ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SYS ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಕಳೆದ ಜನವರಿ ತಿಂಗಳಿನಿಂದ ಎಸ್ ವೈ ಎಸ್ ದ.ಕ ಜಿಲ್ಲಾ ಅಧೀನದ ಪ್ರತೀ ಬ್ರಾಂಚ್, ಸೆಂಟರ್ ಹಾಗು ಝೋನುಗಳಲ್ಲಿ ಸಂಘಟನಾ ನಾಯಕರಿಗೆ ತರಬೇತಿ ನೀಡುವ ಸಲುವಾಗಿ ಅಸೆಂಬ್ಲೇಜ್ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದು, ದ.ಕ ಜಿಲ್ಲಾ ಸಮಿತಿಯ ಅಸೆಂಬ್ಲೇಜ್ ಕಾರ್ಯಕ್ರಮ ಮಾರ್ಚ್ 13 ಮಂಗಳವಾರ ಬೆಳಿಗ್ಗೆ 10.00 ಘಂಟೆ ಗೆ ನಗರದ ಪುರಭವನ ಮಿನಿ ಹಾಲ್ ನಲ್ಲಿ ನಡೆಯಲಿದ್ದು,
ಈ ಕಾರ್ಯಕ್ರಮದಲ್ಲಿ ಸುಮಾರು 280 ಬ್ರಾಂಚ್ ಗಳ ತಲಾ 3 ಮಂದಿ 31 ಸೆಂಟರ್ ಗಳ ಪದಾಧಿಕಾರಿಗಳು 4 ಝೋನ್ ಗಳ ಕಾರ್ಯಕಾರಿಣಿ ಸದಸ್ಯರು. ಜಿಲ್ಲಾ ಕೌನ್ಸಿಲರುಗಳು ಭಾಗವಹಿಸುವರು.
ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಪಿ ಎಂ ಉಸ್ಮಾನ್ ಸಅದಿ ಪಟ್ಟೋರಿ ವಹಿಸಿ ರಾಜ್ಯಾಧ್ಯಕ್ಷರಾದ ಜಿ.ಎಂ ಕಾಮಿಲ್ ಸಖಾಫಿ ಉದ್ಘಾಟನೆ ಮಾಡಲಿದ್ದು, ಕೇರಳ ರಾಜ್ಯ SYS ನೇತಾರರಾದ ಬಹು ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ ಮುಖ್ಯ ಪ್ರಭಾಷಣ ನೀಡಲಿರುವರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ MSM ಝೈನಿ ಕಾಮಿಲ್. ರಾಜ್ಯ ನಾಯಕರಾದ ಎಸ್ ಪಿ ಹಂಝ ಸಖಾಫಿ. ಡಿ ಕೆ ಉಮರ್ ಸಖಾಫಿ. ತೋಕೆ ಕಾಮಿಲ್ ಸಖಾಫಿ. ಜಿಲ್ಲಾ ನಾಯಕರಾದ ಎಸ್ ಎಂ ತಂಙಲ್. ಸಿದ್ದೀಖ್ ಸಖಾಫಿ. ಅಶ್ ಅರಿಯ್ಯಃ ಸಖಾಫಿ.ಹಂಝ ಮದನಿ.ಮಜೂರು ಸಅದಿ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ. ಕೋಶಾಧಿಕಾರಿ ಹನೀಫ್ ಹಾಜಿ ಭಾಗವಹಿಸಲಿರುವರು.
Comments
Post a Comment