SYS ಹರೇಕಳ ಸೆಂಟರ್ ಆಶ್ರಯದಲ್ಲಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರು ಮಾಸಂಪ್ರತಿ ನಡೆಸಿಕೊಂಡು ಬರಲು ಇಜಾಝತ್ ನೀಡಿರುವ ಮೆಹ್ಫಿಲೇ ತ್ವಯ್ಬಃ ದ್ಸಿಕ್ರ್ ಮಜ್ಲಿಸ್ ಚಾಲನಾ ಸಂಗಮ ಹಾಗು ಮಾಸಿಕ ಸಭೆ
SYS ಹರೇಕಳ ಸೆಂಟರ್ ಆಶ್ರಯದಲ್ಲಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರು ಮಾಸಂಪ್ರತಿ ನಡೆಸಿಕೊಂಡು ಬರಲು ಇಜಾಝತ್ ನೀಡಿರುವ ಮೆಹ್ಫಿಲೇ ತ್ವಯ್ಬಃ ದ್ಸಿಕ್ರ್ ಮಜ್ಲಿಸ್ ಚಾಲನಾ ಸಂಗಮ ಹಾಗು ಮಾಸಿಕ ಸಭೆ ಮುಹ್ಯಿದ್ದೀನ್ ಕೇಂದ್ರ ಜುಮಾ ಮಸೀದಿ ಬೈತಾರ್ ಇದರ ಹಾಲ್ ನಲ್ಲಿ ನಡೆಯಿತು.
ಎಸ್ ವೈ ಎಸ್ ಹರೇಕಳ ಸೆಂಟರ್ ಅಧ್ಯಕ್ಷರಾದ ಅಬ್ದುರ್ರಝ್ಝಾಖ್ ಆಲಡ್ಕ ಅಧ್ಯಕ್ಷತೆ ವಹಿಸಿದ್ದರು. ಸೆಂಟರ್ ಉಪಾಧ್ಯಕ್ಷರಾದ ಹೈದರ್ ಸಖಾಫಿ ಇನೋಳಿ ಮೆಹ್ಫಿಲೇ ತ್ವಯ್ಬಃ ದ್ಸಿಕ್ರ್ ಮಜ್ಲಿಸಿನ ನೇತ್ರತ್ವ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಸೆಂಟರ್ ಅಧೀನದ ಎಲ್ಲಾ ಬ್ರಾಂಚುಗಳಲ್ಲಿಯೂ ಮಾಸಂಪ್ರತಿ ಮೆಹ್ಫಿಲೇ ತ್ವಯ್ಬಃ ಸಂಗಮ ಹಮ್ಮಿಕೊಳ್ಳಲಾಗುವುದೆಂದು ತೀರ್ಮಾನಿಸಿ ಪ್ರತೀ ಬ್ರಾಂಚುಗಳಿಗೂ ಮೆಹ್ಫಿಲೇ ತ್ವಯ್ಬಃದ ಪ್ರತಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬೈತಾರ್ ಮುಹ್ಯಿದ್ದೀನ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷರಾದ ಮುಸ್ತಫ ಎಂ ಐ ಆರ್ ಹಾಗು ಸೆಂಟರ್ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸೆಂಟರ್ ಪ್ರಧಾನ ಕಾರ್ಯದರ್ಶಿ ಕಾಸಿಂ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಅಶ್ರಫ್ ಮುಸ್ಲಿಯಾರ್ ಧನ್ಯವಾದಗೈದರು.
Comments
Post a Comment