ಎಚ್ಚರಿಕೆ : ಉಳ್ಳಾಲ ಸಮುದ್ರ ಆಳವಾಗಿದೆ
ಉಳ್ಳಾಲ ಸಯ್ಯಿದ್ ಮದನಿ ಖ.ಸಿ ದರ್ಗಾ ಹಾಗು ಇತರ ಪ್ರವಾಸ ತಾಣಗಳಿಗೆ ಸಂದರ್ಶನಕ್ಕೆ ಆಗಮಿಸುವ ಕರ್ನಾಟಕ, ಕೇರಳ, ತಮಿಳ್ನಾಡು ಹಾಗು ಇತರ ರಾಜ್ಯಗಳ ಪ್ರವಾಸಿಗರು ಅದರಲ್ಲೂ ಉತ್ತರ ಕರ್ನಾಟಕದ ಪ್ರವಾಸಿಗರು ಬಹಳ ಜಾಗರೂಕರಾಗಿರಬೇಕಾದ ಒಂದು ಸಂಗತಿಯಾಗಿದೆ. ದ.ಕ ಜಿಲ್ಲೆಯ ಒಳಗಿನ ಪ್ರವಾಸೀ ತಾಣಗಳಿಗೆ ಸಂದರ್ಶನಕ್ಕೆ ಬರುವವರು ಉಳ್ಳಾಲದ ಮತ್ತು ಇತರ ಸ್ಥಳಗಳಲ್ಲಿರುವ ಸಮುದ್ರ ಕಿನಾರೆಗೆ ಭೇಟಿ ನೀಡುವುದು ಹವ್ಯಾಸವಾಗಿ ಬಿಟ್ಟಿದೆ. ವರ್ಷ ಪೂರ್ತಿ ಇಲ್ಲಿನ ಸಮುದ್ರದಲ್ಲಿ ತೆರೆಗಳ ಆರ್ಭಟ ಹೆಚ್ಚಿರುತ್ತದೆ. ಅದರಲ್ಲೂ ಉಳ್ಳಾಲದ ಸಮುದ್ರ ಕಿನಾರೆಯು ತುಂಬಾ ಆಳವಾಗಿದ್ದು, ಅಲೆಗಳ ಆರ್ಭಟ ಹಾಗು ಸೆಳೆತ ಅಧಿಕವಾಗಿದ್ದು ತುಂಬಾ ಅಪಾಯವಾದುದಾಗಿದೆ. ಉಳ್ಳಾಲ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿ ಅಪಾರ ಸಾವುಗಳು ಸಂಭವಿಸಿದ್ದು ಅದರಲ್ಲೂ ಉತ್ತರ ಕರ್ನಾಟಕದಿಂದ ಉಳ್ಳಾಲ ಸಯ್ಯಿದ್ ಮದನಿ ಖ.ಸಿ ದರ್ಗಾ ಝಿಯಾರತಿಗೆ ಬರುವ ಸಂದರ್ಶಕರ ಸಾವಿನ ಸಂಖ್ಯೆ ಹೆಚ್ಚಿದೆ. ಇಂದು ( 28-06-2017 ) ಉಳ್ಳಾಲ ಸಮುದ್ರ ಸ್ನಾನಕ್ಕಿಳಿದ ತುಮಕೂರಿನ ಎರಡು ಮಂದಿ ಅಲೆಗಳ ಸೆಳೆತಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾರೆ.. ಆದುದರಿಂದ ಸಮುದ್ರ ಕಿನಾರೆಗೆ ತೆರಳುವ ಸಂದರ್ಶಕರು ತುಂಬಾ ಜಾಗ್ರತೆ ವಹಿಸಿ ವೀಕ್ಷಣೆ ಮಾಡಬಹುದಾಗಿದೆ. ಆದರೆ ಯಾವುದೇ ಸಮಯದಲ್ಲಿ ಅಪಾಯ ತಂದೊಡ್ಡಬಹುದಾದ ಸಮುದ್ರ ಸ್ನಾನಕ್ಕಿಳಿಯುವುದು, ಅಲೆಗಳ ನಡುವೆ ನಿಂತು ಸೆಲ್ಫಿ ತೆಗೆಯುವುದು ಮುಂತಾದ ಜೀವಕ್ಕೆ ಹಾನಿ ಉಂಟು ಮಾಡುವ ಕೆಲಸ ಮಾಡಲೇಬಾರದು.
ಮಾನ್ಯ ಶಾಸಕರೇ, ಅಧಿಕಾರಿಗಳೇ ಇತ್ತ ಗಮನಿಸಿ
ವರ್ಷ ವರ್ಷನೂ ಸಮುದ್ರದ ಅಲೆಗಳನ್ನು ನಿಯಂತ್ರಿಸಲು ಕಡಲಿಗೆ ಹಾಕುವ ಕಲ್ಲಿಗೆ ತಗಲುವ ಖರ್ಚಿನಿಂದ ಒಂದು ಚಿಕ್ಕ ಧನವನ್ನು ಕಡಲು ಕಿನಾರೆಯಲ್ಲಿ ಸಮುದ್ರದ ಅಪಾಯವನ್ನು ಸೂಚಿಸುವ ಸೂಚನಾ ಫಲಕವನ್ನು ಅಳವಡಿಸಲು ವ್ಯಯಿಸಿ.. ಹೀಗೆ ಮಾಡಿದರೆ ಕೆಲವೊಂದು ಜೀವಗಳನ್ನು ಉಳಿಸಬಹುದು ಎಂಬುದು ನನ್ನ ಅನಿಸಿಕೆ
✍ ನವಾಝ್ ಸಖಾಫಿ ಅಕ್ಕರೆಕೆರೆ ಉಳ್ಳಾಲ
ಎಸ್ ವೈ ಎಸ್ ಮಾಧ್ಯಮ ಕಾರ್ಯದರ್ಶಿ
Comments
Post a Comment