*ಊರಿನ ಅಭಿವೃದ್ಧಿಯೊಂದಿಗೆ ಕೈ ಜೋಡಿಸುತ್ತಿರುವ ಸಂಘಟನೆಗಿಂದು ಮೂರರ ಸಂಭ್ರಮ.!!*
ಕಳೆದೆರಡು ವರ್ಷಗಳ ಮೊದಲು ತೆಕ್ಕಾರು ಜಮಾಅತಿನ ಪ್ರವಾಸಿಗಳ ಪರಿಶ್ರಮ ಫಲವಾಗಿ ಉದಯಿಸಿದ ಗಲ್ಫ್ ಪ್ರೆಂಡ್ಸ್ ತೆಕ್ಕಾರು ಸಮಿತಿಯು ಎರಡು ನೇ ವರ್ಷವು ಪೂರೈಸಿ ಮೂರನೇ ವರ್ಷದತ್ತ ಹೆಜ್ಜೆಯನ್ನಿರಿಸಿತು ಅಲ್ ಹಮ್ಮುದುಲಿಲ್ಲಾ*..
*👉 ರಚನೆಯ ಉದ್ದೇಶ*
*"ಯದುಲ್ಲಾಹಿ ಅಲಲ್ ಜಮಅ" ಎಂಬ ವಾಕ್ಯದೊಂದಿಗೆ ಮುಂದೆ ಸಾಗುವ*.....
ನಮ್ಮ ಜಮಾಅತಿನ ಪ್ರವಾಸಿಗಳೆಲ್ಲರೂ ಕೂಡ ಸುನ್ನತ್ ಜಮಾಅತಿನKCF ಸಂಘಟನೆಯಲ್ಲಿ ಸದಸ್ಯರಾಗಿಯೂ,ಸಂಘಟನಾ ನಾಯಕರಾಗಿಯೂ ,ನಿರತರಗಿದ್ದಾರೆ ಸಂಘಟನೆ ಮತ್ತು ಸ್ಥಾಪನೆಗಳ ಮೂಲಕ ಜೀವ ಕಾರುಣ್ಯ ಕಾರ್ಯಕ್ರಮಗಳು ಜಿಲ್ಲೆಯ ಪಟ್ಟಣ ಗ್ರಾಮವಲ್ಲದೆ ನೆರೆಯ ಕೇರಳಕ್ಕೂ ವಿಸ್ತರಿಸಿ ಸದಾ ದುಆವನ್ನು ಪಡೆಯುತ್ತಿರುವಾಗ ನಮ್ಮ ಜಮಾಅತಿಗೆ ಸೀಮಿತವಾಗಿ ನಮಗೂ ಜಮಾಅತಿನ ಎಲ್ಲಾ ಪ್ರವಾಸಿಗಳನ್ನು ಒಟ್ಟುಗೂಡಿಸಿ ನಮ್ಮಿಂದಾಗುವ ರೀತಿಯಲ್ಲಿ ಜೀವ ಕಾರುಣ್ಯವನ್ನು ಮಾಡುವುದರ ಮೂಲಕ ನಮ್ಮ ಜಮಾಅತಿನವರಿಂದಲೂ ದುಆವೆಂದ ಪ್ರತಿಫಲವನ್ನು ಪಡೆಯುವ ಎಂಬ ಉದ್ದೇಶವನ್ನು ಇಟ್ಟು ವಾಟ್ಸಪ್ ನಲ್ಲಿ ಒಟ್ಟಾಗುವೆಂದು ನಿರ್ಧರಿಸಿ ,ಕಳೆದೆರಡು ವರ್ಷಗಳ ಮೊದಲು "ಗಲ್ಫ್ ಪ್ರೆಂಡ್ಸ್ ತೆಕ್ಕಾರೆಂಬ" ಹೆಸರನಿಟ್ಟು ಸದಸ್ಯರ ಒಪ್ಪಿಗೆಯನ್ನು ಪಡೆದು ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿ ವಾಟ್ಸಪ್ ಗ್ರೂಪಿನ ಮೂಲಕ *ಯದುಲ್ಲಾಹಿ ಅಲಲ್ ಜಮಅ* ಎಂಬ ದ್ಯೇಯ ವಾಕ್ಯವನ್ನು ಸದಸ್ಯರ ಮುಂದಿಟ್ಟು ಅದರ ಅರ್ಥವನ್ನು ಕೂಡ ಮನದಟ್ಟು ಮಾಡಿ ಆರಂಬಿಸಿದೆವು.....
*👉 ವಾಟ್ಸಪ್ ದೂತನ ಆಯ್ಕೆಯ ರಹಸ್ಯ*
ವಾಟ್ಸಪ್ ಮೂಲಕ ಯುವಕರು ದಾರಿ ತಪ್ಪಿ ಕೆಡುಕಿನ ದಾರಿಯನ್ನು ಆಯ್ಕೆ ಮಾಡುತ್ತಾರೆಂಬ ಮಾತು ಚಾಲ್ತಿಯಲ್ಲಿರುವಾಗ ತೆಕ್ಕಾರಿನ ಪ್ರವಾಸಿಗಳು ಗಲ್ಫ್ ಪ್ರೆಂಡ್ಸ್ ಎಂಬ ಸಂಘಟನೆಯನ್ನು ವಾಟ್ಸಪ್ ಮೂಲಕ ರಚಿಸಿಕೊಂಡು ಜಮಾತಿನ ಅರ್ಹ ಬಡವರ ಹೆಣ್ಣು ಮಕ್ಕಳ ಮದುವೆಗೆ ಸಹಾಯ ,ಪ್ರತಿ ತಿಂಗಳು ನಾರಿಯತ್ ಸ್ವಲಾತ್ ಹಾಗೂ ಇನ್ನಿತರ ಹಲವು ಜೀವ ಕಾರುಣ್ಯ ಕೆಲಸವನ್ನು ಸಂಘಟನೆಯ ಉಲಮಾಗಳ ನೇತ್ವತ್ರದಲ್ಲಿ ಮಾಡುತ್ತಾ
ಒಳಿತಿನ ದಾರಿಯು ಇದೆಯೆಂಬ ಸಂದೇಶವನ್ನು ನೀಡಿದೆವು.
*👉ವಾಟ್ಸಪ್ ಗ್ರೂಪಿಗೆ ನಿಯಮಗಳೇಕೆ*
ವಾಟ್ಸಪ್ ಗ್ರೂಪೊಂದು ರಚನೆಯಾದರೆ ಬ್ರೇಕಿಲ್ಲದಂತೆ ಬರುವ ಅನಾವಶ್ಯ ಮೆಸೇಜ್ ,ಪೋಟೋ ,ವಿಡಿಯೊ ,ವಾಯಿಸ್ ಚಾಟಿಂಗ್ ಸಾಮಾನ್ಯ .ಹಾಗಾದರೆ ಅದು ಕೆಡುಕಿನ ದಾರಿಯೆಂದು ಚಿಂತಿಸುತ್ತಾ ನಮಗೆ ಒಳಿತಿನ ದಾರಿಯಾಗಬೇಕು ಪರಲೋಕ ವಿಜಯಕ್ಕೆ,ಇದೆಲ್ಲವನ್ನು ಮನಗೊಂಡು ಗಲ್ಫ್ ಪ್ರೆಂಡ್ಸ್ ತೆಕ್ಕಾರು ಗ್ರೂಪಿನಲ್ಲಿ ಇಸ್ಲಾಂ ವಿರೋದಿಸಿದ ಯಾವುದಕ್ಕೂ ಅವಕಾಶವಿಲ್ಲದೆ ಕೇವಲ ಜಮಾಅತಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮಾತ್ರವೇ ಸೀಮೀತವಾಗಿರಬೇಕೆಂದು ಸರ್ವ ಸದಸ್ಯರ ಅಭಿಪ್ರಾಯವನ್ನು ಪರಿಗಣಿಸಿ ಕಟ್ಟುನಿಟ್ಟಿನ ನಿಯಮವನ್ನು ಮಾಡಿದ ಪರಿಣಾಮ ಯಶಸ್ವಿಯಾಯಿತು .
*👉ಬಡವರ ಕಣ್ಣೀರನ್ನು ಒರೆಸುವ ಮೂಲಕ ಸಂಘಟನೆಯನ್ನು ಎದುರಿಸುವವರು ಕೂಡ ನಮ್ಮ ಮಿತ್ರರಾಗಬೇಕು*
ಸಹಜವಾಗಿಯೆ ಸಂಘಟನೆಗಳು ಸಮಿತಿಗಳು ರಚನೆಯಾಗುವಾಗ ಹಲವು ಟೀಕೆ ಟಿಪ್ಪಣಿಗಳು ಸಹಜ. ಇವೆಲ್ಲವನ್ನು ಸಂಘಟನಾ ನಾಯಕರ ಸಲಹೆಯಂತೆ ನಗು ಮುಖದಿಂದಲೇ ಸ್ವೀಕರಿಸುತ್ತಾ ಮುಂದೆ ಸಾಗುವಾಗ, ವಿರೋದಿಸುವವರು ಸಲಹೆಗಳನ್ನು ನೀಡಿ ಸಹಕರಿಸುತ್ತಾರೆಂಬ ವಿಶ್ವಾಸವು ಸಂಘಟನೆಗಿತ್ತು. ಪ್ರವಾಸಿಗಳಿಗೆಲ್ಲರಿಗೂ ಪ್ರತಿ ತಿಂಗಳು ಕೂಡ ಕಠಿಣವಾದ ಪ್ರಯಾಸವಿದೆ .ನಿಭಾಯಿಸಲು ಕೂಡ ಅಸಾದ್ಯವಾಗುತ್ತದೆ .ಇಂತಹ ಕಠಿಣವಾದ ಪರಿಸ್ಥಿತಿಯಲ್ಲಿಯೂ ಕೂಡ ಮುಂದಿನ ವರ್ಷಗಳಲ್ಲಿ ಇನ್ನೂ ಕೂಡ ಹಲವಾರು ಜೀವ ಕಾರುಣ್ಯವಾದ ಕೆಲಸಗಳನ್ನು ಮಾಡಬೇಕೆಂದು ಮನದ ಹಂಬಲವನ್ನು ಕಾರ್ಯರೂಪಕ್ಕೆ ತರಬೇಕಾದರೆ
*ಊರಿನ ಉಲಮಾ ಉಮರಾ ನಾಯಕರ ದುಆವು ಸಲಹೆಗಳು ಸದಾ ಇರಬೇಕು*
*👉ಮುಚ್ಚು ಮರೆಯಿಲ್ಲದೆ ತೆರೆದ ಪುಟದಲ್ಲಿ ದಾಖಲು*
ಸಂಘಟನೆಯು ಕಳೆದೆರಡು ವರ್ಷಗಳಲ್ಲಿ ಮಾಡಿದ ಜೀವಕಾರುಣ್ಯ ಕೆಲಸಗಳು ಊರಿನ ಉಲಮಾ ಉಮರಾಗಳ ಸಮ್ಮುಖದಲ್ಲಿ ತೆರೆದ ಪುಟದಲ್ಲಿ ದಾಖಲಾಗಿದೆ.
*👉ಸಂಘಟನೆಗೂ ಸದಸ್ಯರಿಗೂ ಆರಂಭ ಸೂರತ್ವ ಸೂತ್ರವಿಲ್ಲ.*
ಗಲ್ಪ್ ಪ್ರೆಂಡ್ಸ್ ತೆಕ್ಕಾರು ಸಂಘಟನೆಗೆ ಆರಂಬ ಸೂತ್ರವಿಲ್ಲದೆ ಆರಾಮವಾಗಿ ಸಾಗುತಿದೆ .ಇಷ್ಟೊಂದು ಯಶಸ್ವಿಯಾಗಿ ಮುಂದುವರಿಲು ಸದಸ್ಯರಿಗೆ ಆರಂಬ ಸೂತ್ರ ಸಹಕರಣೆಯಾಗಿದೆ ಪ್ರಮುಖ ಕಾರಣ .ಮುಂದಿನ ದಿನಗಳಲ್ಲಿಯೂ ಕೂಡ ಇದನ್ನೇ ಸಂಘಟನೆಯ ಸದಸ್ಯರಿಂದ ಬಯಸುತಿದೆ .ಆ ನಿಟ್ಟಿನಲ್ಲಿ ಜಮಾಅತಿನಿಂದ ಹೊಸದಾಗಿ ಬಂದಿರುವ ಸದಸ್ಯರು ಮತ್ತು ಗೌರವಾನಿತ್ವ ಹಿರಿಯ ಕಿರಿಯ ಹಾಲಿ ಸದಸ್ಯರು ಕೈ ಜೋಡಿಸಿ ಸಹಕರಿಸುತ್ತಾ ಇನ್ನಷ್ಟು ಜೀವಕಾರುಣ್ಯ ಕಾರ್ಯಕ್ರಮಗಳನ್ನು ಮಾಡುತ್ತಾ ಸಂಘಟನೆಯನ್ನು ಬಲಪಡಿಬೇಕೆಂದು ಮನವಿ.
*👉ನಿಯಮ ಪಾಲನೆ*
ಸಂಘಟನೆ ನಿಯಮದಂತೆ ಇದೇ ಮುಹರ‍್ರಂ ತಿಂಗಳಲ್ಲಿ ಈ ವರ್ಷದ ವಾರ್ಷಿಕ ಖರ್ಚು ವೆಚ್ಚಗಳ ವಿವರ ಸದಸ್ಯರೊಂದಿಗೆ ಹಂಚಿಕೆ ಮಾಡಿ ,ಸಮಿತಿಯ ಮುಂದಿನ ಏಳಿಗೆಗಾಗಿ ಚರ್ಚಾ ಕೂಟದಲ್ಲಿ ಬಾಗಿಯಾಗಿ ,ಸದಸ್ಯರ ಬಹು ಮಖ್ಯ ಸಲಹೆಗಳು ಇವೆಲ್ಲವೂ ಅತ್ಯಗತ್ಯವಾಗಿದೆ .ಸಂಘಟನೆಯ ಯಶಸ್ವಿಗಾಗಿ ತಾವೆಲ್ಲರೂ ನಮಗೆಲ್ಲ ದುಆ ಮತ್ತು ಸಹಲೆಗಳನ್ನು ನೀಡಿ ಸಹಕರಿಸಬೇಕು.
*👇ಒಳಿತಿನೆಡೆಗೆ ಸಾಗುವ*
*ಖಂಡಿತವಾಗಿಯೂ ನಿಮ್ಮ ಪ್ರತಿ ಚಟುವಟಿಕೆಗಳ ಬಗ್ಗೆಯೂ ಅಲ್ಲಾಹನು ವಿಚಾರಣೆಗೈಯ್ಯುತ್ತಾನೆ. ಒಬ್ಬ ಮತ್ತೊಬ್ಬನ ವಸ್ತ್ರವನ್ನು ಸ್ಪರ್ಶಿಸಿದರೂ ಅದರ ಬಗ್ಗೆ ವಿಚಾರಣೆಯಿದೆ*
*ಕಳೆದೆರಡು ವರ್ಷಗಳಲ್ಲಿ ಸಲಹೆ ಸಹಕರಣೆಯನ್ನು ನೀಡಿ ಸಹಕರಿಸಿದವರಿಗೆ ಅಭಿನಂದನೆಯನ್ನು ಸಲ್ಲಿಸುತ್ತಾ ಅಲ್ಲಾಹು ನಮ್ಮೆಲ್ಲರ ಖೈರಾದ ಸೇವೆಗಳನ್ನು ಸ್ವೀಕರಿಸಲಿ (ಆಮೀನ್)*
*ನಾವೆಲ್ಲರೂ ಒಳಿತನ್ನು ಬಯಸುತ್ತಾ ಪರಸ್ಪರ ಕೈ ಜೋಡಿಸಿ ಮುದುವರಿಯಲು ಅಲ್ಲಾಹು ತೌಫೀಕ್ ನೀಡಿ ಅನುಗ್ರಹಿಸಲೀ (ಆಮೀನ್)*
*B.T.ಅಸ್ರಪ್ ಲೆತ್ವೀಪಿ ತೆಕ್ಕಾರ್*
*ಪ್ರದಾನ ಕಾರ್ಯದರ್ಶಿ ಗಲ್ಪ್ ಪ್ರೆಂಡ್ಸ್ ತೆಕ್ಕಾರ್*
Comments
Post a Comment