ಮೆಜೆಸ್ಟಿಕ್ ಡಿವಿಷನ್ ಕ್ಯಾಂಪಸ್ ವಿಂಗ್ ವತಿಯಿಂದ ಇಫ್ತಾರ್ ಸಂಗಮವು ದಿನಾಂಕ 10 -06 -2017 ರಂದು ಮೆಜೆಸ್ಟಿಕ್ ಸಿ. ಯಂ ಹೋಟೆಲಿನಲ್ಲಿ ನಡೆಯಿತು. ಕಾರ್ಯಕ್ರಮವು ಎಸ್ .ಎಸ್ .ಎಫ್ ಬೆಂಗಳೂರು ಜಿಲ್ಲಾ ಉಪಾಧ್ಯಕ್ಸರಾದ ಶಾಫಿ ಸಹದಿ ಪೊಯ್ಯತ್ತಬೈಲ್ ಉಸ್ತಾದರ ದುಆದೊಂದಿಂಗೆ ಆರಂಭಗೊಂಡಿತು. ಆ ಬಳಿಕ ಬದ್ರ್ ಮೌಲೂದ್ ಪಠಿಸಿ
ಇಫ್ತಾರ್ ಕೂಟ ನಡೆಸಲಾಯಿತು .ಮಗ್ರಿಬ್
ನಮಾಝಿನ ಬಳಿಕ ಸಭಾ ಕಾರ್ಯಕ್ರ್ರಮವು ಶಾಫಿ ಸಹದಿ ಉಸ್ತಾದರ ಅದ್ಯಕ್ಶತೆಯಲ್ಲಿ ವಿಸ್ಡಮ್ ಹೋಂ ಮೆಜೆಸ್ಟಿಕ್ನಲ್ಲಿ ನಡೆಯಿತು .ಡಿವಿಷನ್
ಕ್ಯಾಂಪಸ್ ಕಾರ್ಯದರ್ಶಿ ಸಫ್ ದರ್ ಹುಸೈನ್ ಸ್ವಾಗತಿಸಿ, ನಾಸಿರ್ ಬಜ್ಪೆ ಅಧ್ಯಯನ ತರಗತಿಯನ್ನುನಡೆಸಿಕೊಟ್ಟರು .ಇದೇ ಸಂದರ್ಭದಲ್ಲಿ ಯೂನಿವರ್ಸಿಟಿ ಕಾಲೇಜು ಸಮಿತಿ ಯೊಂದನ್ನು ರಚಿಸಲಾಯಿತು . ಕಾರ್ಯಕ್ರಮದ ಕೊನೆಯಲ್ಲಿ ಬೆಂಗಳೂರು ಜಿಲ್ಲಾ ಎಸ್ .ಎಸ್.ಎಫ್ ಕಾರ್ಯದರ್ಶಿ ಅಕ್ತರ್ ಹುಸೈನ್ ಧನ್ಯವಾದವಿತ್ತರು.ಕೊನೆಯಲ್ಲಿ ಭೋಜನ ಕೂಟದೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.
ವರದಿ : ಶಂಸು ಗಾಂಜಾಲ್
(ಜೊತೆ ಕಾರ್ಯದರ್ಶಿ ಎಸ್ .ಎಸ್ .ಎಫ್ ಮೆಜೆಸ್ಟಿಕ್ ಶಾಖೆ )
Comments
Post a Comment