ಉಳ್ಳಾಲ ಈದ್ ಆಚರಣೆ ಖಾಝಿ ತೀರ್ಮಾನವೇ ಅಂತಿಮ
________________________
ಈದುಲ್ ಫಿತ್ರ್ ಆಚರಣೆ ವಿಚಾರದಲ್ಲಿ ಉಳ್ಳಾಲದ ಜನತೆಗೆ ಯಾವುದೇ ಗೊಂದಲವಿಲ್ಲ. ದರ್ಗಾ ಸಮಿತಿಯ ಕೆಲವು ಸ್ವ ಘೋಷಿತ ಪದಾಧಿಕಾರಿಗಳು ಕೃತಕ ವಿವಾದವನ್ನು ಸೃಷ್ಟಿಸಿದ್ದಾರೆ.
ಈದುಲ್ ಫಿತ್ರ್ ಆಚರಣೆಗೆ ಸಂಬಂಧಿಸಿದಂತೆ ಚಂದ್ರ ದರ್ಶನವಾದರೆ ತೀರ್ಮಾನಿಸಬೇಕಾದದ್ದು ಆಯಾ ಮೊಹಲ್ಲಾದ ಖಾಝಿಗಳಾಗಿದ್ದಾರೆ ಆಯಾ ಖಾಝಿಗಳ ತೀರ್ಮಾನವೇ ಇಸ್ಲಾಂ ಶರೀಅತ್ ಪ್ರಕಾರ ಅಂತಿಮವಾಗಿರುತ್ತದೆ.
ಈದ್ ಕುರಿತಂತೆ ಉಡುಪಿ ಖಾಝಿಯವರಾದ ಬೇಕಲ್ ಉಸ್ತಾದ್ ಹಾಗೂ ಮಂಗಳೂರು ಖಾಝಿಯವರ ಘೋಷಣೆಯು ಅವರನ್ನು ಖಾಝಿಯಾಗಿ ನೇಮಿಸಲ್ಪಟ್ಟ ಮೊಹಲ್ಲಾಗಳಿಗೆ ಮಾತ್ರ ಸೀಮಿತವಾಗುವುದು. ಇತರ ಖಾಝಿಗಳ ತೀರ್ಮಾನವು ಇಸ್ಲಾಮಿನ ಶರೀಅತ್ ಪ್ರಕಾರ ಕೂರತ್ ತಂಙಳ್ ಖಾಝಿಯಾದ ಮೊಹಲ್ಲಾಗಳಿಗೆ ಅನ್ವಯವಾಗುವುದಿಲ್ಲ.
ಈದ್ ಆಚರಣೆಯು ಯಾವುದೇ ಸಂಘಟನೆಯ ಆದೇಶದಂತೆ ನೆರವೇರುವ ರೂಢಿಯಲ್ಲ. ವಿವಿಧ ಮೊಹಲ್ಲಾಗಳಲ್ಲಿ ಪ್ರತ್ಯೇಕ ಪ್ರತ್ಯೇಕ ಈದ್ ಆಚರಣೆಯಾಗುವುದು ಅಪಾಚಾರವೇನಲ್ಲ. ಅದು ಸಹಜವಾಗಿದೆ. ಇದನ್ನು ಗ್ರೂಪಿಸಂ ಎಂದು ಕರೆಯಬೇಕಾಗಿಲ್ಲ. ಕೂರತ್ ತಂಙಳ್ ಖಾಝಿಯಾಗಿರದ ಮೊಹಲ್ಲಾಗಳಲ್ಲಿ ಕೂರತ್ ತಂಙಳ್ ಆದೇಶದಂತೆ ಈದ್ ಆಚರಿಸಬೇಕೆಂದು ಯಾರೂ ಬಯಸಿಲ್ಲ. ಆಯಾ ಮೊಹಲ್ಲಾದವರು ಆಯಾ ಮೊಹಲ್ಲಾದ ಖಾಝಿಗಳ ಆದೇಶದಂತೆ ಈದ್ ಆಚರಿಸುವುದು ಸರಿಯಾದ ಕ್ರಮವಾಗಿದೆ. ಎಲ್ಲಾ ವಿದ್ವಾಂಸರನ್ನು ನಾವು ಗೌರವಿಸಬೇಕು ಎಂಬ ನಿಲುವು ನಮ್ಮದು. ಆಯಾ ಮೊಹಲ್ಲಾದ ಖಾಝಿಗಳ ಆದೇಶದಂತೆ ಆಯಾ ಮೊಹಲ್ಲಾದವರು ಈದ್ ಆಚರಿಸಿ ಪರಸ್ಪರ ವಿವಿಧ ಮೊಹಲ್ಲಾದವರು ಸಹಕರಿಸಿದರೆ ಸಮಸ್ಯೆಯೇ ಉದ್ಭವಿಸುವುದಿಲ್ಲ.
ದ.ಕ. ಜಿಲ್ಲೆಯ ಉಳ್ಳಾಲ ಬೆಳ್ತಂಗಡಿ ತಾಲೂಕಿನ 63 ಮೊಹಲ್ಲಾಗಳು ಸುಳ್ಯ ತಾಲೂಕಿನ 11 ಮೊಹಲ್ಲಾಗಳು ಮತ್ತು ಮುಡಿಪು ಸಂಯುಕ್ತ ಜಮಾಅತ್ಗೊಳಪಟ್ಟ ಕೆಲವು ಮೊಹಲ್ಲಾಗಳು ಸೇರಿ ಕೂರತ್ ತಂಙಳ್ರವರು ಸುಮಾರು 183ಕ್ಕೂ ಅಧಿಕ ಮೊಹಲ್ಲಾಗಳ ಖಾಝಿಗಳಾಗಿದ್ದಾರೆ.
ತಲೆತಲಾಂತರಗಳಿಂದ ಉಳ್ಳಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಖಾಝಿಗಳು ಸೂಚಿಸುವ ದಿನದಂದು ಈದ್ ಆಚರಿಸುತ್ತಾ ಬರಲಾಗುತ್ತಿದೆ. ಅದರಂತೆ ಈ ವರ್ಷವೂ ಖಾಝಿಗಳ ಆದೇಶದಂತೆ ಸೋಮವಾರ ಈದ್ ಆಚರಿಸಲಾಗಿದೆ.
ತನ್ನನ್ನು ಖಾಝಿಯಾಗಿ ಸ್ವೀಕರಿಸಿದ ಎಲ್ಲಾ ಮೊಹಲ್ಲಾಗಳು ಆದಿತ್ಯವಾರ ಉಪವಾಸ ಹಿಡಿದು ಸೋಮವಾರ ಈದ್ ಆಚರಿಸಲು ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ತನ್ನ ತೀರ್ಮಾನವನ್ನು ತಿಳಿಸಿದರು.
ಎಂದಿನಂತೆ ಖಾಝಿಗಳ ಆದೇಶದಂತೆ ಉಳ್ಳಾಲದಲ್ಲಿ ಈದ್ ಆಚರಿಸಿದ್ದರೆ ಗೊಂದಲಕ್ಕೆ ಅವಕಾಶವೇ ಇರುತ್ತಿರಲಿಲ್ಲ.
ಆದರೆ ಖಾಝಿಯವರ ಮಾತನ್ನು ಉಲ್ಲಂಘಿಸಿದ ಸ್ವಯಂ ಘೋಷಿಸಿದ ಉಳ್ಳಾಲ ದರ್ಗಾ ಅಧ್ಯಕ್ಷರು 'ಆದಿತ್ಯವಾರ ಈದ್ ಹಬ್ಬ' ಎಂದು ಶನಿವಾರ ರಾತ್ರಿ ಉಳ್ಳಾಲದ ಕೇಂದ್ರ ಮಸೀದಿಯಲ್ಲಿ ತಕ್ ಬೀರ್ ಮೂಲಕ ಘೋಷನೆ ಮಾಡಿದ್ದು ನಿಯಮಬಾಹಿರವಾಗಿದೆ. ಖಾಝಿಯ ಆದೇಶವನ್ನು ಉಲ್ಲಂಘಿಸುವ ಬೆಳವನಿಗೆಯು ಇತಿಹಾಸದಲ್ಲಿ ಇದೇ ಮೊದಲು ನಡೆದಿರುವುದು. ಇದರಿಂದ ಗೊಂದಲಕ್ಕೊಳಗೊಳಗಾದ ಉಳ್ಳಾಲದ ಮುಸ್ಲಿಂ ಜನರು ರಶೀದ್ ಹಾಜಿಯವರನ್ನು ಸಂಪರ್ಕಿಸಿ ಖಾಝಿಯವರ ನಿರ್ಧಾರದಂತೆ ಸೋಮವಾರವೇ ಈದ್ ಆಚರಿಸಲು ವಿನಂತಿಸಿದ್ದರು. ಅಲ್ಲದೇ ಸ್ವಯಂ ಘೋಷಿತ ಅಧ್ಯಕ್ಷ ಹಾಜಿ ರಶೀದ್ ಅವರಿಗೆ ದೂರವಾಣಿ ಮೂಲಕ ಖಾಝಿ ಕೂರತ್ ತಂಙಳ್ ಸಂಪರ್ಕ ಕಲ್ಪಿಸಿ ಮಾತನಾಡಿಸಿದ ಪ್ರಕಾರ ಖಾಝಿಯವರ ಹೇಳಿಕೆಯಂತೆ ಸ್ವಯಂ ಘೋಷಿತ ಅಧ್ಯಕ್ಷರಿಂದ ರಾತ್ರಿ 1 ಗಂಟೆಗೆ 'ಆದಿತ್ಯವಾರ ಉಪವಾಸ ಮಾಡಿ ಸೊಮವಾರ ಈದ್ ಆಚರಿಸಲು' ದರ್ಗಾ ಮಸೀದಿಯಲ್ಲಿ ಧ್ವನಿವರ್ಧಕ ಮೂಲಕ ಘೋಷಣೆ ಮಾಡಿಸಿ 1.00 ರಾತ್ರಿಗೆ ಉಳ್ಳಾಲದ ಖತಬ್ ಸಮೀಮ್ ಮುಸ್ಲಿಯಾರ್ ನೇತೃತ್ವದಲ್ಲಿ ತರಾವೀಹ್ ನಮಾಜ್ ಮಾಡಲಾಯಿತು.
ಆದರೆ ಬೆಳಿಗ್ಗೆ ಬೆರಳಣಿಕೆಯ ಜನರು ದರ್ಗಾ ಮಸೀದಿಯಲ್ಲಿ ಆದಿತ್ಯವಾರ ಈದ್ ನಮಾಜ್ ನಿರ್ವಹಿಸಿದ್ದರು.
ತಲೆತಲಾಂತರಗಳಿಂದ ನಡೆದು ಬಂದ ಶರೀಅತ್ ನಿಯಮದಂತೆ ಖಾಝಿಗಳು ಸೂಚಿಸುವ ದಿನದಂದು ಈದ್ ನಮಾಝನ್ನು ಉಳ್ಳಾಲದ ದರ್ಗಾ ಮಸೀದಿಯಲ್ಲಿ ನಿರ್ವಹಿಸಲಾಗುತ್ತದೆ. ಅದರಂತೆ ಸೋಮವಾರ ಈದ್ ನಮಾಝ್ ನಿರ್ವಹಿಸಲು ದರ್ಗಾಕ್ಕೆ ಒಳಪಟ್ಟ ಜಮಾಅತರು ಮಸೀದಿಗೆ ಬರುವಾಗ ದರ್ಗಾ ಮಸೀದಿಗೆ ಬೀಗ ಜಡಿಯಲಾಗಿತ್ತು. ಅಲ್ಲಿ ನೆರೆದಿದ್ದ ಸುಮಾರು 2000 ಸಾವಿರಕ್ಕಿಂತಲೂ ಅಧಿಕ ಜಮಾಅತ್ ಬಾಂಧವರ ಬೇಡಿಕೆಯಂತೆ: ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಮಧ್ಯಪ್ರವೇಶ ಮಾಡಿ ಮಸೀದಿಯ ಕೀಲಿ ತರಿಸಿಕೊಂಡು ನಮಾಝ್ ಗೆ ಅವಕಾಶ ಮಾಡಿಕೊಟ್ಟರು.
ಮಸೀದಿಗೆ ಬೀಗ ಜಡಿದ ವಿಚಾರದಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ದರ್ಗಾ ಸಮೀಪದಲ್ಲಿ ನಡೆದಿತ್ತು. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಸ್ವಯಂ ಘೋಷಿತ ಆಡಲಿತ ಸದಸ್ಯರೆನ್ನುವವರು ಜಮಾಅತ್ ಬಾಂಧವರಾದ 17 ಕ್ಕಿಂತಲೂ ಹೆಚ್ಚು ಜನರ ಮೇಲೆ 307 ಕೇಸು ಧಾಖಲಿಸಿದ್ದು ಖಂಡನೀಯವಾಗಿದೆ. ಪೋಲಿಸ್ ಅಧಿಕಾರಿಗಳೇ ಮಧ್ಯ ಪ್ರವೇಶಿಸಿ ಬೀಗ ತೆರೆದಿರುವಾಗ ಮಸೀದಿಗೆ ಅಕ್ರಮ ಪ್ರವೇಶ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು..
ಸ್ವಯಂಘೋಷಿತ ಹಾಜಿ ರಶೀದ್ ನೂತನ ಖಾಝಿಯನ್ನು ನೇಮಕ ಮಾಡುವುದಾಗಿ ಪತ್ರಿಕಾ ಹೇಳಿಕೆ ಕೊಟ್ಟಿರುವುದು ಖೇದಕರ. ಖಾಝಿಗಳನ್ನು ಬೇಕಾಬಿಟ್ಟಿ ಬದಲಾಯಿಸಲು ಇಸ್ಲಾಮಿನ ನಿಯಮಾನುಸಾರ ಸಾಧ್ಯವಿಲ್ಲ. ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ರಶೀದ್ ಹಾಜಿ ಮತ್ತು ಟೀಂ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ. ಹೀಗೆ ಬೇಕಾಬಿಟ್ಟಿಯಾಗಿ ಹೊಸ ಖಾಝಿಯಾಗಿ ಅಧಿಕಾರ ವಹಿಸಲು ಯಾವುದೇ ಪ್ರಬುದ್ಧ ನಿಷ್ಕಳಂಕ, ಧಾರ್ಮಿಕ ವಿಧ್ವಾಂಸರು ಒಪ್ಪಲು ಸಾಧ್ಯವಿಲ್ಲ.
ವಾಸ್ತವದಲ್ಲಿ ಉಳ್ಳಾಲ ದರ್ಗಾದ ಪ್ರಸ್ತುತ ಆಡಳಿತ ಸಮಿತಿಯ ರಚನೆಯೇ ಅಪೂರ್ಣವಾಗಿದೆ.
ಆಡಳಿತ ಸಮಿತಿಯೇ ಸ್ವಘೋಷಿತವಾಗಿರುತ್ತದೆ. ಈ ಬಗ್ಗೆ ವಿವಾದವು ವಕ್ಫ್ ಮಂಡಳಿ ಮತ್ತು ಕೋರ್ಟ್'ನಲ್ಲಿ ಇದೆ.
ಆದುದರಿಂದ ಶಾಂತಿಪ್ರಿಯರಾದ ಉಳ್ಳಾಲದ ಜನತೆ ಸಂಯಮದಿಂದ್ದಾರೆ.
ಸ್ವಯಂ ಘೋಷಿತ ಅಧ್ಯಕ್ಷರಾದವರು ಪತ್ರಿಕಾಗೋಷ್ಠಿ ನಡೆಸಿ ಸತ್ಯಕ್ಕೆ ವಿರುದ್ಧವಾದ ವಿಷಯಗಳನ್ನು ಪ್ರತಿಪಾದಿಸುತ್ತಾರೆ. ಸಹಾಯಕ ಖಾಝಿ ಎಂದು ಅವರು ಒಬ್ಬರನ್ನು ಉಲ್ಲೇಖಿಸಿದ್ದಾರೆ. ಉಳ್ಳಾಲದಲ್ಲಿ ಕೂರತ್ತ್ ತಂಗಳರು ಖಾಝಿ ಸ್ವೀಕರಿಸಿದ ನಂತರ ಯಾರನ್ನು ತಂಗಳ್ ಸಹಾಯಕ ಖಾಝಿಯಾಗಿ ನೇಮಿಸಿಲ್ಲ. ಖಾಝಿ ಗಳ ಗಮನಕ್ಕೆ ತರದೆ ಯಾರನ್ನು ಸಹಾಯಕ ಖಾಝಿಯಾಗಿ ನೇಮಿಸುವುದು ಸ್ವೀಕಾರಾಹವಲ್ಲ.
ಇನ್ನೊಂದು ಆರೋಪವೇನೆಂದರೆ ಖಾಝಿಯವರು ಒಂದು ವರ್ಷದಿಂದ ಉಳ್ಳಾಲಕ್ಕೆ ಬಂದಿಲ್ಲ ಎನ್ನುವುದು.
ಇದು ಶುದ್ಧ ಸುಳ್ಳು ಸತ್ಯಕ್ಕೆ ದೂರವಾಗಿರುತ್ತದೆ.
*ಇವರು ರಾಜಕೀಯದವರು ತಾನೆ, ಸುಳ್ಳು ಹೇಳುವುದು ಅವರ ಕಾಯಕ.*
*ದಿನಾಂಕ 28:06:2016ರಂದು ಉಳ್ಳಾಲ ಕೇಂದ್ರ ಮಸ್ಜಿದಿಗೆ ಬಂದಿದ್ದರು.*
*ದರ್ಗಾ ಅಧೀನದ ಅಳೇಕಲದ ಅಲ್ ಅಮೀನ್ ಜುಮಾ ಮಸ್ಜಿದಿನಲ್ಲಿ 21:06:2017ರಂದು ರಮಳಾನ್ ವಿಶೇಷ ಪ್ರಾರ್ಥನೆಗೆ ನೇತೃತ್ವ ವಹಿಸಿರುವುದು ಖಾಝಿಯವರಾಗಿದ್ದಾರೆ.*
*ಅದೇ ತರಹ ಆಝಾದ್ ನಗರ ಹಾಗೂ ದಾರಂದ ಬಾಗಿಲು ಎಂಬ ಎರಡು ಮೊಹಲ್ಲಾಗಳಲ್ಲಿ ನೂತನ ಜುಮಾಃ ಸ್ಥಾಪಿಸಿದ್ದು ಖಾಝಿಗಳೇ*
*ದರ್ಗಾ ಅಧೀನದ ಮಸೀದಿಗಳಾದ ಕಲ್ಲಾಪು, ಮದನಿ ನಗರ, ಮುಕ್ಕಚೇರಿ, ಸಹಿತ ಹಲವು ಮೊಹಲ್ಲಾಗಳ ವಿವಿಧ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಲೇ ಇದ್ದಾರೆ.*
ಹೀಗೆ ಹಲವಾರು ಕಾರ್ಯಕ್ರಮ ಗಳಲ್ಲಿ ಭಾಗವಹಿಸಿದ್ದಾರೆ.
ಹೀಗಿರುವಾಗ ಅವರು ೧ ವರ್ಷದಿಂದ ಸಂಪರ್ಕದಲ್ಲಿ ಇಲ್ಲ ಎಂಬುದು ಸುಳ್ಳಲ್ಲವೇ??
ಉಳ್ಳಾಲದ ಜನತೆ ಸುಖಾಂತ್ಯವನ್ನು ಬಯಸುತ್ತಾರೆ. ದರ್ಗಾದ ಬೈಲಾ ಪ್ರಕಾರ ದರ್ಗಾ ಅಧೀನದ ಎಲ್ಲಾ ಮೊಹಲ್ಲಾಗಳಿಗೂ ಕ್ರಮ ಬದ್ಧವಾದ ಚುನಾವಣೆ ನಡೆಸುವ ಮೂಲಕ ಆಡಳಿತ ಸಮಿತಿ ಪುನರ್ರಚಿಸಿದರೆ ಸಮಸ್ಯೆ ಇತ್ಯರ್ಥವಾಗುತ್ತದೆ. ವಕ್ಫ್ ಇಲಾಖೆ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಎಂದು ಪತ್ರಿಕಾಗೋಷ್ಠಿ ಮೂಲಕ ವಿನಂತಿಸುತೇವೆ.
Comments
Post a Comment