Skip to main content

ಸುನ್ನೀ ಸಂಘ ಕುಟುಂಬದ ಕಾರ್ಯಕರ್ತರಾಗಿಯೇ ಮರಣ ಹೊಂದಿದ ಅಬ್ದುರ್ಹ್ಮಾನ್ ಕೈರಂಗಳ. ಅವರದೆಷ್ಟು ಭಾಗ್ಯವಂತರು. ✍ *_ಪಿ.ಕೆ.ಎಂ.ಉರುವಾಲು ಪದವು(KCF ರಿಯಾದ್)_*

*ಅದೊಂದು ಕಾಲವಿತ್ತು*ವಿದೇಶದಲ್ಲಿ ಯಾರಾದರು ಮರಣ ಹೊಂದಿದರೆ ಅವರ ಮಯ್ಯಿತನ್ನು ದಫನ ಮಾಡಲು ಅಥವಾ ಊರಿಗೆ ಕಳುಹಿಸಲು ವಾರಗಟ್ಟಲೇ , ತಿಂಗಳುಗಳೇ ಸರಿದು ಹೋಗುತ್ತಿತ್ತು,ಕಫೀಲ್(ಸ್ಪೋನ್ಸರ್) ಮನಸ್ಸು ಮಾಡಿದರೆ ಮಾತ್ರ ಮರಣದ ವರದಿಗಳು,ಮರಣೋತ್ತರ ಕ್ರಿಯೆಗಳು ಎಲ್ಲವೂ ಪೂರ್ಣ ಗೊಳ್ಳುತ್ತಿತ್ತು,ಇಲ್ಲವಾದರೆ ತಿಂಗಳುಗಟ್ಟಲೆ ಮಯ್ಯಿತನ್ನು ಹಾಸ್ಪಿಟಲಿನ 'ತ್ಸಲ್ಲಾಜೆ(ಪ್ರೀಝರ್)ನಲ್ಲಿ ಇರಿಸಲಾಗುತ್ತಿತ್ತು.ಅದಕ್ಕೆ ಕಾರಣವು ಇತ್ತು ಕೆಲವೊಮ್ಮೆ ಮರಣ ಹೊಂದಿದ ವ್ಯಕ್ತಿಗೆ ಅವರ ಒಂದಿಬ್ಬರು ರೂಮಿನ ಅಥವಾ ಪಕ್ಕದ ರೂಮಿನ  ಸ್ನೇಹಿತರು ಬಿಟ್ಟರೆ ಅವರ ಮರಣೋತ್ತರ ಪ್ರಕ್ರಿಯೆಗಳನ್ನು ತ್ವರಿತ ಗತಿಯಲ್ಲಿ ಪೂರೈಸಿ ದಫನ ಮಾಡಲೋ,ವಾರಿಸುದಾರರಿಗೆ ಒಪ್ಪಿಸಲೋ ಯಾರು ಇರುತ್ತಿರಲಿಲ್ಲ.
ಆದರೆ,
*ಕಾಲ ಬದಲಾಗಿದೆ.*ಈಗ ಪ್ರವಾಸಿಯಾಗಿದ್ದು ಕೊಂಡೇ ತನ್ನ ಕೆಲಸ ಚಟುವಟಿಕೆಗಳಲ್ಲಿ ತೊಡಗಿರುವಾಗಲೇ ,ಕೆಲವೊಮ್ಮೆ ಅಪಘಾತ ಇನ್ನು ಕೆಲವೊಮ್ಮೆ ಹೃದಯ ಘಾತ ವೆಂಬ ಹೇಳ ತಕ್ಕಂತಹಾ ಕಾರಣಗಳಿಂದ(ಅಲ್ಲಾಹು ನಮ್ಮೆಲ್ಲರನ್ನು ಕಾಪಾಡಲಿ)ಅಲ್ಲಾಹನ ಅನುಲ್ಲಂಘನೀಯ ಕರೆಗೆ ಓ ಗೊಟ್ಟರೆ ಅವರ ಮರಣೋತ್ತರ ವಿಧಿ ವಿದಾನಗಳನ್ನು ಶೀಘ್ರಗತಿಯಲ್ಲಿ ಶಿಸ್ತು ಬದ್ದವಾಗಿ ಪೂರೈಸಲು  *ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆ.ಸಿ.ಎಫ್)*ಎಂಬ ಸುನ್ನೀ ಸಂಘಟನೆ ಬೆಳೆದು ನಿಂತಿದೆ.
ಅಲ್ ಹಮ್ದುಲಿಲ್ಲಾಹ್..

ಅದಕ್ಕೆ ತಾಜಾ ಉದಾಹರಣೆಯೇ ಕಳೆದು ಆರು ದಿನಗಳ ಹಿಂದಡ  ಹೃದಯಘಾತದಿಂದ ಸೌದಿ ಅರೇಬಿಯಾ ರಿಯಾದ್ನಲ್ಲಿ ಮರಣ ಹೊಂದಿದ 'ಅಶ್ರಫ್ ,ಪಾರೆ ಮತ್ತು ಕೆ.ಸಿ.ಎಫ್' ಅಲ್ -ಹಸ್ಸ ಸೆಕ್ಟರ್ ಕೋಶಾಧಿಕಾರಿಯು,ಹಲವು ಸುನ್ನೀ ಸಂಘ ಕುಟುಂಬದ ನೇತಾರರು ಆದ 'ಅಬ್ದುರ್ಹ್ಮಾನ್,ಕೈರಂಗಳ ಅವರ ದಫನ ಕಾರ್ಯಗಳನ್ನು ವಾರಗಟ್ಟಲೇ ಅಥವಾ ತಿಂಗಳು ಗಟ್ಟಲೆ ಹಾಸ್ಪಿಟಲ್ ನಲ್ಲಿ ಇಡದೇ ಮರಣ ಹೊಂದಿ ಮೂರೇ ದಿನಗಳಲ್ಲಿ ಎಲ್ಲಾ ಚಟುವಟಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಧನ್ಯ ಭಾವದೊಂದಿಗೆ ಕೆ.ಸಿ.ಎಫ್.ನಾಯಕರು ಮತ್ತು ಕಾರ್ಯಕರ್ತರು'.

ಅಬ್ದುರ್ಹ್ಮಾನ್,ಕೈರಂಗಳ ಅವರೇ,ತಾವು ಭಾಗ್ಯವಂತರು-ಕಳೆದ ಹಲವು ವರ್ಷಗಳಿಂದ ಕುಟುಂಬ ಪೋಷಣೆಯ ದೊಡ್ಡ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ಮರುಭೂಮಿಯ ಬೀಸಿ ಬರುವ  ಚಳಿಗೂ,ಸುಟ್ಟು ಕರಕಲಾಗುವಂತಹ ಬಿಸಿಲನ್ನು ಲೆಕ್ಕಿಸದೇ ಹಗಳಿರುಲೆನ್ನದೇ ದುಡಿಯವಾಗ   ಅದಕ್ಕೆ ಅಲ್ಲಾಹನ ಬಳಿ ಇರುವ ಪ್ರತಿಫಲ ಅಪಾರ.

ಸಮಯವಿಲ್ಲದ ಕೆಲಸದ ಮಧ್ಯೆ ,ಸಮಯ ಮಾಡಿಕೊಂಡು ಸುನ್ನತ್ ಜಮಾಅತ್ತಿಗಾಗಿ,ದೀನಿ ಸಂಘಟನೆಗಾಗಿ ಕಾರ್ಯಚರಿಸಿದ ಫಲವೇ ತಮ್ಮ ಮರಣದ ಸಮಯ ಜಗತ್ತು ನೋಡುತ್ತಿದೆ.

ಹೌದು! ತಮ್ಮ ಅಕಾಲಿಕ ಮರಣವು ಕಾಡ್ಗಿಚ್ಚಿನಂತೆ  ಹರಡಿದಾಗ,ಅವರಾರು ತಮ್ಮನ್ನು ನೋಡಿದವರಾಗಿರಲಿಲ್ಲ. ಅವರ್ಯಾರಿಗೂ ತಮ್ಮ ಪರಿಚಯ ವಿರಲಿಲ್ಲ,ಅವರೆಲ್ಲರೂ ತಮ್ಮ ಮರಣ ವಾರ್ತೆ ಕೇಳಿ ದುಃಖಿತರಾದರು. ನಿಮ್ಮ ಮೇಲೆ ಯಾಸೀನ್ ಓದಿದರು ನಿಮ್ಮ ಮೇಲೆ ಖತಮುಲ್ ಕುರ್ಆನ್ ಪಠಿಸಿದರು,ಪಠಿಸುತ್ತಿರುವರು ನಿಮ್ಮ ಹೆಸರಲ್ಲಿ ತಹ್ಲೀಲ್ ಯುನಿಟ್ ಮಟ್ಟದಲ್ಲಿ,ಸೆಕ್ಟರ್ ಮಟ್ಟದಲ್ಲಿ ,ಝೋನ್,ಹೀಗೆ ವಿವಿಧ ಘಟಕಗಳಲ್ಲಿ ತಹ್ಲೀಲ್ ಸಮರ್ಪಣೆ ನಡೆಸಿದರು.ನಡೆಸುತ್ತಿರುವರು ಕಾರಣ ವೇನಂದರೆ ತಾವೋಬ್ಬ 'ಕೆ.ಸಿ.ಎಫ್.ನ ಕಾರ್ಯಕರ್ತರಾಗಿದ್ದ,ಎಸ್.ಎಸ್.ಎಫ್.ನ ಕಾರ್ಯಕರ್ತರಾದ ಸುನ್ನೀ ಸಂಘ ಕುಟುಂಬದ ಕಾರ್ಯಕರ್ತನಾದ ಏಕೈಕ ಕಾರಣದಿಂದ.ಅಲ್ಲಾಹು ಎಲ್ಲವೂ ಖಬೂಲ್ ಮಾಡಲಿ-ಆಮೀನ್.

ಮಾತ್ರವಲ್ಲ ಮರುಭೂಮಿಯ ಮಣ್ಣಿನಲ್ಲಿ ತಮ್ಮನ್ನು ದಫನ ಮಾಡಿದರು,ನೂರಾರು ಕೆ.ಸಿ.ಎಫ್.ನ ನಾಯಕರು ಕಾರ್ಯಕರ್ತರು ಸೇರಿ ಮಯ್ಯಿತ್ ಸ್ನಾನದಿಂದ ಹಿಡಿದು ,ಜನಾಝ ನಮಾಝ್,ದಫನ್ ಕಾರ್ಯ, ತಲ್ಕೀನ್,ದುವಾಃ ಎಲ್ಲವನ್ನೂ ಅಚ್ಚು ಕಟ್ಟಾಗಿ ಮುಗಿಸಿದ್ದಾರೆ.

ಕೆ.ಸಿ.ಎಫ್.ಕಳೆದ ಐದು ವರ್ಷಗಳಿಂದ ಜಿ.ಸಿ.ಸಿ ರಾಷ್ಟ್ರಗಳ ಸಹಿತ ಲಂಡನ್,ಮಲೇಷ್ಯಾ,ಸಹಿತ ವಿದೇಶ ಮಣ್ಣಿನಲ್ಲಿ ಸುಮಾರು 10 ಸಾವಿರಕ್ಕಿಂತಲೂ ಹೆಚ್ಚು ಕಾರ್ಯಕರ್ತರನ್ನೊಳಗೊಂಡ ಕನ್ನಡದ ಏಕೈಕ ಅಭಿಮಾನ ಸಂಘಟನೆ.

ಹಲವಾರು ಚಾರಿಟಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದರು,ಮುಖ್ಯವಾಗಿ ಸಾಂತ್ವನ ವಿಭಾಗದಲ್ಲಿ ಹೆಚ್ಚಿನ ಚಟುವಟಿಕಗಳನ್ನು ಮಾಡುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಎಲ್ಲೆಲ್ಲೋ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಟ್ಟುಗೂಡಿಸಿ ಸಂಘಟಿಸಿದ ಹೆಮ್ಮೆ ಕೆ.ಸಿ.ಎಫ್.ಗೆ ಸಲ್ಲುತ್ತದೆ.ಎಲ್ಲಿಯಾದರು ಕನ್ನಡಿಗರಿಗೆ ಏನಾದರು ಸಂಭವಿಸಿದರೆ,ಯಾರಾದರು ಕೆಲಸದ ಅಥವಾ ಕಫೀಲ್ ನ ಕಿರುಕುಳದಿಂದ ಯಾತನೆ ಅನುಭವಿಸುತ್ತಿದ್ದರೆ ತಕ್ಷಣವೇ ಮಧ್ಯ ಪ್ರವೇಶಿಸಿ ಇತ್ಯರ್ಥ ಗೊಳಿಸುವುದು,ಅಪಘಾತ ಅಥವಾ ಮರಣ ಸಂಭವಿಸಿದ ಏನಾದರು ಸಂದೇಶ ಸಿಕ್ಕಿದರೆ ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಬೇಕಾದ ವ್ಯವಸ್ಥೆ ಮಾಡಿ ಕೊಡುವುದು,ಹೀಗೆ ಹತ್ತು ಹಲವು ಸಂಕಷ್ಟಗಳಿಗೆ ಪರಿಹಾರ ಕೆ.ಸಿ.ಎಫ್. ನ ಮೂಲಕ ಆಗುತ್ತಿರುವುದು ನಗ್ನ ಸತ್ಯ.

ಮರ್ಹೂಂ ಅಬ್ದುರ್ಹ್ಮಾನ್ ಕೈರಂಗಳ ಅವರ ವಿಯೋಗವು ಕೆ.ಸಿ.ಎಫ್.ಸಹಿತ ಸುನ್ನತ್ ಜಮಾಅತ್ತಿಗೆ ತುಂಬಲಾರದ ನಷ್ಟ.
ಅಲ್ಲಾಹು ಅಬ್ದುರ್ಹ್ಮಾನ್ ಹಾಗೂ ಅಶ್ರಫ್ ಅವರ ಖಬ್ರ್ ಸ್ವರ್ಗೀಯ ಮಯ ಗೊಳಿಸಲಿ,ಅವರ ಕುಟುಂಬಕ್ಕೆ ದುಃಖವನ್ನು ತಡೆಯುವ ಶಕ್ತಿಯನ್ನು ಅಲ್ಲಾಹು ದಯಪಾಲಿಸಲಿ,ಅವರ ದಫನ ಕಾರ್ಯ ಚಟುವಟಿಕೆಯನ್ನು ಬೇಗನೆ ಮುಗಿಸಿದ,ಅವರ ಪರಲೋಕ ಮೋಕ್ಷಕ್ಕಾಗಿ ಖುರ್ಆನ್ ಓದಿ,ತಹ್ಲೀಲ್ ಪಠಿಸಿ ಪ್ರಾರ್ಥಿಸಿದ ಎಲ್ಲಾ ಕೆ.ಸಿ.ಎಫ್.ನ ಎಲ್ಲಾ ನಾಯಕರಿಗೆ ಕಾರ್ಯಕರ್ತರಿಗೆ  ಅರ್ಹವಾದ ಪ್ರತಿಫಲ ಅಲ್ಲಾಹು ಕರುಣಿಸಲಿ-ಆಮೀನ್.

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.