ಕೇಂದ್ರ ಸರಕಾರದ ಗೋ ಹತ್ಯೆ ನಿಷೇಧ ಕಾಯ್ದೆಯ ವಿರುದ್ಧ ದ.ಕ ಜಿಲ್ಲಾ ಎಸ್ಸೆಸ್ಸೆಫ್ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟಬಾ ಸಭೆಗೆ ಹರಿದು ಬಂದ ಜನಸಾಗರ
ಕೇಂದ್ರ ಸರಕಾರದ ಗೋ ಹತ್ಯೆ ನಿಷೇಧ ಕಾಯ್ದೆಯ ವಿರುದ್ಧ ದ.ಕ ಜಿಲ್ಲಾ ಎಸ್ಸೆಸ್ಸೆಫ್ ವತಿಯಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ನಡೆಯುತ್ತಿರುವ ಪ್ರತಿಭಟಬಾ ಸಭೆಗೆ ಹರಿದು ಬಂದ ಜನಸ್ತೋಮ
ಆರೆಸ್ಸಸ್ ನ ಮುಸ್ಲಿಂ ರಾಷ್ಟ್ರೀಯ ಮಂಚ್ ಗೆ ಪಂಚ್ ನೀಡಿದ ಶಾಫಿ ಸ ಅದಿ.
ದೇಶದ ಮುಸಲ್ಮಾನರ ನಡುವೆ ಅನೈತಿಕತೆ ಮತ್ತು ಬಿಕ್ಕಟ್ಟು ಸೃಷ್ಟಿಸಿ ಸಮುದಾಯದ ಮಧ್ಯೆ ಅಪನಂಬಿಕೆ ಗಟ್ಟಿಗೊಳಿಸಲು ಆರೆಸ್ಸಸ್ ಸೃಷ್ಟಿ ಮಾಡಿದ ಸಂಘಟನೆಯಾಗಿದೆ ಮುಸ್ಲಿಂ ರಾಷ್ಟ್ರೀಯ ಮಂಚ್ (MRM).
ಆರೆಸ್ಸಸ್ ಪ್ರಮುಖ್ ಇಂದ್ರೇಶ್ ಕುಮಾರ್ ಅನತಿಯಂತೆ ನಡೆಯುವ ಸದ್ರಿ ಸಂಘಟನೆಯ ಹೊಸ ಪದ್ಧತಿಯಾದ ಕಾಶ್ಮೀರದಿಂದ ಕನ್ಯಾಕುಮಾರಿಯಾಗಿ ಅಮೃತಶರ ಪಾದಯಾತ್ರೆಯ ದುರುದ್ದೇಶದ ಬಗ್ಗೆ ಮಂಗಳೂರಿನಲ್ಲಿ ಇಂದು ನಡೆದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಎಸ್ಸೆಸ್ಸಫ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಾ ಖ್ಯಾತ ಭಾಷಣಗಾರ , ಮುಸ್ಲಿಂ ವಿದ್ವಾಂಸರಾದ ಮೌಲಾನ ಎನ್.ಕೆ.ಎಂ ಶಾಫಿ ಸ ಅದಿಯವರು ಸವಿವರವಾಗಿ ವಿವರಿಸಿದರು.
ದೇಶದ ವಿವಿಧ ರಾಜ್ಯಗಳಲ್ಲಿ ಹಾದುಹೋಗುವ ಯಾತ್ರೆಯು ಸರಿಸುಮಾರು 12000 ಕಿ.ಮೀ ಸಂಚರಿಸಲಿದೆ. ಮುಸ್ಲಿಮರ ಪವಿತ್ರ ರಂಝಾನ್ ಹಬ್ಬದ ಮುಂಚಿತವಾಗಿ ನಡೆಯಲಿರುವ ಯಾತ್ರೆಯ ಉದ್ದೇಶ ಮುಸ್ಲಿಮರಿಗೆ ಖುರ್ ಆನ್ ಮತ್ತು ಹದೀಸ್ ನ ನಿಜಾಂಶ ಮನವರಿಕೆ ಮಾಡುವುದಾಗಿದೆ ಎಂಬುದನ್ನು ಮುಸ್ಲಿಂ ರಾಷ್ಟ್ರೀಯ ಮಂಚ್ ನ ಕನ್ವೀನರ್ ಶಹೀದ್ ಅಖ್ತರ್ ರವರ ಹೇಳಿಕೆ ಹಾಸ್ಯಾಸ್ಪದವೆಂದು ಶಾಫಿ ಸ ಅದಿಯವರು ವ್ಯಂಗ್ಯವಾಡಿದರು.
ಗೋಮಾಂಸ ಭಕ್ಷಣೆ ಕ
ಖುರ್ ಆನ್ ವಿರುದ್ದವಂತೆ ,ಗೋ ಹಾಲು ಮಾತ್ರ ಪೈಗಂಬರರು ಅನುಮತಿ ನೀಡಿದ್ದಂತೆ , ಯಾತ್ರೆಯಾದ್ಯಂತ ಮುಸಲ್ಮಾನರಿಗೆ ಇಫ್ತಾರ್ ಮಾಡಲು ಗೋ ಹಾಲನ್ನು ವಿತರಿಸಲಾಗುವುದು ಎಂದು ನಿರ್ಧರಿಸಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಗೆ ಗೋಮಾಂಸ ಭಕ್ಷಣದ ಬಗ್ಗೆ ಖುರ್ ಆನ್ ಆಯತ್ ಗಳು , ಹದೀಸ್ ಗಳು ಹಾಗೂ ಹಿಂದೂ ಸಂಸ್ಕೃತಿಯ ಮನುಸ್ಮೃತಿ, ಋಗ್ವೇದ ಮತ್ತು ಮಹಾಭಾರತವನ್ನು ವಿವರಿಸುತ್ತಾ ಗೋಮಾಂಸ ಸೇವನೆಯ ಅಧಿಕೃತ ದಾಖಲೆಯನ್ನು ನೀಡುತ್ತಾ ಮುಸ್ಲಿಂ ರಾಷ್ಟ್ರೀಯ ಮಂಚ್ ಗೆ ಚೆನ್ನಾಗಿ ಪಂಚ್ ಕೊಟ್ಟರು.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮುಸ್ಲಿಂ ರಾಷ್ಟ್ರೀಯ ಮಂಚ್ ನ ನಾಲಾಯಕ್ ನಾಯಕರ ಮಾತು ಕೇಳಿ ತ್ರಿವಳಿ ತಲಾಖ್ ಹಾಗೂ ಗೋ ಹತ್ಯೆ ನಿಷೇಧಕ್ಕೆ ಹೊರಟಿರುವುದು ಹಾಸ್ಯಾಸ್ಪದ ಎಂದು ಹೇಳಿದ ಶಾಫಿ ಸ ಅದಿಯವರು ಇದು ಉತ್ತರ ಪ್ರದೇಶದ ದಾದ್ರಿಯಲ್ಲ .ಟಿಪ್ಪು ಸುಲ್ತಾನ್ ಮತ್ತು ಬಸವಣ್ಣರ ಕರ್ನಾಟಕ ಎಂದು ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು.
ಕೇಂದ್ರ ಸರ್ಕಾರದ ಉಭಯ ಸಚಿವರುಗಳಾದ ವೆಂಕಯ್ಯ ನಾಯ್ಡು ಮತ್ತು ಅರುಣ್ ಜೇಟ್ಲಿಯವರು ಗೋಹತ್ಯೆ ನಿಷೇಧವಲ್ಲ , ಗೋಹಿಂಸೆಯ ಪ್ರತಿಬಂಧಕ ಎಂಬ ಹೇಳಿಕೆಯನ್ನು ಖಂಡಿಸಿದ ಶಾಫಿ ಸ ಅದಿಯವರು ಇಂತಹ ಸೂಕ್ಷ್ಮ ವಿಷಯ ಕೈಗೆತ್ತಿಕೊಳ್ಳುವಾಗ ಎಲ್ಲಾ ಮಜಲುಗಳ ಬಗ್ಗೆ ಗಮನವಿಡಬೇಕಿತ್ತು. ಈ ಕಾನೂನುನಿಂದ ನೈತಿಕ ಪೋಲೀಸ್ ಗಿರಿ ಮಾಡುವವರಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದರು.
*ನಮ್ಮ ಶರೀಅತ್ ಮತ್ತು ಹಕ್ಕುಗಳನ್ನು ಕಸಿಯಲು ಯಾರು ಬಂದರೂ ಕಾನೂನು ರೀತಿಯ ಹೋರಾಟ ಮಾಡಿಯೇ ಸಿದ್ಧ ಎಂದು ಅವರು ಹೇಳಿದರು.*
ಬಿಜೆಪಿ ಸರ್ಕಾರದ ತ್ರಿವಳಿ ತಲಾಖ್ ನಿಷೇಧಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಹಾಗೂ ತ್ರಿವಳಿ ತಲಾಖ್ ,ಗೋಹತ್ಯೆ ಬಗ್ಗೆ ತುಟಿಪಿಟಿಕೆನ್ನದ ಕೇಂದ್ರ ಕಾಂಗ್ರೆಸ್ ನಾಯಕರ ವಿರುದ್ಧವೂ ಅವರು ಆರ್ಭಟಿಸಿದರು. ಬಿಜೆಪಿ ಯ ಕೋಮುವಾದಿ ನಿಲುವನ್ನು ಖಂಡಿಸದೆ ಮುಸ್ಲಿಮರ ದುಸ್ಥಿತಿಯಿಂದ ಮತಪಡೆಯಲು ಹೊಂಚು ಹಾಕುವ ಕಾಂಗ್ರೆಸ್ ಗರಿಗೆ ಗಂಭೀರವಾದ ಎಚ್ಚರಿಕೆಯನ್ನು ರವಾನಿಸಿದ ಶಾಫಿ ಸ ಅದಿ , ಮುಸ್ಲಿಮರಿಗೆ ಬಿಜೆಪಿ ಗುಮ್ಮವನ್ನು ತೋರಿಸಿ ಮತ ಪಡೆಯುವ ನಿಮ್ಮ ತಂತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಪ್ರತಿತಂತ್ರ ಹೆಣೆಯಲಿದ್ದೇವೆ ಎಂಬುದನ್ನು ಅವರು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.
Comments
Post a Comment