ಮರ್ಕಝ್ ರೂಬಿ ಜುಬಿಲೀ ಸ್ವಾಗತ ಸಮಿತಿ ರಚನೆ ಹಾಗೂ ಸಖಾಫಿ ಕೌನ್ಸಿಲ್ ಮಹಾಸಭೆ : ಸಪ್ಟೆಂಬರ್4 ಸೋಮವಾರ ನೇರಳಕಟ್ಟೆ ಹಾಲ್ ನಲ್ಲಿ
ವಿಶ್ವ ವಿಖ್ಯಾತ ಶೈಕ್ಷಣಿಕ ಕೇಂದ್ರ ಕೋಝಿಕೋಡ್ - ಕಾರಂದೂರ್ ಮರ್ಕಝು ಸ್ಸಖಾಫತಿ ಸ್ಸುನ್ನಿಯ್ಯ ಇದರ ನಲವತ್ತನೇ ವಾರ್ಷಿಕ ಸಮ್ಮೇಳನ ( ರೂಬಿ ಜುಬಿಲಿ ) ಹಾಗೂ ಸನದ್ ದಾನ ಸಮಾರಂಭ 2018 ಜನವರಿ ಮೊದಲ ವಾರ ನಡೆಯಲಿದ್ದು, ಅದರ ಕರ್ನಾಟಕ *ರಾಜ್ಯ ಮಟ್ಟದ ಪ್ರಚಾರ ಸಮಿತಿ ರಚನೆ ಮತ್ತು ರಾಜ್ಯ ಸಖಾಫಿ ಕೌನ್ಸಿಲ್ ಮಹಾಸಭೆಯು ಸಪ್ಟೆಂಬರ್ ನಾಲ್ಕು ಸೋಮವಾರ ಬೆಳಗ್ಗೆ ಹತ್ತು ಗಂಟೆಗೆ ಮಾಣಿ ನೇರಳಕಟ್ಟೆ ಇಂಡಿಯನ್ ಆಡಿಟೋರಿಯಂನಲ್ಲಿ, ಮರ್ಹೂಂ ಕೊಡಾಜೆ ಸುಲ್ತಾನ್ ಹಾಜಿ ವೇದಿಕೆಯಲ್ಲಿ ನಡೆಯಲಿದೆ,
ಸಮಾರಂಭದಲ್ಲಿ ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷ ಪಿ.ಪಿ.ಅಹ್ ಮದ್ ಸಖಾಫಿ ಅಧ್ಯಕ್ಷತೆ ವಹಿಸಲಿದ್ದು ಕೇಂದ್ರ ಸಖಾಫಿ ಕೌನ್ಸಿಲ್ ಉಪಾಧ್ಯಕ್ಷ ಅಬ್ದುಲ್ ರಶೀದ್ ಸಖಾಫಿ ಝೈನೀ ಕಾಮಿಲ್ ಉದ್ಘಾಟನೆ ಮಾಡಲಿದ್ದಾರೆ.
ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ಕೇಂದ್ರ ಮುಶಾವರ ಕಾರ್ಯದರ್ಶಿ ಪೇರೋಡ್ ಅಬ್ದುರಹ್ಮಾನ್ ಸಖಾಫಿ ವಿಷಯ ಮಂಡಿಸಿ ಭಾಷಣ ಮಾಡಲಿದ್ದಾರೆ
ಅನಂತರ ಹನ್ನೆರಡುವರೆ ಗಂಟೆಗೆ ನಡೆಯುವ ಸ್ವಾಗತ ಸಮಿತಿ ರಚನಾ ಸಮಾವೇಶದಲ್ಲಿ ಸುನ್ನೀ ಸಂಘ ಕುಟುಂಬದ ನಾಯಕರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ,
ಸದರಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಖಾಫಿ ವಿದ್ವಾಂಸರು ಮತ್ತು ಸಂಘಟನಾ ಕಾರ್ಯಕರ್ತರು ಭಾಗವಹಿಸಿ ಯಶಸ್ವಿ ಗೊಳಿಸಬೇಕಾಗಿ ಕರ್ನಾಟಕ ಸಖಾಫಿ ಕೌನ್ಸಿಲ್ ವಿನಂತಿಸಿ ಕೊಂಡಿದೆ.
Comments
Post a Comment