ಕಾರ್ಯಕರ್ತರಿಗೆ ಹೆಚ್ಚಿನ ಅರಿವು , ವೈಯಕ್ತಿಕ ಮತ್ತು ಸಂಘಟನಾ ಜವಬ್ದಾರಿ, ಇಸ್ಲಾಮೀ ದಿನಚರಿ, ಮತ್ತು ಸಾತ್ವಿಕ ಪರಂಪರೆಯ ಅನುಸರಣೆ ಇತ್ಯಾದಿಗಳ ಬಗ್ಗೆ ಸಮಗ್ರ ತರಬೇತಿ ಯ ಪ್ರಥಮ ಹಂತದ ತರಬೇತಿಯನ್ನು ಕೊಡುವ ಉದ್ದೇಶದಿಂದ ಕೆ.ಸಿ.ಎಫ್ ರಾಷ್ತ್ರೀಯ ಮಟ್ಟದಲ್ಲಿ ಹಮ್ಮಿಕೊಂಡ 'adelento-17' ತರಬೇತಿ ಶಿಬಿರದ ರಿಯಾದ್ ಝೋನಲ್ ನ ಶಿಬಿರಕ್ಕೆ ದಿನಾಂಕ 5/10/2017 ರ ರಾತ್ರಿ ರಿಯಾದ್ ಝೋನ್ ಅಧೀನದಲ್ಲಿರುವ 'ಗೊರ್ನಾತ್ ಸೆಕ್ಟರ್'ನಲ್ಲಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಒಂದು ತಿಂಗಳ ಕಾಲ ರಿಯಾದ್ ಝೋನ್ ಅಧೀನದಲ್ಲಿರುವ 12 ಸೆಕ್ಟರ್ ಗಳಲ್ಲಿ ವಿವಿಧ ದಿನಗಳಲ್ಲಿ ವಿವಿಧ ಸಮಯಗಳಲ್ಲಿ ತರಗತಿ ನಡೆಯಲಿಕ್ಕಿದೆ.ತರಗತಿಯನ್ನು ಕೆ.ಸಿ.ಎಫ್.ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರು,ಗಲ್ಫ್ ಇಶಾರ ಪತ್ರಿಕೆಯ ಸಂಪಾದಕರು ಖ್ಯಾತ ವಾಗ್ಮಿಯು ಆಗಿರುವಂತಹಾ ಡಿ.ಪಿ.ಯೂಸುಫ್ ಸಖಾಫಿ ಬೈತಾರ್ ನಡೆಸಿ ಕೊಡಲಿದ್ದಾರೆ.
2 ಗಂಟೆಗಳ ಕಾಲ ನಡೆಯುವ ತರಗತಿಯು ಕಾರ್ಯಕರ್ತರಲ್ಲಿ ಹೆಚ್ಚಿನ ಸಂಘಟನಾ ಮನೋಭಾವನೆಯನ್ನು ಸೃಷ್ಟಿಸಲಿದೆ.ತರಗತಿಯ ಕೊನೆಯಲ್ಲಿ ಮುಕ್ತವಾದ ಪ್ರಶ್ನೋತರ ವೇದಿಕೆಯನ್ನು ಹಮ್ಮಿಕೊಂಡಿದು ,ಎಲ್ಲಾ ಕೆ.ಸಿ.ಎಫ್.ಕಾರ್ಯಕರ್ತರು ತಮ್ಮ ಸೆಕ್ಟರ್ ನಲ್ಲಿ ನಡೆಯುವ ಈ ವಿಶೇಷ ತರಗತಿಗೆ ತಪ್ಪದೇ ಹಾಜರಾಗಿ ಸದುಪಯೋಗ ಪಡಿಸಿ ಕೊಳ್ಳ ಬೇಕೆಂದು ರಿಯಾದ್ ಝೋನ್ ಕೇಳಿಕೊಂಡಿದೆ.
-ಪಿ.ಕೆ ಎಮ್ ಉರುವಾಲು ಪದವು
-
Comments
Post a Comment