Skip to main content

ಸುನ್ನತ್ ಕರ್ಮದ ಬಗ್ಗೆ ಅಪಸ್ವರ  ಖಂಡನೀಯ:      ಎಸ್ಸೆಸ್ಸೆಫ್

ಬೆಂಗಳೂರು: ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ತಮ್ಮ ರಾಜಕೀಯ ಭಾಷಣದಲ್ಲಿ ಮುಂದಿನ ದಿನಗಳಲ್ಲಿ ಮುಸ್ಲಿಂ ಪದ್ದತಿಯಾಗಿರುವ  ಸುನ್ನತಿ ಕರ್ಮವನ್ನು ನಿಷೇಧ ಮಾಡುವ ಬಗ್ಗೆ ಪ್ರಸ್ತಾಪ ಮಾಡಿ   ಅಪಸ್ವರ ಎತ್ತಿರುವುದನ್ನು    ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ತೀವ್ರವಾಗಿ ಖಂಡಿಸಿದ್ದಾರೆ.
 ಸುನ್ನತೀ ಕರ್ಮ ವೈದ್ಯಶಾಸ್ತ್ರವೂ ಅಂಗೀಕರಿಸುತ್ತಿದ್ದು ಏಡ್ಸ್ ನಂತಹ ಮಾರಕ ರೋಗಗಳು ವ್ಯಾಪಿಸುತ್ತಿರುವ ಕೆಲವು ದೇಶಗಳಲ್ಲಿ  ತಡೆಗಟ್ಟಲು ಸುನ್ನತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
2012ರಲ್ಲಿ ಜಿಂಬಾಬ್ವೆ ಯಲ್ಲಿ 
 ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 170ಕ್ಕೂ ಹೆಚ್ಚು ಸಂಸದರು ಹಾಗೂ ಸಂಸತ್ತಿನ ನೌಕರರು ಸುನ್ನತಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದು ವರದಿಯಾಗಿತ್ತು. .ಜಿಂಬಾಬ್ವೆಯಲ್ಲಿ ಶೇ.15ರಷ್ಟು ಜನರಿಗೆ ಎಚ್‌ಐವಿ ಸೋಂಕು ತಗುಲಿದ್ದಾಗ ಈ ಪ್ರಮಾಣವನ್ನು ಕಡಿಮೆಗೊಳಿಸುವ ನಿರ್ಧಾರದೊಂದಿಗೆ ನಡೆದ ಎಚ್‌ಐವಿ/ಏಡ್ಸ್‌ನ ವಿರುದ್ಧ ಜಿಂಬಾಬ್ವೆ ಸಂಸದರ ಅಭಿಯಾನದಲ್ಲಿ(ಜೆಡ್‌ಐಪಿಎಎಚ್) ಸಂಸದರು ಈ ಘೋಷಣೆ ಮಾಡಿದ್ದರು.
150 ಪುರುಷ ಸಂಸದರು ಸುನ್ನತಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದು, ಮಿಕ್ಕ ಮಹಿಳಾ ಸಂಸದರು ಪತಿರಾಯರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಲು ಮನವೊಲಿಸುವುದಾಗಿ ಶಪಥ ಮಾಡಿದ್ದರೆಂದೂ ವರದಿಯಾಗಿತ್ತು.
 ಇದರಿಂದ 2010ರಲ್ಲಿ ಜಿಂಬಾಬ್ವೆಯ ಶೇ.80ರಷ್ಟು ಯುವಕರಿಗೆ(ಸುಮಾರು 3 ಕೋಟಿ) ಸುನ್ನತಿ ಮಾಡಲಾಗಿತ್ತು. ಈ ಕ್ರಮದಿಂದ ಸ್ಫೂರ್ತಿ ಪಡೆದುಕೊಂಡ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜೂಮಾ ಅವರು ದೇಶದ ಯುವಕರು ಸುನ್ನತಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು.
ಸುನ್ನತಿ ಎಂಬುದು ಹಲವು ರೋಗಗಳಿಗೆ ಮುಂಜಾಗೃತಾ ಚಿಕಿತ್ಸಾ ಕ್ರಮವಾಗಿರುತ್ತದೆ‌. ಲೋಕಜ್ಞಾನವಿಲ್ಲದವರು ಮಾತ್ರ ಮೂಢನಂಬಿಕೆಗಳಿಗೂ ಸುನ್ನತಿಗೂ ತಳುಕು ಹಾಕಬಲ್ಲರು. 
ಸುನ್ನತಿ(ಸರ್ಕಮ್‌ಸಿಷನ್) ಒಂದು ಸರಳವಾದ ಶಸ್ತ್ರ ಚಿಕಿತ್ಸೆಯಾಗಿದೆ.  ಇಸ್ಲಾಂ ಸೇರಿದಂತೆ ಕೆಲವು ಧರ್ಮಗಳಲ್ಲಿ ಸುನ್ನತಿಯು ಸಂಪ್ರದಾಯದ ಭಾಗವಾಗಿಯೇ ಇದೆ.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಸುನ್ನತಿ ಶಸ್ತ್ರ ಚಿಕಿತ್ಸೆ ಒಂದು ಉತ್ತಮ ವಿಧಾನ. ಸುನ್ನತಿಗೆ ಒಳಗಾಗಿರುವ ಪುರುಷರು ಏಡ್ಸ್‌ಗೆ ತುತ್ತಾಗುವ ಪ್ರಮಾಣ ಶೇ.60ರಷ್ಟು ಕಡಿಮೆಯಿರುತ್ತದೆ ಎಂದು ಪುರಾವೆಗಳಿಂದ ಸಾಬೀತಾಗಿದೆ. *ಇಂತಹ ಸಂಪ್ರದಾಯ ಮತ್ತು ಧರ್ಮದಾಚರಣೆಯನ್ನು ನಿಷೇಧ ಮಾಡುವ ಪ್ರಸ್ತಾಪದ ಹಿಂದೆ ವೋಟ್ ಬ್ಯಾಂಕ್ ಚಿಂತನೆ ಮಾತ್ರ ವಾಗಿದ್ದು ಒಡೆದು ಆಳುವ ನೀಚ ಕೃತ್ಯಕ್ಕೆ ಈಶ್ವರಪ್ಪ ಕೈಹಾಕಿರುದು ಹತಾಶೆಯನ್ನು ತೋರಿಸುತ್ತದೆ* ಎಂದು ಇಸ್ಮಾಈಲ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. *ಎಸ್ಸೆಸ್ಸೆಫ್

ಬೆಂಗಳೂರು: ರಾಜಕೀಯ ಪಕ್ಷವೊಂದರ ಮುಖಂಡರೊಬ್ಬರು ತಮ್ಮ ರಾಜಕೀಯ ಭಾಷಣದಲ್ಲಿ ಮುಂದಿನ ದಿನಗಳಲ್ಲಿ ಮುಸ್ಲಿಂ ಪದ್ದತಿಯಾಗಿರುವ  ಸುನ್ನತಿ ಕರ್ಮವನ್ನು ನಿಷೇಧ ಮಾಡುವ ಬಗ್ಗೆ ಪ್ರಸ್ತಾಪ ಮಾಡಿ   ಅಪಸ್ವರ ಎತ್ತಿರುವುದನ್ನು    ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯಾಧ್ಯಕ್ಷ ಇಸ್ಮಾಈಲ್ ಸಖಾಫಿ ಕೊಡಗು ತೀವ್ರವಾಗಿ ಖಂಡಿಸಿದ್ದಾರೆ.
 ಸುನ್ನತೀ ಕರ್ಮ ವೈದ್ಯಶಾಸ್ತ್ರವೂ ಅಂಗೀಕರಿಸುತ್ತಿದ್ದು ಏಡ್ಸ್ ನಂತಹ ಮಾರಕ ರೋಗಗಳು ವ್ಯಾಪಿಸುತ್ತಿರುವ ಕೆಲವು ದೇಶಗಳಲ್ಲಿ  ತಡೆಗಟ್ಟಲು ಸುನ್ನತಿಗೆ ಪ್ರೋತ್ಸಾಹ ನೀಡಲಾಗುತ್ತಿದೆ.
2012ರಲ್ಲಿ ಜಿಂಬಾಬ್ವೆ ಯಲ್ಲಿ 
 ಏಡ್ಸ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ 170ಕ್ಕೂ ಹೆಚ್ಚು ಸಂಸದರು ಹಾಗೂ ಸಂಸತ್ತಿನ ನೌಕರರು ಸುನ್ನತಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮುಂದಾಗಿದ್ದು ವರದಿಯಾಗಿತ್ತು. .ಜಿಂಬಾಬ್ವೆಯಲ್ಲಿ ಶೇ.15ರಷ್ಟು ಜನರಿಗೆ ಎಚ್‌ಐವಿ ಸೋಂಕು ತಗುಲಿದ್ದಾಗ ಈ ಪ್ರಮಾಣವನ್ನು ಕಡಿಮೆಗೊಳಿಸುವ ನಿರ್ಧಾರದೊಂದಿಗೆ ನಡೆದ ಎಚ್‌ಐವಿ/ಏಡ್ಸ್‌ನ ವಿರುದ್ಧ ಜಿಂಬಾಬ್ವೆ ಸಂಸದರ ಅಭಿಯಾನದಲ್ಲಿ(ಜೆಡ್‌ಐಪಿಎಎಚ್) ಸಂಸದರು ಈ ಘೋಷಣೆ ಮಾಡಿದ್ದರು.
150 ಪುರುಷ ಸಂಸದರು ಸುನ್ನತಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದು, ಮಿಕ್ಕ ಮಹಿಳಾ ಸಂಸದರು ಪತಿರಾಯರನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಲು ಮನವೊಲಿಸುವುದಾಗಿ ಶಪಥ ಮಾಡಿದ್ದರೆಂದೂ ವರದಿಯಾಗಿತ್ತು.
 ಇದರಿಂದ 2010ರಲ್ಲಿ ಜಿಂಬಾಬ್ವೆಯ ಶೇ.80ರಷ್ಟು ಯುವಕರಿಗೆ(ಸುಮಾರು 3 ಕೋಟಿ) ಸುನ್ನತಿ ಮಾಡಲಾಗಿತ್ತು. ಈ ಕ್ರಮದಿಂದ ಸ್ಫೂರ್ತಿ ಪಡೆದುಕೊಂಡ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೋಬ್ ಜೂಮಾ ಅವರು ದೇಶದ ಯುವಕರು ಸುನ್ನತಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು.
ಸುನ್ನತಿ ಎಂಬುದು ಹಲವು ರೋಗಗಳಿಗೆ ಮುಂಜಾಗೃತಾ ಚಿಕಿತ್ಸಾ ಕ್ರಮವಾಗಿರುತ್ತದೆ‌. ಲೋಕಜ್ಞಾನವಿಲ್ಲದವರು ಮಾತ್ರ ಮೂಢನಂಬಿಕೆಗಳಿಗೂ ಸುನ್ನತಿಗೂ ತಳುಕು ಹಾಕಬಲ್ಲರು. 
ಸುನ್ನತಿ(ಸರ್ಕಮ್‌ಸಿಷನ್) ಒಂದು ಸರಳವಾದ ಶಸ್ತ್ರ ಚಿಕಿತ್ಸೆಯಾಗಿದೆ.  ಇಸ್ಲಾಂ ಸೇರಿದಂತೆ ಕೆಲವು ಧರ್ಮಗಳಲ್ಲಿ ಸುನ್ನತಿಯು ಸಂಪ್ರದಾಯದ ಭಾಗವಾಗಿಯೇ ಇದೆ.  ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಏಡ್ಸ್ ರೋಗವನ್ನು ತಡೆಗಟ್ಟುವಲ್ಲಿ ಸುನ್ನತಿ ಶಸ್ತ್ರ ಚಿಕಿತ್ಸೆ ಒಂದು ಉತ್ತಮ ವಿಧಾನ. ಸುನ್ನತಿಗೆ ಒಳಗಾಗಿರುವ ಪುರುಷರು ಏಡ್ಸ್‌ಗೆ ತುತ್ತಾಗುವ ಪ್ರಮಾಣ ಶೇ.60ರಷ್ಟು ಕಡಿಮೆಯಿರುತ್ತದೆ ಎಂದು ಪುರಾವೆಗಳಿಂದ ಸಾಬೀತಾಗಿದೆ. *ಇಂತಹ ಸಂಪ್ರದಾಯ ಮತ್ತು ಧರ್ಮದಾಚರಣೆಯನ್ನು ನಿಷೇಧ ಮಾಡುವ ಪ್ರಸ್ತಾಪದ ಹಿಂದೆ ವೋಟ್ ಬ್ಯಾಂಕ್ ಚಿಂತನೆ ಮಾತ್ರ ವಾಗಿದ್ದು ಒಡೆದು ಆಳುವ ನೀಚ ಕೃತ್ಯಕ್ಕೆ ಈಶ್ವರಪ್ಪ ಕೈಹಾಕಿರುದು ಹತಾಶೆಯನ್ನು ತೋರಿಸುತ್ತದೆ* ಎಂದು ಇಸ್ಮಾಈಲ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.