ಮಜೂರು. ನ.06; ಇಸ್ಲಾಮಿನ ಸನಾತನ ಸಾಂಸ್ಕೃತಿಕ ದಫ್ ಕಲೆಯು ಯುವ ಸಮೂಹವನ್ನು ದುಷ್ಟಟಗಳಿಂದ ದೂರೀಕರಿಸಿ ನೈಜ ಆದರ್ಶದಲ್ಲಿ ಕಾರ್ಯಚರಿಸಲು ಸೇತುವಾಗಿದ್ದು, ಪ್ರಸಕ್ತ ಸನ್ನಿವೇಶದಲ್ಲಿ ಉಡುಪಿ ಜಿಲ್ಲೆಯ ಸರ್ವ ದಫ್ ಸಮಿತಿಗಳನ್ನು ಒಗ್ಗೂಡಿಸಿ *ಉಡುಪಿ ಜಿಲ್ಲಾ ದಫ್ ಅಸೋಸಿಯೇಷನ್* ರೂಪಿಸುವ ಮೂಲಕ ಕಲೆಯನ್ನು ಉನ್ನತಿಗೇರಿಸಲು ಉತ್ತಮ ರೀತಿಯಲ್ಲಿ ಸಹಕಾರಿಯಾಗಲಿ ಎಂದು ಇತ್ತೀಚೆಗೆ ಮಜೂರು ಸಿರಾಜುಲ್ ಹುದಾ ಮದ್'ರಸ ಸಭಾಂಗಣದಲ್ಲಿ ನಡೆದ ದಫ್ ಅಸೋಸಿಯೇಷನ್ ರೂಪೀಕರಣ ಸಭೆಯನ್ನು ಉದ್ಘಾಟಿಸಿ ಮಜೂರು ಖತೀಬ್ ಉಸ್ತಾದ್ ಎಂ.ಕೆ. ಅಬ್ದುರ್ರಶೀದ್ ಸಖಾಫಿ, ಅಲ್-ಕಾಮಿಲ್ ಮಾತನಾಡುತಿದ್ದರು.
ಮಜೂರು ಬದ್ರಿಯ ಜುಮುಅ ಮಸ್ಜಿದ್ ಅಧ್ಯಕ್ಷ ಜನಾಬ್ ಹಾಜಿಮೋನು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಸಭೆಯಲ್ಲಿ ಅಸೋಸಿಯೇಷನ್ ರಚಿಸುವ ಬಗ್ಗೆ ಸಲಹೆ, ಅಭಿಪ್ರಾಯವನ್ನು ಸಂಗ್ರಹಿಸಿದ ನಂತರ ನೂತನ ಸಮಿತಿ ಅಸ್ತಿತ್ವಕ್ಕೆ ಚಾಲನೆ ನೀಡಲಾಯಿತು.
*ಅಧ್ಯಕ್ಷರು:-* ಹಾಜಿ ಅಬ್ಬು ಮುಹಮ್ಮದ್ ಮುಳೂರು
*ಉಪಾಧ್ಯಕ್ಷರು:-* ತೌಫೀಖ್ ಪಕೀರ್ಣಕಟ್ಟೆ
*ಪ್ರಧಾನ ಕಾರ್ಯದರ್ಶಿ:-* ಹರ್ಷಾದ್ ಕುಂದಾಪುರ - ಕೋಡಿ
*ಕಾರ್ಯದರ್ಶಿ:-* ಶಂಸುದ್ದೀನ್ ಮಜೂರು, ಅಮೀರ್ ಸುಹೈಲ್ ದೊಡ್ಡಣಗುಡ್ಡೆ
*ಕೋಶಾಧಿಕಾರಿ:-* ಸಾದಿಖ್ ಕೆ.ಪಿ. ಮಜೂರು
*ಲೆಕ್ಕ ಪರಿಶೋಧಕರು:-* ಮುಹಮ್ಮದ್ ಶರೀಫ್ ಪಯ್ಯಾರು
*ಸಲಹೆಗಾರರು:-* ಎಂ.ಕೆ. ಅಬ್ದುರ್ರಶೀದ್ ಸಖಾಫಿ, ಅಲ್ - ಕಾಮಿಲ್, ಎಂ.ಕೆ. ಇಬ್ರಾಹಿಂ ಮಜೂರು
ಹಾಗೂ 21 ಸದಸ್ಯರ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಸಿರಾಜುಲ್ ಹುದಾ ದಫ್ ಸಮಿತಿ ಅಧ್ಯಕ್ಷ ಅಬ್ದುರ್ರಝಾಖ್ ಅಭಿಮಾನ್, ಕಬೀರ್ ಮಜೂರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮಜೂರು ಸಿರಾಜುಲ್ ಹುದಾ ದಫ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಅಸೋಸಿಯೇಷನ್ ನೂತನ ಕಾರ್ಯದರ್ಶಿ ಹರ್ಷಾದ್ ಕೋಡಿ ದನ್ಯವಾದ ಸಲ್ಲಿಸಿದರು.
_(ಸಭೆಯಲ್ಲಿ ಜಿಲ್ಲೆಯ 14 ದಫ್ ಸಮಿತಿ ಪ್ರತಿನಿಧಿಗಳು ಭಾಗವಹಿಸಿದ್ದರು.)_
✍🏼 _Daff Association, District Committee_
Comments
Post a Comment