮ ಸಮುದಾಯದ ಮುಸ್ಲಿಂ ಯುವತಿಯರನ್ನು ಅಲ್ಲಾಹು ರಕ್ಷಿಸಲಿ ಎಂದು ಹೇಳಿದರು .

ವರದಿ: ರಿಯಾ ನೆಲ್ಯಾಡಿ

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.