ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ವತಿಯಿಂದ ಸುನ್ನೀ ವಿದ್ಯಾಭ್ಯಾಸ ಬೋರ್ಡಿನ ಸಹಯೋಗದೊಂದಿಗೆ ಪಬ್ಲಿಕ್ ತರಗತಿಯ ಉಸ್ತಾದರುಗಳಿಗೆ ಪರೀಕ್ಷಾ ಸಂಬಂಧಿತ ವಿಶೇಷ ಮಾಹಿತಿ ಕಾರ್ಯಾಗಾರ ಉಳ್ಳಾಲದ ಆಝಾದ್ ನಗರದಲ್ಲಿ ನಡೆಯಿತು.
ಮುಫತ್ತಿಶ್ ಹಮೀದ್ ಮದನಿ ಬೊಳ್ಮಾರ್ ಮಾಹಿತಿ ವಿನಿಮಯ ಮಾಡಿದರು. ರೇಂಜ್ ಅಧ್ಯಕ್ಷರಾದ ಜಲಾಲ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೇಂಜ್ ಪರೀಕ್ಷಾ ವಿಭಾಗ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಪರೀಕ್ಷಾ ವಿಭಾಗ ಚೇಯರ್ಮಾನ್ ಯೂನುಸ್ ಇಮ್ದಾದಿ ಅಲ್ ಫುರ್ಖಾನೀ ಧನ್ಯವಾದ ಮಾಡಿದರು.
ಪ್ರಸ್ತುತ ಕಾರ್ಯಾಗಾರದಲ್ಲಿ ಪಬ್ಲಿಕ್ ತರಗತಿಯ ಅಧ್ಯಾಪಕರು ಉಪಸ್ಥಿತರಿದ್ದರು.
Comments
Post a Comment