ಮಕ್ಕಾ:ಕಾಜೂರ್ ಡೆವಲಪ್ ಮೆಂಟ್ ಕಮಿಟಿ ಸೌದಿ ಅರೇಬಿಯಾ ಇದರ ಮಾಸಿಕ ಸ್ವಲಾತ್ ಮಜ್ಲಿಸ್ ಹಾಗೂ ಕಾಜೂರಿನಿಂದ ಪವಿತ್ರ ಉಮ್ರಾ ನಿರ್ವಹಿಸಲು ಆಗಮಿಸಿದ ಎಲ್ಲಾ ಗಣ್ಯರಿಗೆ ಕೆ.ಡಿ.ಸಿ ಗೌರವ ಅಧ್ಯಕ್ಷರು ಹಾಗೂ ರಹ್ಮಾನಿಯ ಜುಮಾ ಮಸ್ಜಿದ್ ಮುದರ್ರೀಸ್ ಅಸ್ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲ್ ಕಾಜೂರ್ ತಂಙಲ್ ರವರ ಅಧ್ಯಕ್ಷತೆಯಲ್ಲಿ ಮಕ್ಕತುಲ್ ಮುಕರ್ರಮದ ಶುಹಾದಃ ಎಂಬಲ್ಲಿ ನಡೆಯಿತು
ಇದೇ ವೇಳೆ ತಂಙಲ್ ರವರು ಮಾತಾಡಿ ಜೀವನದ ಸಂಕಷ್ಟ, ನೋವು ಯಾತನೆ, ಎಲ್ಲಾವನ್ನು ಮರೆತು ಈ ಮರುಭೂಮಿಯ ಸುಡು ಬಿಸಿಲಿನಲ್ಲಿ ಕಡಿಮೆ ವೇತನದಿಂದ ದುಡಿದು ಜಮಾಅತಿನ ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ, ಮಸೀದಿ, ಮದ್ರಸಕ್ಕೆ ಅಗತ್ಯವಾಗಿರುವ ಸಹಾಯವನ್ನು ನೀಡಿ ಜಮಾಅತಿನ ಎಲ್ಲಾ ಅಭಿವೃದ್ಧಿಗೆ ಬೇಕಾಗಿ ಬಹಳ ಶ್ರಮ ಪಟ್ಟು ದುಡಿಯುತ್ತಿರುವ ಕಾರ್ಯಗಳನ್ನು ಮನಗಂಡು
ಕೆ.ಡಿ.ಸಿ ಕಾರ್ಯಕರ್ತರನ್ನು ಮೆಚ್ಚುಗೆ ವ್ಯಕ್ತಪಡಿಸುತ್ತಾ ಅಭಿನಂದಿಸಿದರು.
KCF ಮಕ್ಕತುಲ್ ಮುಕರ್ರಮಃ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ ಸರ್ವ ವಿಧ ಶುಭ ಹಾರೈಸಿದರು
KDC ಸೌದಿ ಅರೇಬಿಯಾ ಪ್ರಧಾನ ಕಾರ್ಯದರ್ಶಿ ಹಾರಿಸ್
ಕಾಜೂರ್ ಮಾತಾಡಿ ಸೌದಿ ಅರೇಬಿಯಾ, UAE, ಬೆಂಗಳೂರು ನಮ್ಮ ಸಂಘಟನೆ ಕಾರ್ಯಚರಿಸುತ್ತಾ ಬಂದಿದೆ ಹಾಗೂ ಇದುವರೆಗೆ ನಡೆದ ರಿಲೀಫ್ ಬಗ್ಗೆ ಪರಿಚಯಿಸಿ ನೆರೆದ ಗಣ್ಯರಿಗೆ ಸ್ವಾಗತಿಸಿದರು.
ಈ ಸಂದರ್ಭ ಕಾಜೂರ್ ಜಮಾಅತಿನ ನೇತಾರರು, ಹಾಗೂ ಸೌದಿ ಅರೇಬಿಯಾ KDC ನಿರ್ದೇಶಕರು ಹನೀಫ್ ಕಾಜೂರ್ ಮತ್ತು ಉಪಾಧ್ಯಕ್ಷರು ಇಬ್ರಾಹೀಮ್ ಇಬ್ಬಿ ಕಾಜೂರ್, ಹಾಗೂ ಸದಸ್ಯರು ಮತ್ತು KCF ಕಾರ್ಯಕರ್ತರು ಉಪಸ್ಥಿತರಿದ್ದರು
Comments
Post a Comment