ಅಲ್-ಮದೀನ ಕುವೈತ್ ಮಹಬುಲ ಶಾಖೆಯ ಬೃಹತ್ ಇಫ್ತಾರ್ ಸಂಗಮ
ಅಲ್-ಮದೀನ ಕುವೈತ್ ಮಹಬುಲ ಶಾಖೆಯ ಮಾಸಿಕ ಬದ್ರ್ ಸ್ವಲಾತ್ ಹಾಗೂ ಬೃಹತ್ ಇಫ್ತಾರ್ ಸಂಗಮವು ದಿನಾಂಕ 16/06/2017 ರಂದು ಅಸರ್ ನಮಾಝ್ ನ ನಂತರ ಮಹಬುಲದ ವಸಂತ ಭವನ ಹಾಲ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಬಹುಮಾನ್ಯ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಪುತ್ರ ಬಹುಮಾನ್ಯ ಮುಹಮ್ಮದ್ ಅಮ್ಜದಿ ಉಸ್ತಾದರು ಆಗಮಿಸಿದ್ದರು. ಬಹುಮಾನ್ಯ ಶಾಹುಲ್ ಹಮೀದ್ ಸಅದಿ,ಝುಹ್ರಿ ಉಸ್ತಾದರ ನೇತ್ರತ್ವದಲ್ಲಿ ಮಾಸಿಕ ಸ್ವಲಾತ್ ಮಜ್ಲಿಸ್ ನಡೆಯಿತು.
ಅಲ್-ಮದೀನ ಕುವೈತ್ ಸಮಿತಿಯ ಚೈಯರ್ ಮ್ಯಾನ್ ಜನಾಬ್ ಅಬ್ದುಲ್ ಲತೀಫ್ ಬಂಟ್ವಾಳ, ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ, ಅಲ್-ಮದೀನ ಮಹಬುಲ ಶಾಖೆಯ ಅಧ್ಯಕ್ಷರಾದ ಜನಾಬ್ ಅಹಮದ್ ಬಾವಕ,ಅಲ್-ಮದೀನ ಕುವೈತ್ ಕೋಶಾಧಿಕಾರಿ ಜನಾಬ್ ಸಮೀರ್ ಹಾಗೂ ಅನೇಕ ಉಲಮಾ ಉಮರಾಗಳು ಉಪಸ್ಥಿತರಿದ್ದರು.
ಮುಖ್ಯ ಪ್ರಭಾಷಣ ಮಾಡಿದ ಬಹುಮಾನ್ಯ ಮುಹಮ್ಮದ್ ಅಮ್ಜದಿ ಉಸ್ತಾದರು ರಮಳಾನ್ ತಿಂಗಳ ಬಗ್ಗೆ ಹಾಗೂ ಅಲ್-ಮದೀನ ಸ್ಥಾಪನೆ ಯ ಬಗ್ಗೆ ತಿಳಿಸಿದರು.ಈ ಸಂದರ್ಭದಲ್ಲಿ ಉಸ್ತಾದರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಅಲ್-ಮದೀನ ಕುವೈತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಮೂಸ ಇಬ್ರಾಹಿಮ್ ಸ್ವಾಗತಿಸಿದರು.
ಉಸ್ತಾದರ ಭಕ್ತಿ ನಿರ್ಭಯವಾದ ದುವಾ ನೆರೆದ ಸಭಿಕರ ಮನ ಮುಟ್ಟಿತು.
Comments
Post a Comment