ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ಬೃಹತ್ ಇಫ್ತಾರ್ ಇತ್ತಿಫಾಕ್ 2017
ಕೆಸಿಎಫ್ ಕುವೈತ್ ಮಹಬುಲ ಸೆಕ್ಟರ್ ವತಿಯಿಂದ ಬದ್ರ್ ಅನುಸ್ಮರಣೆ ಹಾಗೂ ಬೃಹತ್ ಇಫ್ತಾರ್ ಇತ್ತಿಫಾಕ್ ದಿನಾಂಕ 11/06/2017 ರಂದು ಅಸರ್ ನಮಾಝ್ ನ ನಂತರ ಮಹಬುಲ KNPC ಬಿಲ್ಡಿಂಗ್ ನ ಸಭಾಂಗಣದಲ್ಲಿ ಬಹುಮಾನ್ಯ ಶಾಹುಲ್ ಹಮೀದ್ ಸಅದಿ,ಝುಹ್ರಿ ಉಸ್ತಾದರ ನೇತ್ರತ್ವದಲ್ಲಿ ನಡೆಯಿತು. ಮುಖ್ಯ ಪ್ರಭಾಷಣಕ್ಕಾರರಾಗಿ ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರು ಭಾಗವಹಿಸಿದ್ದರು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ, ಕೋಶಾಧಿಕಾರಿ ಜನಾಬ್ ಮೂಸ ಇಬ್ರಾಹಿಮ್, ಕೆಸಿಎಫ್ ಮಹಬುಲ ಸೆಕ್ಟರ್ ಇದರ ಅಧ್ಯಕ್ಷರಾದ ಜನಾಬ್ ಅಹಮದ್ ಬಾವಕ, ರಾಷ್ಟ್ರೀಯ ಸಂಘಟನಾ ಕನ್ವೀನರ್ ಜನಾಬ್ ಝಕ್ರಿಯಾ ಆನೆಕಲ್ ಅಲ್ಲದೆ ಅನೇಕ ಉಲಮಾ ಉಮರಾಗಳು ಭಾಗವಹಿಸಿದ್ದರು.
Comments
Post a Comment