ಉಲಮಾಗಳು ಪ್ರವಾದಿಗಳ ಉತ್ತರಾಧಿಕಾರಿಗಳು.ಲಕ್ಷಾಂತರ ಪ್ರವಾದಿಗಳು ಪವಿತ್ರ ದೀನಿನ ಪ್ರಚಾರಕರಾಗಿ ಬಂದಿದ್ದರಾದರೂ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಆಗಮನದೊಂದಿಗೆ ಪ್ರವಾದಿಗಳ ಶೃಂಖಲೆಗೆ ಕೊನೆಗೊಂಡಿತ್ತು.
ನಂತರ ಅತ್ಯಂತ ಜವಾಬ್ದಾರಿ ಯುತ ಮತ್ತು ಅಷ್ಟೇ ತ್ರಾಸದಾಯಕ ಹಾಗೂ ತ್ಯಾಗಭರಿತ ಪ್ರಭೋದನಾ ಪ್ರಚಾರ ಕಾರ್ಯವನ್ನು ಹೊತ್ತುಕೊಂಡವರೇ ಉಲಮಾಗಳು.
ಉಲಮಾಗಳ ಜವಾಬ್ದಾರಿ ಸಣ್ಣದಲ್ಲ, *ಉಲಮಾಗಳು* ಕೇವಲ ವೇತನ ಆಧರಿತ ವೃತ್ತಿ ಮಾಡಿದವರಲ್ಲ.
ನಮ್ಮನ್ನು ಮುನ್ನೆಡೆಸಿದ /ಮುನ್ನೆಡಸುತ್ತಿರುವ ಉಲಮಾಗಳು ರಾತ್ರಿ ಹಗಲೆನ್ನದೆ ದೀನೀ ಚಟುವಟಿಕೆಗಳಲ್ಲಿ ನಿರಂತರವಾಗಿ ಕಾರ್ಯಚರಿಸಿದ್ದರಿಂದಲೇ ಇಂದಿಗೂ ಇಸ್ಲಾಂ/ಸುನ್ನತ್ ಜಮಾತ್ ತಲೆಎತ್ತಿ ನಿಂತಿದೆ.
ನೂತನವಾದ/ಭೀಕರವಾದ/ಕೋಮುವಾದಗಳ ಅಲೆಗಳಲ್ಲಿ ಸಿಲುಕಿ ಮುಸ್ಲಿಂ ಯುವಕರು ಕೊಚ್ಚಿ ಹೋಗುತ್ತಿರುವ ಸಂಧಿಗ್ದಘಟ್ಟಗಳಲ್ಲಿ ನಮ್ಮ *ಉಲಮಾಗಳು* ಕ್ಷಿಪ್ರಗತಿಯಲ್ಲಿ ಕಾರ್ಯಚರಿಸಿದ್ದರಿಂದಲೇ ಸಮಾಜದಲ್ಲಿ ಸಮಗ್ರ ಸುದಾರಣೆಯಾಯಿತು.
ಇದೀಗ ಮತ್ತೊಮ್ಮೆ ಕೋಮುವಾದ ತನ್ನ ಹೆಡೆಯನ್ನು ಬಿಚ್ಚಿದೆ.
ಯುವಕರ ಬ್ರೈನ್ ವಾಶ್ ಮಾಡಲಾಗುತ್ತಿದೆ.
ಕೋಮುವಾದ ಭಯೋತ್ಪಾದನೆಯಾಗಿ ಹಸಿರಕ್ತ ಕುಡಿಯಲು ಹಪಿಹಪಿಸುತ್ತಿದೆ.
ಅತಿರೇಕ, ಅವಿವೇಕ, ಕ್ಷಣಿಕ ಉದ್ವಿಗ್ನತೆ, ಭಾವೋದ್ವೇಗ ಇದ್ಯಾವುದೂ ಸಮಸ್ಯೆಗೆ ಪರಿಹಾರವಲ್ಲ.
ಅಪಹಾಸ್ಯ, ನಿಂದನೆ, ಪರಿಹಾಸ್ಯ ಸಮಸ್ಯೆಯನ್ನು ಜಟಿಲಗೊಳಿಸುತ್ತದೆಯೇ ವಿನಹ ನಂದಿಸುವ ವಿಧಾನವಲ್ಲ.
ಯುವಕರನ್ನು ,ಮಹಲ್ಲ್ ಗಳನ್ನು ಆಡಳಿತ ಸಮಿತಿಗಳನ್ನು ಹಾಗೂ ಸಮುದಾಯದ ಪ್ರತಿಯೊಬ್ಬರನ್ನು ಪ್ರಭುದ್ದಗೊಳಿಸುವ ನಲ್ಮೆಯ ದಾರಿಗೆ ಕರೆತರುವ ಮಹತ್ತರವಾದ ಜವಾಬ್ದಾರಿ ಉಲಮಾಗಳ ಮೇಲಿದೆ.
ಪಕ್ವತೆ ಹೊಂದಿದ ಕೋಮುವಾದ ವಿಷಬೀಜ ನಂಟು ಅಂಟದ ಕಾರ್ಯಗಳನ್ನು ದೂರದೃಷ್ಟಿಯಿಂದ ಸಮೀಪಿಸಿ ಪದ್ದತಿ ಆವಿಷ್ಕರಿಸುವ ಯುವ ತಲೆಮಾರೊಂದನ್ನು ಸೃಷ್ಟಿಸುವ ಅನಿವಾರ್ಯತೆ ಇದೆ.
ಜವಾಬ್ದರಿಯುತ ಸ್ಥಾನದಲ್ಲಿರುವ ಉಲಮಾಗಳಿಂದ ಮಾತ್ರ ಸಮಾಜ ಸುದಾರಣೆ ಸಾಧ್ಯ.
ಸಮುದಾಯದ ನಾಡಿಮಿಡಿತ ಅರಿತು ಕಾರ್ಯಚರಿಸುವ ಅಗತ್ಯ ಉಲಮಾಗಳ ಮೇಲಿದೆ.
ಕೂರತಂಙಳ್,ಬೇಕಲ ಉಸ್ತಾದ್,ಮಂಜನಾಡಿ ಉಸ್ತಾದ್,ಮಾಣಿ ಉಸ್ತಾದ್ ರಂತಹ ಘಟಾನುಘಟಿ ಉಲಮಾಗಳ ನೇತೃತ್ವದಲ್ಲಿ ನಡೆಯುವ ಬೃಹತ್ ಉಲಮಾ ಸಂಗಮದಲ್ಲಿ ಸುಲ್ತಾನುಲ್ ಉಲಮಾ,ಖಲೀಲ್ ತಂಙಳ್, ಪೇರೋಡು ಉಸ್ತಾದ್, ಕೂಟಂಬಾರ ದಾರಿಮಿ ಮುಂತಾದ ದಿಗ್ಗಜ ಉಲಮಾಗಳ ಭೋಧನೆಗಳು ನಡೆಯಲಿದೆ.
*ಇನ್ಶಾಅಲ್ಲಾ SEDC ಕಾರ್ಯವ್ಯಾಪ್ತಿಯಲ್ಲಿ ಬರುವ ಸಾವಿರಕ್ಕಿಂತಲೂ ಅಧಿಕ ಉಸ್ತಾದರುಗಳು ಸೇವೆಯಲ್ಲಿದ್ದಾರೆ. ನಾಡಿದು ಅಕ್ಟೋಬರ್ 8,9,10 ದಿನಾಂಕಗಳಲ್ಲಿ ಉಪ್ಪಿನಂಗಡಿಯ ಹೃದಯಭಾಗದಲ್ಲಿ ಬೃಹತ್ ಉಲಮಾ ಸಂಗಮ ನಡೆಯಲಿದೆ.*
ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಇದರ ಅಧೀನದಲ್ಲಿ ಜಿಲ್ಲೆ,ತಾಲೂಕು,ಹಾಗೂ ಝೋನಲ್ ಸಮಿತಿಗಳನ್ನು ರಚಿಸಲಾಗಿದೆ.
ಇದರ ಅಭಿಯಾನ ಕಾರ್ಯಾವೂ ನಡೆಯು ತ್ತಿದೆ.
ಝೋನಲ್ ವ್ಯಾಪ್ತಿಗೆ ಬರುವ ರೇಂಜ್ ನ ಮದರಸ ಮಸೀದಿ ಉಸ್ತಾದರುಗಳಲ್ಲದೆ ಆಯಾ ಊರಿನಲ್ಲಿರುವ ಉಸ್ತಾದರುಗಳು ಉಲಮಾ ಸಂಗಮದಲ್ಲಿ ಭಾಗವಹಿಸಿ ಸಹಕರಿಸಿ ವಿಜಯಗೊಳಿಸಬೇಕಾಗಿರುವುದು ಕಡ್ಡಾಯಯೆಂಬುದನ್ನು ನೆನಪಿಸುತ್ತಾ.....
*ಉಲಮಾ ಕಾನ್ಫ್ರೆನ್ಸ್ ನಲ್ಲಿ ತಮ್ಮ ಉಪಸ್ಥಿತಿಯು ಕಡ್ಡಾಯವಾಗಿರುವುದರಿಂದ ಅದರ ಸ್ಪಷ್ಟ ಮಾಹಿತಿಗಾಗಿ ಝೋನಲ್ ಸಮಿತಿಯ ಕಾರ್ಯದರ್ಶಿಗಳನ್ನು ಸಂಪರ್ಕಿಸಿರಿ ಅಥವಾ ನೀವು ವಾಸಿಸುವ ಪ್ರದೇಶಗಳಲ್ಲಿ ಸಮಿತಿ ರಚನೆಯಾಗದೆ ಇದ್ದಲ್ಲಿ ಉಲಮಾ ಸಂಗಮ ದಿನದಂದು ರಿಜಸ್ಟ್ರೇಶನ್ ಸೌಕರ್ಯ ಮಾಡಿದ್ದರೂ ಅಂದಿನ ಸಮಯದ ಅಭಾವ ಮತ್ತು ಬ್ಯುಝಿ ಇರಬಹುದೆಂಬ ನಿಟ್ಟಿನಲ್ಲಿ ಸುಲಭ ಸೌಕರ್ಯಕ್ಕೆ ಬೇಕಾಗಿ SEDC ಪಡೀಲ್ ನಲ್ಲಿರುವ ಇಲ್ಮ್ ಸೆಂಟರ್ ನಿಮಗಾಗಿ ಸದಾ ಸಮಯ ಬಾಗಿಲು ತೆರೆದಿದೆ.ಅಲ್ಲಿ ನಿಮ್ಮ ಹೆಸರುಗಳನ್ನು ನೊಂದಾಯಿಸತಕ್ಕದ್ದು.*
ನನ್ನ ಪ್ರೀತಿಯ ಉಸ್ತಾದರುಗಳು ಉಲಮಾ ಸಂಗಮ ನಮ್ಮ ಸಂಗಮವಾಗಿದ್ದು ಅದರ ಸಂಪೂರ್ಣ ವಿಜಯ ನಮ್ಮ ಕೈಯಲ್ಲಾಗಿದೆ.
ತಮ್ಮ ಉಪಸ್ಥಿತಿ ಕಡ್ಡಾಯವೆಂಬುದನ್ನು ಉಸ್ತಾದರುಗಳನ್ನು ಪದೇ ಪದೇ ನೆನಪಿಸುವುದು ಅದಬ್ ಗೆ ವಿರುದ್ದವೆಂದು ಬಗೆದು ಎಲ್ಲರನ್ನು ಮತ್ತೊಮ್ಮೆ ಮಗದೊಮ್ಮೆ ಸ್ವಾಗತಿಸುತ್ತೇನೆ.
*ಅಕ್ಟೋಬರ್ ದಿನಾಂಕ 8,9,10*
*@ ಉಪ್ಪಿನಂಗಡಿ*
ಸಂಪರ್ಕಿಸಬೇಕಾದ ನಂಬರುಗಳು:
*SEDC 8242423340*
*9844996383*
*7899953058*
(ಹೈದರ್ ಮದನಿ)
*9901892477*
(ಹಾರೀಸ್ SEDC)
✍ *KKM ಕಾಮಿಲ್ ಸಖಾಫಿ*
(ಅಧ್ಯಕ್ಷರು SEDC ಕರ್ನಾಟಕ)
(Mob: 9448502839)
Comments
Post a Comment