Skip to main content

ಗೌರಿ ಲಂಕೇಶ್ ಹತ್ಯೆ ಶೋಷಣೆ,ದೇಶದ್ರೋಹ ವಿರುದ್ಧದ ಹೋರಾಟದ ಮೇಲಿನ ದಾಳಿ



*ಖ್ಯಾತ ಪತ್ರಕರ್ತೆ,ಸಾಹಿತಿ,ಮಾನವ ಹಕ್ಕುಗಳ ಹೋರಾಟಗಾರ್ತಿ ಗೌರಿ ಲಂಕೇಶರ ಹತ್ಯೆಯು ಅತ್ಯಂತ ನೀಚವೂ ಹೇಯಕೃತ್ಯವೂ ಆಗಿದ್ದು ಇದು ಭಾರತದ ಶೋಷಿತ ಹಾಗೂ ದಮನಿತರಾದ ದಲಿತರು,ಅಲ್ಪಸಂಖ್ಯಾತರು ಹಾಗೂ ಪ್ರಗತಿಪರರು ತಮ್ಮ ಹಕ್ಕು ಹಾಗೂ ನ್ಯಾಯಕ್ಕಾಗಿ ನಡೆಸುವ ಹೋರಾಟದ ವಿರುದ್ಧ ದೇಶದ್ರೋಹಿಗಳೂ ನರರಾಕ್ಷಸರೂ ಆದ ಫ್ಯಾಸಿಸ್ಟ್ ಶಕ್ತಿಗಳು ನಡೆಸಿದ ದಾಳಿಯಾಗಿದೆ.*

   *ಪ್ರಸಕ್ತ ಇಡೀ ಭಾರತದಲ್ಲಿ ಈ ಗೋಡ್ಸೆ ಸಂತತಿಗಳ ಅಟ್ಟಹಾಸ ಮುಂದುವರಿಯುತ್ತಾ ಇದ್ದು ಕೊಲೆ,ಹಿಂಸೆ ಸುಲಿಗೆ,ಅತ್ಯಾಚಾರಗಳ ಮೂಲಕ ಅರಾಜಕತೆಯನ್ನು ಸೃಷ್ಟಿಸುತ್ತಿದ್ದರೂ ಈ ದುಷ್ಟ ಶಕ್ತಿಗಳನ್ನು ಮಟ್ಟಹಾಕಿ ಹದ್ದು ಬಸ್ತಿನಲ್ಲಿಡದೆ ಸರಕಾರಗಳು ಜಾಣಮೌನವನ್ನು ತಾಳಿ ಅವರಿಗೆ ಹಿಂಬಾಗಿಲ ನೆರವನ್ನು ನೀಡುತ್ತಿದೆ ಎನ್ನಲು ನಾಚಿಕೆಯಾಗುತ್ತಿದೆ.*

     *ಬ್ರಿಟಿಷರ ವಿರುದ್ಧ ರಾಷ್ಟ್ರ ಸ್ವಾತಂತ್ರ್ಯದ ಸಮರ ನಡೆದಿದ್ದರೆ ಇಂದು ಈ ನರರಾಕ್ಷಸ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಆಂತರಿಕ ಸ್ವಾತಂತ್ರ್ಯ ಸಮರದ ಕಹಳೆಯೂದಬೇಕಾದ ಸಮಯ ಅತಿಕ್ರಮಿಸಿದೆ.ಗೋಹತ್ಯೆ,ಲವ್ ಜಿಹಾದ್ ಇತ್ಯಾದಿ ಕಪೋಕಲ್ಪಿತ ಹಾಗೂ ಸುಳ್ಳು ನೆಪಗಳನ್ನು ಹೆಣೆದು ಇಡೀ ಭಾರತದಲ್ಲಿ ಗಲಭೆ, ನರಮೇಧ,ದೊಂಬಿಗಳನ್ನುಂಟುಮಾಡಿ ಅಮಾಯಕರನ್ನು ನಿಷ್ಠೂರವಾಗಿ ಕೊಂದು ಹಾಕುವ ಈ ದೇಶದ್ರೋಹಿಗಳನ್ನು ಮಟ್ಟಹಾಕುವುದು ಭಾರತದ ಅತೀ ದೊಡ್ಡ ಸವಾಲಾಗಿದೆ.*

    *ಮುಶ್ತಾಖ್ ಪ್ರೇಮವಿವಾಹವಾಗಿ ಪ್ರತಾಪ್ ಆದರೆ, ರಾಹಿಮಾ ಪ್ರೇಮವಿವಾಹವಾಗಿ ಹಿಂದೂವಾದರೆ ಅದು ದೇಶಪ್ರೇಮ. ಅಖಿಲ ಸ್ವ ಇಚ್ಚೆಯಿಂದ ಹಾದಿಯಾ ಆದರೆ ಅದು ಲವ್ ಜಿಹಾದ್, ದೇಶದ್ರೋಹ!!. ಹಿಂದೂವಾದ ಪ್ರತೀಯೊಬ್ಬನೂ ಮುಸ್ಲಿಮನ ತಲೆಕಡಿಯಲು ಕೈಯಲ್ಲಿ ತಲವಾರು ಹಿಡಿಯಬೇಕು,ಮುಸ್ಲಿಂ ಸ್ತ್ರೀಯರ ಗರ್ಭಕ್ಕೆ ಹಿಂದೂವಿನ ವೀರ್ಯವನ್ನು ಕಳುಹಿಸಿ ಒಬ್ಬ ಹಿಂದೂವಿಗೆ ಜನ್ಮ ನೀಡಬೇಕು ಇಸ್ಲಾಮನ್ನು ಜಗತ್ತಿನಿಂದ ನಿರ್ಣಾಮ ಮಾಡಬೇಕು ಎಂದು ಬಹಿರಂಗ ಭಾಷಣ ಮಾಡುತ್ತಿರುವ ಮುತಾಲಿಕ್, ಅನಂತಾದಿಗಳು ದೇಶಪ್ರೇಮಿಗಳಾಗಿ ಅಮಾಯಕರನ್ನು ಕೊಲ್ಲಿಸಿ ಯಾವುದೇ ಕೇಸ್,ಜೈಲುಭಾಗ್ಯವಿಲ್ಲದೆ ರಾಜಾರೋಷವಾಗಿ ತಿರುಗಾಡುತ್ತಿದ್ದರೆ ದಮನಿತ ಹಾಗೂ ಶೋಷಿತ ಜನವರ್ಗಕ್ಕೆ ಬೇಕಾಗಿ ಧ್ವನಿಯೆತ್ತಿದ ಮಅದನಿ ದೇಶದ್ರೋಹಿ,ಭಯೋತ್ಪಾದಕನಾಗಿ ತಾನು ಮಾಡಿದ ತಪ್ಪೇನೆಂದರಿಯದೆ ಈಗಲೂ ಸೆರೆಮನೆವಾಸ ಅನುಭವಿಸುತ್ತಿರುವುದು ಇಲ್ಲಿಯ ನ್ಯಾಯ ವ್ಯವಸ್ಥೆಗೆ ಬಂದೊದಗಿದ ದುರಂತವೆನ್ನದೆ ನಿರ್ವಾಹವಿಲ್ಲ*

    *ಇದೀಗ ಶೋಷಿತ ಜನವರ್ಗದ ಧ್ವನಿಯಾಗಿ ಫ್ಯಾಸಿಸ್ಟ್ ದೇಶದ್ರೋಹಿಗಳ ವಿರುದ್ಧ ಹೋರಾಡುತ್ತಿದ್ದ ಗೌರಿಲಂಕೇಶರನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡುವ ಮೂಲಕ "ರಾಷ್ಟ್ರಪಿತನ ಹಂತಕರಾದ ಗೋಡ್ಸೆಯ ಸಂತತಿಗಳಾದ ನಮ್ಮ ಚಿಗುರು,ಬೇರು ಅಳಿದಿಲ್ಲ,ನಾವಿನ್ನೂ ಜೀವಂತವಾಗಿಯೇ ಇದ್ದೇವೆ,ದೇಶದಲ್ಲಿ ಶಾಂತಿ,ಸಮಾಧಾನ,ಐಕ್ಯತೆ ಉಂಟಾಗಲು ನಾವೆಂದೂ ಬಿಡಲಾರೆವು,ನಾವೆಂದೂ ರಾಷ್ಟ್ರ ವಿರೋಧಿ ಚಟುವಟಿಕೆಗಳ ಮೂಲಕ ಇಲ್ಲಿ  ಭಯೋತ್ಪಾದನೆಯನ್ನು ಮಾಡುತ್ತಾ ಇರುವೆವು ಎಂಬ ಕೇಸರಿ ಸಂದೇಶವನ್ನು ಈ ನರರಾಕ್ಷಸ ಫ್ಯಾಸಿಸ್ಟ್ ಗಳು ಇಡೀ ದೇಶಕ್ಕೆ ರವಾನಿಸಿದ್ದಾರೆ.*

     *ವಿಚಾರಧಾರೆಗಳನ್ನು ಸೈದ್ಧಾಂತಿಕವಾಗಿ ಎದುರಿಸಲು ಸಾಧ್ಯವಾಗದ ಈ ಗೋಡ್ಸೆಸಂತತಿಗಳು ಅಡ್ಡದಾರಿಯ ಮೂಲಕ ಸೇಡು ತೀರಿಸುತ್ತಿರುವುದು ತಮ್ಮ ಬಲಹೀನತೆಯನ್ನು ಬಿಂಬಿಸುತ್ತದೆ ಎಂಬುದನ್ನು ಅರ್ಥಮಾಡಲೂ ಸಾದ್ಯವಾಗದ ಮೂರ್ಖರಾಗಿದ್ದಾರೆ.*

    *ಈ ಸಂದರ್ಭದಲ್ಲಿ ಗೌರಿ ಲಂಕೇಶರ ಹತ್ಯೆಯನ್ನು ಅತ್ಯಂತ ಕಠಿಣವಾಗಿ ಖಂಡಿಸುವುದರೊಂದಿಗೆ ಈ ನರಹಂತಕರನ್ನು ಅತೀ ಶೀಘ್ರವಾಗಿ ಬಂಧಿಸಿ ಸೂಕ್ತ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸುತ್ತಿದ್ದೇವೆ.ಕರಾವಳಿಯ ಕೆಲವು ಮತಾಂಧ ದುಷ್ಟ ಶಕ್ತಿಗಳನ್ನು ಜೈಲಿಗಟ್ಟಿ ಕಠಿಣ ವಿಚಾರಣೆಗೆ ಒಳಪಡಿಸಿದರೆ ಕೊಂದ ಹಾಗೂ ಕೊಲ್ಲಿಸಿದ ನರರಾಕ್ಷಸರ ಹೆಸರು ಬೇಗನೇ ಬಹಿರಂಗಗೊಳ್ಳಬಹುದೆಂದಾಗಿದೆ ಸಾರ್ವಜನಿಕರ ಅಭಿಪ್ರಾಯ.*

        *ಟಿ.ಯಂ.ಮುಹ್ಯಿದ್ದೀನ್ ಸಖಾಫಿ,ತೋಕೆ*
(ನಿರ್ದೇಶಕರು ಸುನ್ನೀ ಸಾಹಿತ್ಯ ಮಂಡಳಿ,ಮಂಗಳೂರು)

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.