Skip to main content

ತಾಜುಲ್ ಉಲಮಾರ ಹಾದಿಯಲ್ಲಿ, ಬಹುಮಾನ್ಯ ಕೂರ ತಂಙಳ್.!

ತಾಜುಲ್ ಉಲಮಾರ ಹಾದಿಯಲ್ಲಿ, ಬಹುಮಾನ್ಯ ಕೂರ ತಂಙಳ್.!

ಸತ್ಯವನ್ನು  ತೆರೆದು ಹೇಳುವುದರಲ್ಲಿ ಯಾರನ್ನೂ ಭಯ ಪಡದ ಓರ್ವ ಪ್ರಗಲ್ಭ ಆಲಿಂ ಮತ್ತು ಸಯ್ಯಿದ್ ಆಗಿದ್ದರು *ತಾಜುಲ್ ಉಲಮಾ, ಉಳ್ಳಾಲ ತಂಙಳ್*. ಇಂದು ಅವರ ಅದೇ ಪಾದವನ್ನು ಹಿಂಬಾಲಿಸಿ ಮುನ್ನಡೆಯುತ್ತಿರುವ ಓರ್ವ ಸೈಯ್ಯಿದ್ ಆಗಿದ್ದಾರೆ ಅವರ ಸುಪುತ್ರ ಬಹುಮಾನ್ಯ ಕೂರ ತಂಙಳ್. ಈದುಲ್ ಫಿತರ್ ಚಂದ್ರ ದರ್ಶನ ವಿಷಯದಲ್ಲಂತೂ ಅದು ಇನ್ನಷ್ಟು  ಸ್ಪಷ್ಟವಾಗಿತ್ತು.

ಅಲ್ಲಾಹನನ್ನು ಭಯ ಪಡುವ ಆಲಿಂ, ಮನುಷ್ಯರಿಗೆ ಹೆದರಬೇಕಾಗಿಲ್ಲ. ತನ್ನ ನಿಲುವು ಸತ್ಯವಾಗಿದ್ದಲ್ಲಿ ಅದನ್ನು ತೆರೆದು ಹೇಳುವುದಕ್ಕೆ ಯಾರನ್ನೂ ಭಯಪಡದಿರುವುದು,  ಇದು ನೈಜ ಆಲಿಂ ಗಳ ಲಕ್ಷಣವಾಗಿದೆ. ಅದನ್ನು ತನ್ನ ಜೀವನದಲ್ಲಿ ಅಳವಡಿಸುತ್ತಾ ಬಂದವರಾಗಿದ್ದಾರೆ ಬಹುಮಾನ್ಯ ಕೂರ ತಂಙಳ್.

ಮೊನ್ನೆ ಭಟ್ಕಳದಲ್ಲಿ ಚಂದ್ರ ದರ್ಶನ ವಾಯಿತು. ಅದನ್ನು ಸ್ವೀಕರಿಸಿದ ಕರಾವಳಿಯ ಖಾಝಿಗಳು ನಾಳೆ ಪೆರ್ನಾಳ್ ಎಂದು ಘೋಷಿಸಿದರು. ಆದರೆ, ಆ ವಾರ್ತೆಯಲ್ಲಿ ಕರಾವಳಿಯ ಮತ್ತೋರ್ವ ಖಾಝಿಯಾದ ಕೂರ ತಂಙಳ್ ಗೆ ವಿಶ್ವಾಸಬರಲಿಲ್ಲ. ಆ ಕಾರಣಕ್ಕೆ ಅವರು ಚಂದ್ರ ದರ್ಶನ ಕಚಿತವಾಗಿಲ್ಲ ಅಂತ ತೀರ್ಪು ಕೊಟ್ಟರು.

ಉಳಿದ ಖಾಝಿಗಳಿಗೆ ಬಂದ ವಿಶ್ವಾಸ ಕೂರ ತಂಙಳ್ ಗೆ ಯಾಕೆ ಬರಲಿಲ್ಲ, ಉಳಿದ ಖಾಝಿಗಳನ್ನಾದರೂ  ಸ್ವೀಕರಿಸಿ ಇವರಿಗೆ ತೀರ್ಪು ಕೊಡಬಹುದಿತ್ತಲ್ವ ಎಂದು ಕೇಳುವವರಿದ್ದಾರೆ. ಅವರಿಗೆ ಬಂದ ವಿಶ್ವಾಸ ಇವರಿಗೆ ಬರಬೇಕೆಂದೂ, ಅಥವಾ, ಇನ್ನೊಬ್ಬರನ್ನು ಸ್ವೀಕರಿಸಿ ತೀರ್ಪು ಕೊಡಬೇಕೆಂಬ ನಿಬಂಧನೆಗಳೇನೂ ಮತ್ತೊಬ್ಬ ಖಾಝಿಗೆ ಇಲ್ಲ.

*ಉದಾಹರಣೆಗೆ; ಹೆಂಡತಿಯನ್ನು ಮುಟ್ಟಿದರೆ ಹನಫೀ ಮಝ್ಹಬ್ ನಲ್ಲಿ ಉಲೂಹ್ ಮುರಿಯುವುದಿಲ್ಲ, ಶಾಫಿ ಮಝ್ಹಬ್ ನಲ್ಲಿ ಉಳೂಹ್ ಮುರಿಯುತ್ತದೆ. ಹತ್ತು ಲಕ್ಷಕ್ಕೂ ಮಿಕ್ಕ ಹದೀಸ್ ಗಳ ಜ್ಞಾನವಿರುವ ಅಬೂ ಹನೀಫ ಇಮಾಮನ್ನು  ಶಾಫಿ ಇಮಾಮ್ ಗೆ ಸ್ವೀಕರಿಸಿ ತೀರ್ಪು ಕೊಡಬಾರದೇ ಎಂದು ಕೇಳಬೇಕಾಗಿಲ್ಲ. ಅಥವಾ, ಲಕ್ಷಾಂತರ ಹದೀಸ್ ಗಳ ಜ್ಞಾನವಿರುವ ಶಾಫಿ ಇಮಾಮರನ್ನು ಸ್ವೀಕರಿಸಿ ಅಬೂ ಹನೀಫ ಇಮಾಮ್ ಗೆ ತೀರ್ಪು ಕೊಡಬಾರದೆ ಎಂದೂ ಕೇಳಬೇಕಾಗಿಲ್ಲ. ಈರ್ವರೂ ಮುಜದ್ದಿದ್ ಗಳು. ಹದೀಸ್ ಗಳನ್ನು ಸಂಶೋಧನೆ ಮಾಡಿ ಸ್ವಯಂ ತೀರ್ಪು ಕೊಡಲು ಅರ್ಹತೆ ಇರುವ ಪ್ರಗಲ್ಭರಾಗಿದ್ದಾರೆ. ಆದಕಾರಣ, ಒಬ್ಬರಿಗೆ ಇನ್ನೊಬ್ಬರ ತೀರ್ಪನ್ನು ನೋಡುವ ಅಗತ್ಯವಿಲ್ಲ. ಅದರಂತೆ, ಖಾಝಿಗಳು ಕೂಡಾ ಸ್ವಯಂ ನಿರ್ಣಯ ತೆಗೆದು ಕೊಳ್ಳಲು ಅರ್ಹರಾಗಿದ್ದಾರೆ.*

ಚಂದ್ರ ದರ್ಶನ ವಾಗಿದೆ ಎಂದು ಕಚಿತವಾದ ಖಾಝಿಗೆ ಪೆರ್ನಾಳ್ ಘೋಷಿಸುವುದು ಕಡ್ಡಾಯ. ಚಂದ್ರ ದರ್ಶನ ಕಚಿತವಾಗದ ಖಾಝಿಗೆ ನೋಂಬು ಹಿಡಿಯಲು ಆಜ್ಙಾಪಿಸುವುದು ಕಡ್ಡಾಯ. ಇದನ್ನು ವಿವಾದ ಮಾಡಬೇಕಾದ ಅಗತ್ಯವೇನೂ ಇಲ್ಲ.

ಚಂದ್ರ ದರ್ಶನ ವಿಷಯದಲ್ಲಿ ಕೂರ ತಂಙಳ್, ದಿಟ್ಟ ನಿರ್ಧಾರವನ್ನೇ ತೆಗೆದುಕೊಂಡರು. ನಿಜಕ್ಕೂ ತಂಙಳ್ ರ ಈ ನಿರ್ಧಾರ ಅಭಿನಂದನಾರ್ಹ. ಚಂದ್ರ ದರ್ಶನ ದ ಬಗ್ಗೆ ಕಚಿತವಾದ ದ.ಕ ದ ಎಲ್ಲಾ ಖಾಝಿಗಳೂ ನಾಳೆ ಪೆರ್ನಾಳ್ ಎಂದು ಕರೆ ಕೊಡುವಾಗ, ತಾನೇನಾದರು ನಾಳೆ ಪೆರ್ನಾಳ್ ಗೆ ಕರೆ ಕೊಡದಿದ್ದರೆ ಮರು ದಿನ ಅದು ಸಮುದಾಯದಲ್ಲಿ ಗೊಂದಲ ಸೃಷ್ಟಿಸಬಹುದು. ಮೊಹಲ್ಲಾಗಳಲ್ಲಿ ಗುಲ್ಮಾಲ್ ಗಳಿಗೆ ಕಾರಣವಾಗಬಹುದು ಎಂದೇನಾದರು ಹೆದರಿ ಕೂರ ತಂಙಳ್, ತನ್ನ ವಿಶ್ವಾಸಕ್ಕೆ ವಿರುದ್ಧವಾಗಿ ಪೆರ್ನಾಳ್ ಆಘೋಷಿಸಲು ಕರೆ ಕೊಟ್ಟಿದ್ದರೆ..! ಕೂರ ತಂಙಳ್ ಅಲ್ಲಾಹನ ಮುಂದೆ ಅದೆಂತಹ ಮಹಾ ಪಾಪಿಯಾಗಿರುತ್ತಿದ್ದರು.!

ತಂಙಳ್ ರನ್ನು ಬೈಹತ್ ಮಾಡಿದ ನೂರಾರು ಮೊಹಲ್ಲಾಗಳ ಸಾವಿರಾರು ಸತ್ಯ ವಿಶ್ವಾಸಿಗಳ ಒಂದು ದಿನದ ಕಡ್ಡಾಯ ಉಪವಾಸವನ್ನು ಇಲ್ಲದಾಗಿಸಿದ ಮಹಾ ಪಾಪ ಕೂರ ತಂಙಳ್ ರ ತಲೆ ಮೇಲಾಗುತ್ತಿತ್ತು. ಖಾಝಿಗಳು ಕೊಡುವ ತೀರ್ಪಿಗೆ ಖಾಝಿಗಳು ಹೊಣೆಯಾಗುತ್ತಾರೆಯೇ ಹೊರತು ಅವರನ್ನು ಅನುಸರಿಸುವವರಲ್ಲ. ಹಾಗಾಗಿ ತಂಙಳ್ ವಿವಾದ ಮಾಡುವವರಿಗೆ ಹೆದರಲಿಲ್ಲ.

ಹೌದು, ಅಲ್ಲಾಹನನ್ನು ಭಯ ಪಡುವವರಿಗೆ ಮನುಷ್ಯರಿಗೆ ಹೆದರುವ ಅಗತ್ಯವಿಲ್ಲ. ಮನುಷ್ಯರಿಗೆ ಹೆದರುವವರು ಅಲ್ಲಾಹನಿಗೆ ಭಯ ಪಡುವುದೂ ಇಲ್ಲ.

ಅಲ್ಲಾಹು ನಮ್ಮೆಲ್ಲರನ್ನು ಇಹ-ಪರ ವಿಜಯಿಗಳ ಸಾಲಿನಲ್ಲಿ ಸೇರಿಸಲಿ, ಅಮೀನ್.

*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.