ಕುವೈತ್ ನ ಮರುಭೂಮಿಯಲ್ಲಿ ದಶಕಗಳ ಕಾಲ ಅಹ್ಲುಲ್ ಸುನ್ನತ್ ಜಮಾತ್ ನ ಅಡಿಸ್ಥಾನದಲ್ಲಿ ಅನಿವಾಸಿ ಮುಸ್ಲಿಂ ಕನ್ನಡಿಗರನ್ನು ಒಗ್ಗೂಡಿಸಿ ಕೆಕೆಎಸ್ಎ ಯಿಂದ ಕೆಸಿಎಫ್ ಎಂಬ ಸಂಘಟನೆಯನ್ನು ಬೆಳೆಸಿ ಅದರ ಬೆನ್ನೆಲುಬಾಗಿ ರಾತ್ರಿ ಹಗಲೆನ್ನದೆ ದುಡಿದ ಕ್ಷಮಾ ಶೀಲ, ಕ್ರಿಯಾಶೀಲ ಯುವ ನಾಯಕರಾಗ್ಗಿದ್ದಾರೆ ಮಲೆನಾಡಿನ ಭತ್ತದ ಕಣಜ ಖ್ಯಾತಿಯ ಕುವೆಂಪು, ಯು.ರ್ ಅನಂತ ಮೂರ್ತಿ ಹುಟ್ಟಿದ ತೀರ್ಥಹಳ್ಳಿ ತಾಲೂಕಿನ ಸಾಗರದಲ್ಲಿರುವ ಕೋಟೆ ಗದ್ದೆ ಎಂಬ ಕುಗ್ರಾಮದ ಜನಾಬ್ ಮನ್ಸೂರ್ ಕೋಟೆ ಗದ್ದೆ.
ಸಣ್ಣ ಹುದ್ದೆಗಾಗಿ ಕುವೈತ್ ಆಗಮಿಸಿದ ಇವರು ಸೌದಿ ಗಡಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಕುವೈತ್ ನಲ್ಲಿ ಕನ್ನಡಿಗರಿಗಾಗಿ ಸುನ್ನತ್ ಜಮಾತ್ ನ ಸಂಘಟನೆಯನ್ನು ಕಟ್ಟುವ ಕನಸ್ಸು ಕಂಡಿದ್ದರು.
ಕುವೈತ್ ಗೆ ಆಕಸ್ಮಿಕವಾಗಿ ಆಗಮಿಸಿದ ಬಹುಮಾನ್ಯ ಹಂಝ ಸಖಾಫಿ ಯವರನ್ನು ಭೇಟಿ ಯಾಗಿ ತಮ್ಮ ಇಂಗಿತವನ್ನು ತಿಳಿಸಿದಾಗ ಗೆಳೆಯರಾದ ಹಮೀದ್ ಕಾಶಿಪಟ್ಣ, ಇಬ್ರಾಹಿಮ್ ವೇಣೂರ್, ತೌಫೀಕ್ ಕಾರ್ಕಳ ಹಾಗೂ 18 ಸದಸ್ಯರು ಸೇರಿ 2010 ರ ಜೂನ್ ನಲ್ಲಿ ಕೆಕೆಎಸ್ಎ ಎಂಬ ಸಂಘಟನೆಯನ್ನು ಹುಟ್ಟಿ ಹಾಕಿದರು. ನಂತರದ ದಿನಗಳಲ್ಲಿ ಇದೇ ಸಂಘಟನೆ ಕೆಸಿಎಫ್ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ* *ಗುರುತಿಸುವಂತಾಯಿತು. ಆರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಯಾಗಿ ಇದೀಗ ಕೆಸಿಎಫ್ ರಾಷ್ಟ್ರೀಯ ಸಂಘಟನೆಯ ಕನ್ವೀನರ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದ ನೀವು ಕುವೈತ್ ನ ಕಾರ್ಯಕರ್ತರಿಗೆ ಮಾದರಿಯಾಗಿದ್ದೀರಿ. ಕಾರ್ಯಕರ್ತರ ಪಾಲಿಗೆ ನೀವು ತುಂಬಿದ ಸ್ಫೂರ್ತಿ ಎಂದೆಂದಿಗೂ ಮರೆಯಲಾಗದು.ನಿಮ್ಮ ನಗು ನಿಮ್ಮ ಕ್ಷಮಾ ಶೀಲತೆ, ಎಷ್ಟೇ ಒತ್ತಡ ಇದ್ದರೂ,ಏನೇ ಕೆಲಸ ಇದ್ದರೂ, ಯಾವುದೇ ಕಾರ್ಯದಲ್ಲೂ ತಕ್ಷಣ ಸ್ಪಂದಿಸುವ ಓರ್ವ ಮಾದರಿ ನಾಯಕರಾಗಿದ್ದೀರಿ. ಯಾವುದೇ ಸ್ಥಳದಲ್ಲಿ ಸುನ್ನತ್ ಜಮಾತ್ ನ ಸ್ವಲಾತ್ ಮಜ್ಲಿಸ್ ನಲ್ಲಿ ನಿಮ್ಮ ಸಾನಿಧ್ಯವು ಮುಂಚೂಣಿಯಲ್ಲಿ ಇರುತಿತ್ತು.
ಸುಡುವ ಬಿಸಿಲಿನಲ್ಲೂ, ನಡುಗುತ್ತಿರುವ ಚಳಿಯಲ್ಲೂ ನೀವು ಅಲ್-ಝೋರ್ ನಿಂದ ನೂರಾರು ಕಿಲೋಮೀಟರ್ ತನಕವೂ ನಿಮ್ಮ ಸ್ವಂತ ಖರ್ಚಿನಿಂದ ಸಂಘಟನೆಗಾಗಿ ದುಡಿದು ರಾತ್ರಿಯಲ್ಲಿ ಯಾವುದೊ ಸಿಕ್ಕಿದ ಟ್ಯಾಕ್ಸಿ ಹಿಡಿದು ರೂಮ್ ಸೇರುವಾಗ ರಾತ್ರಿ ಎರಡು ಮೂರು ಗಂಟೆ ಯಾದರೂ ಬೆಳಗ್ಗೆ ಕೆಲಸವಿದ್ದರೂ ಎಲ್ಲವನ್ನೂ ಮೀರಿ ನಿಂತ ನೀವು ಸಂಘಟನೆಯ ಕೈ ಹಿಡಿದು ನಡು ರಾತ್ರಿಯ ನಿಶಬ್ದ ದಾರಿಯಲ್ಲಿ ಎಷ್ಟು ದೂರ ಸಾಗಿದರು ದಣಿವು ಇಲ್ಲದ ಕೆಚ್ಚೆದೆಯ ನಾಯಕರಾದ ನೀವು ಸ್ವಂತ ಮನೆಯ ಮಕ್ಕಳು ಹೇಳಿದ ಅಗತ್ಯ ವಸ್ತುಗಳನ್ನು ಮರೆತರೂ ಸಂಘಟನೆಯ ವಿಷಯದಲ್ಲಿ ನೀವು ಯಾವುದೇ ವಸ್ತುಗಳನ್ನು ಮರೆಯದೇ ಅಚ್ಚುಕಟ್ಟಾಗಿ ಮುನ್ನುಡಿಸಿದ ಮಾದರಿ ನಾಯಕ ನೀವು.
ಕುವೈತ್ ಗೆ ಯಾವುದೇ ಸಂಸ್ಥೆಯ, ಸಂಘಟನೆಯ ಉಸ್ತಾದರು ಆಗಮಿಸಿದಾಗ ಅವರನ್ನು ಆತ್ಮೀಯವಾಗಿ ಆಧರಿಸಿ,ತಮ್ಮ ಮನೆಗೆ ಭೋಜನಕ್ಕೆ ಆಹ್ವಾನಿಸಿ ಅವರ ಮನಸ್ಸು ಮುದಗೊಳಿಸಿ ಕಳುಹಿಸಿ ಮಾದರಿಯಾಗಿದ್ದೀರಿ.
ನನ್ನ ಗೆಳೆಯನ ತಂದೆ ಮರಣಹೊಂದಿದ ವಾರ್ತೆಯನ್ನು ತಿಳಿದಾಗ ಕೇವಲ ನಾಲ್ಕು ಗಂಟೆಯಲ್ಲಿ ಆತನಿಗೆ ಟಿಕೆಟ್ ವ್ಯವಸ್ಥೆಯನ್ನು ಮಾಡಿ ಊರಿಗೆ ಹೋಗಿ ತಂದೆಯ ಅಂತಿಮ ಸಂಸ್ಕಾರ ದಲ್ಲಿ ಪಾಲ್ಗೊಳ್ಳಲು ಅನುವು ಮಾಡಿಕೊಟ್ಟ ನಿಮ್ಮನ್ನು ಯಾವುದರಿಂದ ಹೊಗಳಲಿ.
ನನ್ನ ಪಾಲಿಗಂತು ಸಂಘಟನಾ ಗುರು ಅಂದರೆ ತಪ್ಪಾಗಲಾರದು. ಬಿಂದಾಸ್ ಆಗಿ ಕಾಲ ಕಳೆಯುತ್ತಾ ಇದ್ದ ನನಗೆ ಉತ್ತಮವಾದ ಸಲಹೆಗಳನ್ನು ನೀಡಿ ನಾಲ್ಕು ಜನರ ಮುಂದೆ ನಿಂತು ಸುನ್ನತ್ ಜಮಾತ್ ಪರ ಮಾತನಾಡಲು. ಪತ್ರಿಕೆ ಯಲ್ಲಿ ವರದಿ ಬರೆಯುವ ವರದಿ ವಾಗರನನ್ನಾಗಿ ರೂಪಿಸಿದ್ದೀರಿ.ಹಗಲನ್ನು ಬೆವರಿನಲ್ಲೂ, ರಾತ್ರಿಯನ್ನು ಕಣ್ಣೀರಲ್ಲಿ ಕಳೆಯುತ್ತಾ ಬದುಕುತ್ತಿದ್ದ ನನಗೆ ಸಮಾಜ ಸೇವಾಸಕ್ತಿ, ಕ್ರಿಯಾಶೀಲತೆಯನ್ನು ನನ್ನ ಬದುಕಿನಲ್ಲಿ ಕಲಿಸಿಕೊಟ್ಟಿದ್ದೀರಿ ಹಾಗೂ ನನ್ನ ಎಲ್ಲಾ ವಿಷಯದಲ್ಲೂ ಬೆನ್ನು ತಟ್ಟಿ ಪ್ರೊತ್ಸಾಹಿಸಿದ್ದೀರಿ. ರಾತ್ರಿ ಹಗಲೆನ್ನದೆ ಎಲ್ಲಾ ಕಾರ್ಯಕರ್ತರಿಗೂ ತಕ್ಷಣ ಸ್ಫಂದಿಸಿದ್ದೀರಿ.
ಇದೀಗ ನೀವು ತಾತ್ಕಾಲಿಕವಾಗಿ ಕುವೈತ್ ಬಿಟ್ಟು ತಾಯ್ನಾಡಿಗೆ ಹೋದ ನಂತರ ಕಾರ್ಯಕರ್ತರಾದ ನಮಗೆ ಅತೀವ ಬೇಸರ ತಂದಿದೆ.ಆದರೂ ಸುನ್ನೀ ಸಮುದಾಯದ ಅಭಿವೃದ್ಧಿಗಾಗಿ ಮುಡಿಪಾಗಿಟ್ಟ ನಿಮ್ಮ ಜೀವನದ ನೆನಪುಗಳು ಮಾತ್ರ ನನ್ನ ಹೃದಯದಲ್ಲಿ ಡವ ಡವ ಗುಟ್ಟುತ್ತಾ ಇದೆ.
ನೀವು ನೀಡಿದ ಸೇವೆಯನ್ನು ಸತ್ಕರ್ಮಗಳ ಪಾಲಿಗೆ ಸೇರಿಸಲಿ.ಆಫೀಯ್ಯತ್ತಾದ ಧೀರ್ಘಾಯುಷ್ಯ ನೀಡಲಿ ಆಮೀನ್ ಯಾ ರಬ್ಬಲ್ ಆಲಮೀನ್.
✍ ಮುಸ್ತಫ ಉಳ್ಳಾಲ
Comments
Post a Comment