Skip to main content

ಎಸ್ ವೈ ಎಸ್ ಉಳ್ಳಾಲ ಸೆಂಟರ್.. ತಝ್ಕಿಯತ್ ನೈಟ್ ಪ್ರೋಗ್ರಾಂ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಆಶ್ರಯದಲ್ಲಿ ಪವಿತ್ರ ರಂಝಾನ್ ತಿಂಗಳಲ್ಲಿ ಬದುಕು ಧನ್ಯಗೊಳಿಸುವ ಸಲುವಾಗಿ ತಝ್ಕಿಯತ್ ನೈಟ್ ಕಾರ್ಯಕ್ರಮ ಉಳ್ಳಾಲದ ಮಂಚಿಲ ಜುಮಾ ಮಸೀದಿಯಲ್ಲಿ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮಂಚಿಲ ಜುಮಾ ಮಸೀದಿಯ ಖತೀಬರಾದ ಹಸನ್ ಮುಬಾರಕ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಆತ್ಮ ಸಂಶುದ್ಧವಾಗಿದ್ದರೆ ಮಾತ್ರ ಮುಸ್ಲಿಮನ ಸರ್ವ ಇಬಾದತುಗಳು ಸ್ವೀಕಾರ್ಹ ಯೋಗ್ಯವಾಗಲು ಸಾಧ್ಯ. ಆತ್ಮ ಶುದ್ಧಿಯಿಲ್ಲದೆ ನಿರ್ವಹಿಸಲ್ಪಡುವ ಇಬಾದತುಗಳು ನಿಷ್ಫಲ ಅಂದರು. ಆತ್ಮ ಶುದ್ಧೀಕರಣ ವಿಷಯದಲ್ಲಿ ಚೊಂಬುಗುಡ್ಡೆ ಜುಮಾ ಮಸೀದಿಯ ಖತೀಬರಾದ ಹಂಝ ಮದನಿ ಗುರುವಾಯನಕೆರೆ ತರಗತಿ ನಡೆಸಿ ಹೇಳಿದರು. ಪ್ರವಾದಿ ಸ.ಅ ತನ್ನ ಅನುಯಾಯಿಗಳಾದ ಸ್ವಹಾಬಿಗಳೊಂದಿಗೆ ಒಮ್ಮೆ ಹೇಳಿದರು. ""ಸ್ವಹಾಬಿಗಳೇ ನೀವು ನಿಮ್ಮ ಶರೀರದ ಎರಡು ಅಂಗಗಳಾದ ನಾಲಗೆ ಮತ್ತು ಗುಪ್ತಾಂಗದ ಮೂಲಕ ಯಾವುದೇ ತಪ್ಪು ನಡೆಸುವುದಿಲ್ಲ ಎಂದು ಮಾತುಕೊಟ್ಟರೆ ನಿಮಗೆ ನಾನು ಸ್ವರ್ಗವನ್ನು ವಾಗ್ದಾನ ಮಾಡುತ್ತೇನೆ"" ನಾಲಗೆ ಮತ್ತು ಗುಪ್ತಾಂಗದ ಮೂಲಕ ತಪ್ಪು ಸಂಭವಿಸುವುದರಿಂದ ಹೇಗೆ ಅವುಗಳನ್ನು ಕಾಪಾಡಬಹುದು, ಅವುಗಳನ್ನು ಹೇಗೆ ಸಂಶುದ್ಧಗೊಳಿಸಬಹುದು ಎಂಬುದನ್ನು ಈ ಹದೀಸನ್ನು ವ್ಯಾಖ್ಯಾನಿಸಿ ಅಬುಲ್ಲಯ್ಸ್ ಸಮರ್ಖಂದೀ ರಹಿಮಹುಲ್ಲಾಹ್ ರಂತಹ ಮಹಾತ್ಮರು ಹೇಳುತ್ತಾರೆ. ತನ್ನ ನಾಲಗೆಯಿಂದ ಜೀವನದಲ್ಲಿ ಒಮ್ಮೆಯೂ ಸುಳ್ಳು ಹೇಳದಿರುವುದು, ಪರದೂಷಣೆ, ಪರನಿಂದನೆ ಮಾಡದಿರುವುದು, ಅನಗತ್ಯ ಚರ್ಚೆಗಳಲ್ಲಿ ಭಾಗಿಯಾಗದಿರುವುದು, ಕ್ರತಕ ಸುದ್ದಿಗಳನ್ನು ಸ್ರಷ್ಟಿ ಮಾಡಿ ಗೊಂದಲ ಉಂಟು ಮಾಡದಿರುವುದು. ನಾಲಗೆಯ ಮೂಲಕ ಅಲ್ಲಾಹನ ದ್ಸಿಕ್ರ್ ನಲ್ಲಿ ತಲ್ಲೀನನಾಗಿರುವುದು, ಕುರಾನ್ ಪಾರಾಯಣದ ಮೂಲಕ ಬದುಕನ್ನು ಧನ್ಯಗೊಳಿಸುವುದು, ಜ್ಞಾನ ಬೋಧನೆಯನ್ನು ಪಸರಿಸುವವನಾಗುವುದು. ಈ ರೀತಿಯಾಗಿರಬೇಕು ನಾಲಗೆಯನ್ನು ಸಂಶುದ್ಧಗೊಳಿಸುವುದು ಎಂದು ಮಹಾತ್ಮರು ಕಲಿಸಿ ಕೊಡುತ್ತಾರೆ. ಮುಂದುವರಿದು ಹಂಝ ಮದನಿ ಉಸ್ತಾದರು ಹ್ರದಯ ಶುದ್ಧೀಕರಣ ಹಾಗು ಹ್ರದಯದೊಂದಿಗೆ ಸಂಬಂಧವಿರುವ ಅಂಗಗಳ ಸಂಸ್ಕರಣೆ ಮಾಡುವುದು ಹೇಗೆ ಎಂದು ವಿವರಿಸಿ ಅಲ್ಲಾಹನ ಹಬೀಬ್ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೆ ಹೇಳಲ್ಪಡುವ ಸ್ವಲಾತಿನ ಮಹತ್ವವನ್ನು ವಿವರಿಸುತ್ತಾ ಹೇಳಿದರು. ಕಾವ್ಯಗಳಲ್ಲಿ ಸರಿಸಾಟಿಯಿಲ್ಲದ ಅತಿ ಮಹತ್ತರ ಕಾವ್ಯವಾದ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರಶಂಸೆ, ಗುಣಗಾನಗಳನ್ನು ತಿಳಿಸುವ ಬುರ್ದಾ ಕಾವ್ಯವನ್ನು ವಿವರಿಸುತ್ತಾ ಮಹಾತ್ಮರು ಹೇಳುತ್ತಾರೆ. ಯಾರಾದರೂ ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೇಲೆ ಸ್ವಲಾತ್ ಹೇಳಿದರೆ ಆ ಸ್ವಲಾತಿನ ಲೆಕ್ಕಾನುಸಾರ ಅಲ್ಲಾಹನು ಮಲಕುಗಳನ್ನು ಸ್ರಷ್ಟಿ ಮಾಡುತ್ತಾನೆ. ಆ ಮಲಕುಗಳು ಪ್ರವಾದಿ ಸ.ಅ ರವರ ಬಳಿ ತೆರಳಿ ಹೇಳುತ್ತಾರೆ. ಓ ಪ್ರವಾದಿವರ್ಯರೇ... ತಮ್ಮ ಮೇಲೆ ಇಂತಿಂತಹ ಊರಿನ ಒಬ್ಬನು ಸ್ವಲಾತ್ ಹೇಳಿದ್ದಾನೆ. ಆ ಸ್ವಲಾತಿನ ಕಾರಣದಿಂದ ಅಲ್ಲಾಹು ನನ್ನನ್ನು ಸ್ರಷ್ಟಿಸಿದ್ದಾನೆ. ಅಲ್ಲಾಹನ ಮಹಾತ್ಮರು ಹೇಳುತ್ತಾರೆ. ಮುಂದೆ ಆ ಮಲಕುಗಳ ಕಾಯಕ ಒಂದೇಯಾಗಿರುತ್ತದೆ. ಆ ಸ್ವಲಾತ್ ಹೇಳಿದ ಮನುಷ್ಯನಿಗಾಗಿ ಅಂತ್ಯ ದಿನದ ತನಕ ಆತನ ಪಾಪ ವಿಮೋಚನಿಗಾಗಿ ಬೇಡುವುದು.
    ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಭಾಗವಾಗಿ ಖತ್ಮುಲ್ ಕುರಾನ್ ಇಜ್ತಿಮಾ, ತಹ್ಲೀಲ್ ಮಜ್ಲಿಸ್ ಹಾಗು ಪ್ರಾರ್ಥನಾ ಸಂಗಮ ನಡೆಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಅಧ್ಯಕ್ಷರಾದ ಇಲ್ಯಾಸ್ ಸಖಾಫಿ,   ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ತೊಕ್ಕೋಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ಸಿರಾಜ್ ಉಸ್ತಾದ್ ಚಾಲಿಯಂ, ಶಮೀರ್ ಸೇವಂತಿಗುಡ್ಡೆ, ಎಸ್ ವೈ ಎಸ್ ಸೆಂಟರ್ ಜೊತೆ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಸೆಂಟರ್ ಉಪಾಧ್ಯಕ್ಷ ಹೈದರ್ ಮುಕ್ಕಚ್ಚೇರಿ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಸಯೀದ್ ಮಂಚಿಲ, ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ ಹಾಗು ಇನ್ನಿತರ ಎಸ್ ವೈ ಎಸ್, ಎಸ್ಸೆಸ್ಸೆಫ್ ಗಣ್ಯರು ಉಪಸ್ಥಿತರಿದ್ದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಸ್ವಾಗತಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ ಹನೀಫ್ ಹಾಜಿ ಧನ್ಯವಾದಗೈದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಾಂತ್ವನ ವಿಭಾಗ ಚೇಯರ್ ಮಾನ್ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.