*ಹಜ್ಜಾಜಿಗಳಿಗಳ ಸೇವೆಗೈದು ಧನ್ಯ ಭಾವದೊಂದಿಗೆ ಮರಳಿದ ಕೆ.ಸಿ.ಎಫ್.ರಬುವ ಸೆಕ್ಟರ್ ನ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ದಿನಾಂಕ22/9/2017 ಶುಕ್ರವಾರ 'ರಬುವ ದಾರುಲ್ ಫಲಾಹ್ ನಲ್ಲಿ ನಡೆಯಿತು.*
*ಸೆಕ್ಟರ್ ಅಧ್ಯಕ್ಷರಾದ ಸಿರಾಜುದ್ದೀನ್ ವಳಾಲ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಕೆ.ಸಿ.ಎಫ್.ರಬುವ ಪ್ರಧಾನ ಕಾರ್ಯದರ್ಶಿ ಪಿ.ಕೆ.ಎಂ.ಹನೀಫ್ ಉರುವಾಲು ಪದವು ಸಭೆಯನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.*
*ನಂತರ HVC ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ಝೋನಲ್ ನಿಂದ ಆಗಮಿಸಿದ ನಾಯಕರ ಸಮ್ಮುಖದಲ್ಲಿ ನಡೆಯಿತು.*
*ಬಳಿಕ 'ಕೆ.ಸಿ'ಎಫ್ ಮತ್ತು ಕೆ.ಸಿ ಎಫ್.ನಿಂದಾದ ಬದಲಾವಣೆ'ಕುರಿತಾಗಿ ರಿಯಾದ್ ಝೋನ್ ಅಧ್ಯಕ್ಷರಾದ ಹನೀಫ್ ಬೆಳ್ಳಾರೆ* *ಮುಖ್ಯ ಪ್ರಭಾಷಣ ಮಾಡಿದರು'*
*HVC ರಿಯಾದ್ ಚೆಯರ್ಮ್ಯಾನ್ ಹಂಝ ಮೈಂದಾಳ* *ಮಾತನಾಡಿ ' ಯಾವ ಸಂದ್ದಿಗ್ಧತೆಯಲ್ಲೂ ನಾವು ನಮ್ಮ ಆದರ್ಶವನ್ನು ಕೈ ಬಿಡಬಾರದೆಂದು'ಕಾರ್ಯಕರ್ತರಿಗೆ ಕಿವಿ ಮಾತು ನೀಡಿದರು.*
*ಅದೇ ರೀತಿ ಇತ್ತೀಚೆಗೆ ನಡೆದ 'ಅಸ್ಸುಫ್ಫ ತರಗತಿ ಕಿರು ಪರೀಕ್ಷೆಯಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಪಡೆದ ಸಂಶುದ್ದೀನ್ ಉಜಿರೆ ಅವರಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು*
*ಝೋನಲ್ ನಿಂದ ಆಗಮಿಸಿದ ಝೋನ್ ನಿರ್ವಾಹಕ ಕಾರ್ಯದರ್ಶಿ ಶಮೀರ್ ಜೆಪ್ಪು,ರಮೀಝ್ ಕುಳಾಯಿ,ಹಸೈನಾರ್ ಕಾಟಿಪಳ್ಳ ಮಾತನಾಡಿ ಶುಭ ಹಾರೈಸಿದರು.*
*ಸತತ ಮೂರನೇ ಭಾರಿಯು HVC ಯಲ್ಲಿ ಕೆ.ಸಿ.ಎಫ್.ಗೆ ಅಭಿನಂದನಾ ಪತ್ರ ಸಿಕ್ಕಿದ್ದು,ಇದಕ್ಕಾಗಿ ಯಶಸ್ವಿ ಕಾರ್ಯಚರಣೆ ಮೂಲಕ ರಿಯಾದ್ ಝೋನ್ ಕಾರ್ಯಕರ್ತರನ್ನು ಸಂಘಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದ 'HVC ಚೆಯರ್ಮ್ಯಾನ್ ಹಂಝ ಮೈಂದಾಳ' ಅವರನ್ನು ಕೆ.ಸಿ.ಎಫ್.ರಬುವ ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು.*
*ಅಸ್ಸುಫ್ಫ ಪ್ರಾದ್ಯಾಪಕರಾದ ಇಸ್ಮಾಯಿಲ್* *ಮದನಿ ,ಒಕ್ಕೆತ್ತೂರು*
' *ಮುಹರ್ರಂ ತಿಂಗಳ ವಿಷೇಶತೆ'* *ಕುರಿತು'ಮಾತನಾಡಿದರು.*
*ಕೊನೆಯಲ್ಲಿ ಇತ್ತೀಚೆಗೆ ಹೃದಯಗಾತದಿಂದ ರಿಯಾದ್ನಲ್ಲಿ ಮರಣ ಹೊಂದಿದ 'ಅಶ್ರಫ್,ಪಾರೆ'ಅವರ ಹೆಸರಲ್ಲಿ ಕಾರ್ಯಕರ್ತರು ಓದಿದ 3 ಖತಂ ಹಾಗೂ ತಹ್ಲೀಲ್ ಸಮರ್ಪಣೆ ಗೈದು ಪ್ರಾರ್ಥಿಸಲಾಯಿತು.*
Comments
Post a Comment