Skip to main content

ಇನ್ನೊಂದು ಚಕ್ಕರೆಕಞ್ಞಿ ಸಮ್ಮೇಳನದ ಅಸ್ತಿತ್ವವೇ ಅಪ್ರಸ್ತುತವೆಂದು ಸಾರುತ್ತಾ ಜನಸಾಗರವಾದ ಮಂಗಳೂರಿನ SEDC ಶರೀಅತ್ ಕಾಂಫರೆನ್ಸ್

*ಇನ್ನೊಂದು 'ಚಕ್ಕರಕಂಞಿ' ಸಮ್ಮೇಳನದ ಅಸ್ತಿತ್ವವೇ ಅಪ್ರಸ್ತುತವೆಂದು ಸಾರುತ್ತಾ ಜನಸಾಗರವಾದ ಮಂಗಳೂರಿನ SEDC ಶರೀಅತ್ ಕಾನ್ಫರೆನ್ಸ್!*
*---------------------------*

ನಿಜವಾಗಿಯೂ ನಿನ್ನೆ ನಡೆದ SEDC ಶರೀಅತ್ ಸಮ್ಮೇಳನ ಮಗದೊಂದು ಕರ್ನಾಟಕ ಯಾತ್ರೆಯನ್ನು ನೆನಪಿಸುವಂತಿತ್ತು.
ಅಲ್ಲಿ ನೆರೆದಂತಹ ಶ್ವೇತ ಶುಭ್ರವಸ್ತ್ರಧಾರಿಗಳಾದ ಸಾವಿರಾರು ಅಧ್ಯಾಪಕವೃಂದ ನೋಡುಗರ ಕಣ್ಣಿಗೆ ಶಾಂತಿಯ ಪರಿವಾಳಗಳಾಗಿದ್ದರು.ಸಮ್ಮೇಳನಕ್ಕೆ ಆಗಮಿಸಿದ ಗಣ್ಯಾತಿಗಣ್ಯ ಅತಿಥಿಗಳೆಲ್ಲರೂ ಅದನ್ನೇ ಪದೇ ಪದೇ ಒತ್ತಿ ಹೇಳುತ್ತಿದ್ದರು.
ಅದಕ್ಕೂ ಮುನ್ನ ನಡೆದ 'ಮಸೀರಜಾಥ' ಎಂತಹವನನ್ನು ನಿಬ್ಬೆರಗಾಗಿಸುವಷ್ಟು ಶಿಸ್ತುಬದ್ದ ಮತ್ತು ಆಕರ್ಷಣೀಯವಾಗಿತ್ತು.
ಆದರೆ ಪ್ರಸ್ತುತ ಸಮ್ಮೇಳನ ಶೋಷಿತರ ದಮನಿತರ ಪರವಾಗಿ ಧ್ವನಿಯೆತ್ತಿದ್ದು ಮಾತ್ರ ಸಮುದಾಯ ಪರ ಬ್ಯಾಟಿಂಗ್ ಮಾಡುವ ಕೆಲವರಿಗೆ ಅಲರ್ಜಿಯಾದದ್ದು ಅವರ  ಡೋಂಗಿತನಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಸುನ್ನಿಗಳು ಇದುವರೆಗೆ ನಡೆಸಿದ ಪ್ರತಿಯೊಂದು ಸಭೆ ಸಮಾರಂಭಗಳ ಹಿಂದೆ ಸ್ಪಷ್ಟವಾದ ದ್ಯೋಯೋದ್ದೇಶಗಳು ಇದ್ದವು.ಅದು ದೀನರ ಶೋಷಿತರ ದಮನಿತರ ಪರವಾಗಿಯೇ ಇರುತ್ತಿದ್ದವು.ಆದರೆ ನಾವು ಮಾತ್ರ ಸಮುದಾಯ ಪರ ಧ್ವನಿಯೆತ್ತುವವರೆಂದು ಬಿಂಬಿಸುತ್ತಿದ್ದವರಿಗೆ ಶಾಫಿ ಸಹದಿಯಂತಹ ಯುವ ನಾಯಕರ ತೀಕ್ಷ್ಣ ಹೇಳಿಕೆ ಚಳಿಹುಟ್ಟಿಸುತ್ತಿದೆಯೆಂಬುದು ಅವರ ಅಸಂಭದ್ದ ಬರಹಗಳಿಂದಲೇ ತಿಳಿಯುತ್ತಿದೆ.
ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿ ಚಕ್ಕರಕಂಞಿ ಸಮ್ಮೇಳನ ಮಾಡಿಸಿಯೂ ಸುನ್ನಿಗಳ ಒಂಟಿ ಹೋರಾಟದ ತೀವ್ರತೆಗೆ ಆಮೆ ನಡಿಗೆಯಷ್ಡು ಕೂಡಾ ಅಡಚಣೆ ತರಲಿಕ್ಕೆ ಸಾದ್ಯವಾಗುದಿಲ್ಲವೆಂಬ ವ್ಯಥೆ ಅವರನ್ನು ತುಂಬಾನೆ ಕಾಡುತ್ತಿದೆಯೆಂದು ಅವರ ಇಂತಹ ಅಸಹಿಷ್ಣತೆಯ ಮೆಸ್ಸೇಜ್ ಗಳಿಂದ ಅರ್ಥವಾಗುತ್ತಿದೆ.
ಆಡಳಿತರೂಡ ಪಕ್ಷ ಮತ್ತು ವಿರೋಧ ಪಕ್ಷದವರನ್ನು ಮುಂದೆ ಕೂರಿಸಿ ಅವರ ವೈಫಲ್ಯಗಳನ್ನು ಬೊಟ್ಟು ಮಾಡಿ ಎಚ್ಚರಿಕೆ ಕೊಡಲು ಶಾಫಿ ಸಹದಿಯಂತಹ ಧೀರ ನಾಯಕರಿಗೆ ಅದೇಗೆ ಸಾದ್ಯವಾಗುತ್ತದೆಯೆಂಬ ಮಿತ್ರನ ಪ್ರಶ್ನೆಗೆ ಅದು ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ಗರಡಿಯಲ್ಲಿ ಪಳಗಿದ ಪಕ್ವತೆಯ ಫಲವಾಗಿದೆ.ಅಂದರೆ ಯಾವುದೇ ರಾಜಕೀಯ ಪಕ್ಷದ  ದಾಸರಾಗಿ ಅಥವಾ ವಿರೋಧವಾಗಿ ಕಾರ್ಯಚರಿಸುವವರಲ್ಲ ನಾವು.ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಅವರಲ್ಲಿಗೆ ಅಧಿಕಾರಯುತವಾಗಿಯೇ ಹೋಗಿ ದಮನಿತರ ಪರ ಧ್ವನಿಯೆತ್ತುವ ತಾಕತ್ತು ನಮಗಿದೆಯೆಂದು ತೋರಿಸಿಕೊಟ್ಟವರಾಗಿದ್ದಾರೆ ನಮ್ಮ ನಾಯಕರು.ಅಲ್ಲೆಲ್ಲಾ  ನಮ್ಮನ್ನು ಬಿಜೆಪಿ/ಜೆಡಿಎಸ್/ ಕಾಂಗ್ರೆಸ್ ಎಂದು ಲೇವಡಿ ಮಾಡಿದವರು ಈಗಲೂ ಟೋಯಿಲೇಟ್ ಟಾಂಕಿಯ ನೀರಿನಂತೆ ಆರಕ್ಕೇಳದೆ ಮೂರಕ್ಕಿಳಿಯದ ಕೋಮಾವಸ್ಥೆಯಲ್ಲೇ ಉಳಿದಿದ್ದಾರೆಂಬುದನ್ನು ಮೆರೆಯಬಾರದು.

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಅವರಿಂದ ಅರ್ಹ ರೀತಿಯಲ್ಲಿ ಸಮುದಾಯಕ್ಕೆ ಸಲ್ಲಬೇಕಾದ ಸವಲತ್ತುಗಳನ್ನು ಅಧಿಕಾರಯುತವಾಗಿಯೇ ಪಡೆಯುವುದನ್ನು, 'ಕಂಡ ಕಂಡವರ ಕಾಲಿಗೆ ಬೀಳುವುದು' ಎಂದು ವ್ಯಾಖ್ಯಾನಿಸುವವರಿಗೆ ರಾಜಕೀಯವೂ ಗೊತ್ತಿಲ್ಲ,ರಾಷ್ಟ್ರಕರಣವೂ ತಿಳಿದಿಲ್ಲವೆಂದೇ ಹೇಳಬಹುದು.
ಎಸ್ಸೆಸ್ಸೆಫ್ ಕೇವಲ ಧಾರ್ಮಿಕ ಸಂಘಟನೆಯಾಗಿಯೂ ಕೂಡಾ ಯುವಕರನ್ನು ಧಾರ್ಮಿಕತೆಯಲ್ಲಿ ಭದ್ರವಾಗಿ ನೆಲೆಯೂರುವಂತೆ ಮಾಡುವುದರೊಂದಿಗೆ ಶೋಷಿತರ ದಮನಿತರ ಪರವಾಗಿ ದೊಡ್ಡ ಧ್ವನಿಯಾಗಿ ಹೊರಹೊಮ್ಮುತ್ತಿರುವುದು,ಸಮುದಾಯ ಪರವೆಂದು ಡಂಗುರ ಸಾರುವವರಿಗೆ ಮುಳ್ಳಿನ ಗಂಟಾಗಿ ಪರಿಣಮಿಸಿದೆ.

ಮೌಲಾನ ಶಾಫಿ ಸಹದಿ ಉಸ್ತಾದರು ಕರ್ನಾಟಕದಲ್ಲಿ ಮುಸ್ಲಿಮರು ಎರಡನೇ ಸ್ಥಾನದಲ್ಲಿದ್ದು,ಯಾವುದೇ ಪಕ್ಷಗಳನ್ನು ಅಧಿಕಾರಕ್ಕೇರಿಸುವುದಕ್ಕೂ ಇಳಿಸುವುದಕ್ಕೂ ಅವರು ನಿರ್ಣಾಯಕ ಪಾತ್ರವಹಿಸುವರೆಂದು ಹೇಳಿದ್ದು ಇಲ್ಲಿನ ಬಹುಸಂಖ್ಯಾತ ಶಾಫಿ/ಹನಫಿ ಮುಸ್ಲಿಮರನ್ನು ಉದ್ದೇಶಿಸಿಯಾಗಿದೆಯೆಂದು ಮನಗಂಡರೆ ಅದರಿಂದ ಹೊರತಾಗುವ ಅಲ್ಪರಲ್ಲಿ ಅಲ್ಪರಾದ ಸಳಪಿಯಾದಿ ಎಲ್ಲಾ ಮುಕ್ಕಾಗಂಟೆಗಳನ್ನು ಹೊರಗಿಡಲಾಗಿದೆ ಎಂಬುದನ್ನು ಮೆರೆಯಬೇಡಿ.
ಎಂದಿಗೂ ಅವರನ್ನು ಜತೆ ಸೇರಿಸುವ ಗತಿಗೇಡು ಮುಸಲ್ಮಾನರಿಗೆ ಬಂದಿಲ್ಲ.
ಅವರನ್ನು ಜತೆ ಸೇರಿಸಿ ಶರೀಅತ್ ಸಂರಕ್ಷಣೆ ನಡೆಸುವ ಗತಿಗೇಡು ಸುನ್ನಿಗಳಿಗೆ ಇಲ್ಲ.
ಅಲ್ಲದಿದ್ದರೂ ಮುತ್ತಲಾಕ್ ವಿಷಯದಲ್ಲೇ ಶರೀಅತ್ ವಿರುದ್ದ ತೀರ್ಮಾನ ತೆಗೆದ ನೂತನವಾದಿಗಳನ್ನು ಜತೆಸೇರಿಸಿ ಶರೀಅತ್ ಸಂರಕ್ಷಣೆ ಮಾಡುವ ಡೊಂಬರಾಟಕ್ಕೆ ಯಾವತ್ತೂ ನೈಜ ಸುನ್ನಿಗಳ ಸಾನಿಧ್ಯ ಇರಲಾರವು.

ಆದ್ದರಿಂದಲೇ ಶರೀಅತ್ ಸಂರಕ್ಷಣೆ ಸಮ್ಮೇಳನಕ್ಕೆ ಮುತ್ತಲಾಕ್ ವಿಷಯದಲ್ಲಿ ನೂತನವಾದಿಗಳಿಗಿರುವ ಅದೇ ತೀರ್ಮಾನವನ್ನು ತೆಗೆದುಕೊಂಡಿರುವ ಆರ್ ಎಸ್ ಎಸ್ / ಬಿಜೆಪಿ ಗರನ್ನು ಪ್ರಸ್ತುತ ಚಕ್ಕರಕಂಞಿ ಸಮ್ಮೇಳನಕ್ಕೆ ಆಹ್ವಾನಿಸಿದರೂ ಆಶ್ಚರ್ಯಪಡಬೇಕಾದ ಅಗತ್ಯವಿಲ್ಲ.

*ಕಾರಣ ಶರೀಅತ್ ವಿರುದ್ದ ತೀರ್ಮಾನ ಕೈಗೊಂಡವರನ್ನು ಸೇರಿಸಿ ಶರೀಅತ್ ಸಂರಕ್ಷಣೆ ಮಾಡುವುದು ಅರೆ ನಗ್ನೆಯಾಗಿ ಮಾತ್ರ ನಡೆಯುವ ಹುಡುಗಿ ಸ್ಕಾರ್ಫ್ ನ ಮಹತ್ವದ ಕುರಿತು ತರಗತಿ ನಡೆಸಿದಕ್ಕೆ ಸಮ ತಾನೇ?*

ಏನಂತೀರಿ...?
- ಅಬೂಶಝ

Comments

Popular posts from this blog

ಇಂದು ಸೆರ್ಕಳ ಗೋಲ್ಡನ್ ಫಿಫ್ಟಿ ಸಮಾರೋಪ ಸಮಾರಂಭ.ನೇತೃತ್ವ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿ ಸೆರ್ಕಳ ಇದರ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಇಂದು (ಎಪ್ರಿಲ್ 13) ಸೋಮವಾರ ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮ ಕಾರ್ಯದರ್ಶಿ ಅಸ್ಸಯ್ಯಿದ್ ಬದ್ರುಸ್ಸದಾತ್ ಖಲೀಲ್ ಬುಖಾರಿ ತಂಙಳ್ ಕಡಲುಂಡಿ ಆತ್ಮೀಯ ಸಂಗಮ ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ.ಉಮರ್ ಸಖಾಫಿ ಪಳ್ಳತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.ಹಂಝ ಮಿಸ್ಬಾಹಿ ಓಟ್ಟಪದವು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.10 ಗಂಟೆಗೆ ಉಲಮಾ ಸಂಗಮ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಶೈಖುನಾ ವಾಲೆಮುಂಡೊವು ಉಸ್ತಾದ್ ನೇತೃತ್ವದಲ್ಲಿ ನಡೆಯಲಿದೆ.ಸಂಜೆ 5 ಗಂಟೆಗೆ ಬದ್ರ್ ಮೌಲಿದ್ ಮಜ್ಲಿಸ್ ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವ ವಹಿಸಲಿದ್ದಾರೆ.ಹಾಗೂ ಇನ್ನಿತರ ಉಲಮಾ ಸಾದಾತ್ ಗಳು, ರಾಜಕೀಯ,ಸಾಮಾಜಿಕ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ  ಎಂದು ಸ್ವಾಗತ ಸಮಿತಿ ಚಯರ್ ಮೆನ್ ಸಿ.ಎಚ್ ಅಬ್...

ಆಧ್ಯಾತ್ಮಿಕತೆ ಮೈಗೂಡಿಸಿಕೊಳ್ಳಲು ಕೆ.ಸಿ. ಉಸ್ತಾದ್ ಕರೆ.

ಮಂಗಳೂರು: ಮಾನವೀಯತೆ ಮೈಗೂಡಿಸಿಕೊಂಡವರು ಮಾತ್ರ ನಿಜವಾದ ಮಾನವರಾಗಿ ಬದುಕಲು ಸಾಧ್ಯ. ಮಾನವರು ಪರಸ್ಪರ ಪ್ರೀತಿ, ವಿಶ್ವಾಸ, ಸಹಬಾಳ್ವೆಯಿಂದ ಬಾಳಬೇಕು. ಮಾನವೀಯತೆ ಎಂಬುವುದು ಆಧ್ಯಾತ್ಮಿಕತೆಯ ಒಂದು ಭಾಗ.    ದ್ವೇಷ, ಕಲಹ, ಕಳಂಕವಿಲ್ಲದ ಶುದ್ಧ ಹೃದಯದ, ಆತ್ಮೀಯ ಅನುಭೂತಿ ಮೈಗೂಡಿಸಿಕೊಂಡ ಮಾನವರು ನಾವಾಗಬೇಕು. ಎಂದು ಶೈಖುಲ್ ಹದೀಸ್ ಕೆ.ಸಿ. ಉಸ್ತಾದ್ ಕರೆ ನೀಡಿದರು. ಅವರು ಮಂಗಳೂರು ಹರೇಕಳ ತ್ವೈಬಾ ಮದೀನ ಎಜು ಪಾರ್ಕ್ ಸಂಸ್ಥೆಯಲ್ಲಿ  ಕರ್ನಾಟಕ ರಾಜ್ಯ ಲತ್ವೀಫೀಸ್ ಅಸೋಸಿಯೇಷನ್ ವತಿಯಿಂದ ನಡೆದ ರಾಜ್ಯ ಮಟ್ಟದ ಲತ್ವೀಫಿ ಸಂಗಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಸಭೆಯಲ್ಲಿ ಲತ್ವೀಫೀಸ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಅಧ್ಯಕ್ಷರಾಗಿ ಅಬೂಬಕರ್ ಲತ್ವೀಫಿ ಎಣ್ಮೂರು, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಲತ್ವೀಫಿ ಬೇಂಗಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಲತ್ವೀಫಿ ಸಬರಬೈಲು, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಹಮೀದ್ ಲತ್ವೀಫಿ ಸೇರಾಜೆ, ಯಾಕೂಬ್ ಲತ್ವೀಫಿ ಅಮ್ಟೂರು. ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ರಝಾಕ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ರಝಾಕ್ ಲತ್ವೀಫಿ ಕುಂತೂರು, ಮುಹಮ್ಮದ್ ರಫೀಕ್ ಲತ್ವೀಫಿ ತೆಕ್ಕಾರು. ಕೋರ್ಡಿನೇಟರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಸಮಿತಿ ಸದಸ್ಯರುಗಳಾಗಿ ಮುಹಮ್ಮದ್ ರಫೀಕ್ ಲತ್ವೀಫಿ ಕೊಡಗ...

ಗೋಲ್ಡನ್ ಫಿಫ್ಟಿ ಪ್ರಯುಕ್ತ ಇಂದು ಸೆರ್ಕಳದಲ್ಲಿ ಮುಖ್ಯ ಪ್ರಭಾಷಣ ಶೈಖುನಾ ಪೇರೋಡ್ ಉಸ್ತಾದ್

ಬೋಳಂತೂರು:ಕೊಳ್ನಾಡು ಗ್ರಾಮದ ಸೆರ್ಕಳ ಬದ್ರಿಯಾ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ನುಸ್ರತುಲ್ ಇಸ್ಲಾಂ ಬದ್ರ್ ಕಮಿಟಿಯ 50 ನೇ ವಾರ್ಷಿಕ ಪ್ರಯುಕ್ತ ನಡೆಯುವ ಗೋಲ್ಡನ್ ಫಿಫ್ಟಿ ಕಾರ್ಯಕ್ರಮ ಇಂದು(ಎಪ್ರಿಲ್ 12) ಮಗ್ರಿಬ್ ನಮಾಝ್ ಬಳಿಕ ಸೆರ್ಕಳ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆಯಲಿದೆ.ಇಂದು ಸಂಜೆ ಅಸರ್ ನಮಾಝ್ ಬಳಿಕ ಮಸೀದಿ ಅಧ್ಯಕ್ಷರಾದ ಎಸ್.ಬಿ ಅಬೂಬಕ್ಕರ್ ನೇತೃತ್ವದಲ್ಲಿ ಧ್ವಜಾರೋಹಣ ನಡೆಯಲಿದೆ. ಮಗ್ರಿಬ್ ನಮಾಝ್ ಬಳಿಕ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ.ಕರ್ನಾಟಕ ದಿವಾನ್-ಇ-ಖಾಝಿ ಕರ್ನಾಟಕ ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮ ಬದ್ರ್ ಕಮಿಟಿ ಅಧ್ಯಕ್ಷರಾದ ಉಸ್ಮಾನ್ ಎಸ್.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಕನ್ವಿನರ್ ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.