🔸 ಉಳ್ಳಾಲ ಉರೂಸ್ 🔸
ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾರ್ಚ್ 03 ( ಗುರುವಾರ) ಉಳ್ಳಾಲ ಉರೂಸಿನಲ್ಲಿ.
ಉಳ್ಳಾಲದ ಗೌರವಾನ್ವಿತ ಖಾಝಿಯಾದ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಅಲ್ ಬುಖಾರಿ ಕೂರತ್ ತಂಗಲ್ ರವರ ನೇತೃತ್ವದಲ್ಲಿ ಉಳ್ಳಾಲ ಉರೂಸ್ ಕಾರ್ಯಕ್ರಮ ನಡೆಯುತ್ತಿದ್ದು, ಮಾರ್ಚ್ 03, ಗುರುವಾರದಂದು ಜಾಗತಿಕ ಮುಸಲ್ಮಾನರ ಸುಲ್ತಾನ್, ಅನಾಥರ ಸಂರಕ್ಷಕ, ಸುನ್ನೀ ಸಾಮ್ರಾಜ್ಯದ ಅನಿಷೇಧ್ಯ ನೇತಾರ, ಶೈಕ್ಷಣಿಕ ಅಭಿವೃದ್ಧಿಯ ಹರಿಕಾರ, ಭಾರತದ ಮಹೋನ್ನತ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಮಾರ್ಚ್ 03 ( ಗುರುವಾರ) ಉಳ್ಳಾಲ ಉರೂಸಿನಲ್ಲಿ ಭಾಗವಹಿಸಿ ಮುಖ್ಯ ಪ್ರಭಾಷಣ ನಡೆಸಲಿರುವರು.
ಅಂದು ಲಕ್ಷಾಂತರ ಮಂದಿ ಪಾಲ್ಗೊಳ್ಳುವ ಮೂಲಕ ಉಳ್ಳಾಲ ಉರೂಸಿಗೆ ಹೊಸ ಚೈತನ್ಯ ಸಿಗಲಿದೆ.
ಉಳ್ಳಾಲ ಅಂದು ಅಕ್ಷರಶಃ ಜನ ಸಾಗರದಿಂದ ಸ್ತಬ್ಧವಾಗಲಿದೆ.
ಉರೂಸಿನ ಎಲ್ಲಾ ಸ್ವಯಂಸೇವಕರು ಕರ್ತವ್ಯ ನಿಭಾಯಿಸಿ, ಸಹಕರಿಸಲು ಉರೂಸ್ ಸಮಿತಿ ಕೋರಿದೆ.
ಊರ ಪರವೂರಿನ ಎಲ್ಲರೂ ಮಗ್ರಿಬಿಗೆ ಮುಂಚಿತವಾಗಿಯೇ ಉಳ್ಳಾಲ ತಲುಪಲು ಪ್ರಯತ್ನಿಸಿ.
Comments
Post a Comment