ಮಕ್ಕಾ: ಪವಿತ್ರ ಉಮ್ರಾ ನಿರ್ವಹಿಸಲು ಆಗಮಿಸಿದ ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷರು, ಪ್ರಮುಖ ವಿದ್ವಾಂಸರು, ಆಶಿಕುರ್ರಸೂಲ್ ತಾಜುಶ್ಶರೀಅಃ ಎಂ ಅಲಿಕುಂಞಿ ಉಸ್ತಾದ್ ಶಿರಿಯ ರವರನ್ನು ಹರಮ್ ಶರೀಫ್ ಹತ್ತಿರ ಅಲ್ ಲಿಯಾಫ ಹೋಟೆಲ್ ನಲ್ಲಿ ಭೇಟಿಯಾಗಿ KCF ಮಕ್ಕತುಲ್ ಮುಕರ್‍ರಮಃ ಸೆಕ್ಟರ್ ಹಾಗು ಲತೀಫೀಯಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಶಿರಿಯಾ ಇದರ ಮಕ್ಕಾ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು
ಲತೀಫೀಯಾ ಇದರ ಪರಿಚಯ ಭಾಷಣ ಪಾತೂರು ಮುಹಮ್ಮದ್ ಸಖಾಫಿ ಮಾಡಿದರು. ಇದೇ ವೇಳೆ ಶೈಖುನಾ ಉಸ್ತಾದರು ಮಾತಾಡಿ ನನ್ನದೊಂದು ಅಭಿಲಾಷೆ ಲತೀಫೀಯಾಕ್ಕೆ ಬೇಕಾಗಿ ಪವಿತ್ರ ಕಾಬಾದ ಎದುರು ದುಆಃ ನಡೆಸಬೇಕು ಹಾಗೂ ಸಹಾಯ ಸಹಕಾರ ನಿಮ್ಮಿಂದ ಯಾವಾಗಲೂ ಇರಬೇಕು ಹಾಗೂ ಸಮಯ ಸಿಗುವಾಗಲೆಲ್ಲಾ ತವಾಫ್ ಮಾಡಿ ದುಆಃ ಮಾಡಿ ಎಂದು ಕಿವಿಮಾತು ಹೇಳಿ, ಸ್ವಲಾತ್ ಹೇಳಲು ಇಜಾಝತ್ ಕೊಟ್ಟು ಬಹಳ ಸಂತೋಷದಿಂದ ನಮ್ಮನ್ನು ಆತ್ಮೀಯವಾಗಿ ಸಂತೈಸಿದರು
ಕೆ.ಸಿ.ಎಫ್ ಹಾಗೂ ಲತೀಫೀಯಾ ಕಮಿಟಿ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿದರು. ಈ ಸಂದರ್ಭ ಪೋಸೋಟ್ ಮಳ್ಹರ್ ಮುದರ್ರೀಸ್ ಅನಸ್ ಸಿದ್ದೀಖಿ ಕಾಮಿಲ್ ಸಖಾಫಿ ಶಿರಿಯಾ ಹಾಗೂ KCF ಮತ್ತು ಲತೀಫೀಯಾ ಕಮಿಟಿ ನೇತಾರರಾದ ಇಕ್ಬಾಲ್ ಕಕ್ಕಿಂಜೆ, ಅಬ್ದುಲ್ ಹಮೀದ್ ಉಳ್ಳಾಲ, ಸುಲೈಮಾನ್ ಪಾದೆಕಲ್ಲು ಮೊದಲಾದವರು ಉಪಸ್ಥಿತರಿದ್ದರು
Comments
Post a Comment