*ಕೆಸಿಎಫ್ ಕುವೈಟ್ ವತಿಯಿಂದ ಬೃಹತ್ "ಇಲಲ್ - ಹಬೀಬ್ " ಮಿಲಾದ್ ಸಮಾವೇಶ.*
ಜಗತ್ತು ಕಂಡ ಮಹಾ ನಾಯಕ,ಲೋಕಾನುಗ್ರಹಿತನಾಗಿ ಸೃಷ್ಟಿಸಲ್ಫಟ್ಟ "ರಹ್ಮತುಲ್ ಆಲಮೀನ್" ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ)ರು ಇಡೀ ಜಗತ್ತಿಗೆ ಬೆಳಕಾಗಿ,ಕತ್ತಲೆಯಿಂದ ಬೆಳಕಿನಡೆಗೆ ದಾರಿದೀಪವಾಗಿ ಶಾಂತಿ,ನೀತಿಯನ್ನು ಸಾರಿದ ಮುತ್ತು ನೆಬಿಯವರ ಜನ್ಮ ದಿನದ ಅಂಗವಾಗಿ "ಪ್ರೀತಿಯ ಪ್ರವಾದಿ, ಶಾಂತಿಯ ಹಾದಿ" ಎಂಬ ಘೋಷ ವಾಕ್ಯದೊಂದಿಗೆ ದಿನಾಂಕ ಡಿಸೆಂಬರ್ 23 ರ ಶುಕ್ರವಾರ ಸಾಯಂಕಾಲ 5.30 ಗಂಟೆಗೆ ಸರಿಯಾಗಿ ಇಂಡಿಯನ್ ಮೊಡೆಲ್ ಸ್ಕೂಲ್ ಸಾಲ್ಮಿಯಾದ ಬೃಹತ್
ಸಬಾಂಗಣದಲ್ಲಿ ಮೌಲೂದ್ ಪಾರಾಯಣ ದೊಂದಿಗೆ ಆರಂಭವಾಯಿತು.
ಕಡಿಮೆ ಕಾಲಾವಧಿಯಲ್ಲಿ ಕ್ರಿಯಾತ್ಮಕ ಕಾರ್ಯಕ್ರಮಗಳ ಮೂಲಕ ಅನಿವಾಸಿ ಕನ್ನಡಿಗರ ಹೃದಯ ತಟ್ಟುತ್ತಿರುವ,ಮನಸ್ಸು ಮುಟ್ಟುತ್ತಿರುವ ಕೆಸಿಎಫ್. ಜಗದ ಯಾವ ಕಡೆ ತೆರಳಿದರೂ ನಾಡಪ್ರೇಮ ಜಾಗೃತವಾಗಿರುವ ಕನ್ನಡಿಗರ ಸಂಘಟನೆಯೇ ಕೆಸಿಎಫ್.
ಕೆಸಿಎಫ್ ಮಹಬುಲ ಸೆಕ್ಟರ್ ಬುರ್ದಾ ತಂಡದಿಂದ ಬುರ್ದಾ ಅಲಾಪನೆ ನಡೆಯಿತು . ಫರ್ವಾನಿಯ ಸೆಕ್ಟರ್ ಕಾರ್ಯದರ್ಶಿ ಕಲಂದರ್ ಶಾಫಿ ಕಿರಾಹತ್ ಪಠಿಸಿದರು. ಇಲಲ್ ಹಬೀಬ್ ಸಮಾವೇಶದ ಮುಖ್ಯ ಅತಿಥಿಗಳಾಗಿ ಹಾಗೂ ಪ್ರಮುಖ ಪ್ರಭಾಷಣಕಾರರಾಗಿ ಆಗಮಿಸಿದ ಕರ್ನಾಟಕ ಮುಸ್ಲಿಮರ ಅಭಿಮಾನ ಧ್ವನಿ,ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ನಿರ್ದೇಶಕರು ಹಾಗೂ SSF ರಾಜ್ಯ ಅಧ್ಯಕ್ಷರು ಆದ ಬಹುಮಾನ್ಯ N.K.M ಶಾಫಿ ಸಅದಿ ಉಸ್ತಾದರು ಮಾತನಾಡಿ ಪ್ರವಾದಿ (ಸ.ಅ)ರು ಯಾರು ಹಾಗೂ ಅವರ ಜೀವನದ ಸಂದೇಶವನ್ನು ನಾವು ಜೀವನದಲ್ಲಿ ಅಳವಡಿಸಿ ಸಂಘಟನೆಯಲ್ಲಿ ಗುಂಪುಗಾರಿಕೆ ಮಾಡದೆ ಇಸ್ಲಾಂನ ತತ್ವಾದರ್ಶದಲ್ಲಿ ಜೀವಿಸಬೇಕು. ಗ್ರೂಪಿಸಂ ಮಾಡುವವನು ಕೆಸಿಎಫ್ ನ ಸದಸ್ಯತ್ವಕ್ಕೆ ಅರ್ಹನಲ್ಲ ಎಂದು ತಿಳಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಚೇಯರ್ಮ್ಯಾನ್ ಬಹುಮಾನ್ಯ ಅಬ್ದುರಹ್ಮಾನ್ ಸಖಾಫಿ ನೆರವೇರಿಸಿದರು. ಕೆಸಿಎಫ್ ಕುವೈಟ್ ರಾಷ್ಟ್ರೀಯ ಶಿಕ್ಷಣ ವಿಭಾಗದ ಕನ್ವೀನರ್ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರು ಪ್ರಾಸ್ತವಿಕ ಭಾಷಣ ಮಾಡಿದರು. ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ನಝೀರ್ ನಇಮಿ ಉಸ್ತಾದರು ಅಧ್ಯಕ್ಷ ಭಾಷಣ ಮಾಡಿದರು. ಪಾಕಿಸ್ತಾನದ ಖಾರಿ ತಲಾತ್ ನಕ್ಸಬಂದೇ ಕಾರ್ಯಕ್ರಮಕ್ಕೆ ಶುಭಕೋರಿದರು. ಕೆಸಿಎಫ್ ದುಬೈ ಅಜ್ಮನ್ ಝೊನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ತಿಂಗಲಾಡಿ ಶುಭ ಹಾರೈಸಿದರರು.ಕೆಸಿಎಫ್ ಕುವೈತ್ ಇಲಲ್ ಹಬೀಬ್ ಮಿಲಾದ್ ಸಮಾವೇಶದ ಅಧ್ಯಕ್ಷರಾದ ಜನಾಬ್ ಅಬ್ಬಾಸ್ ಬಳಂಜೆ ಆಶಂಷ ಭಾಷಣ ಮಾಡಿದರು. ನಂತರ ಬುರ್ದಾ ನಾತ್ ಮೂಲಕ ಅಚ್ಚರಿಯ ಅಧ್ಯಾಯ ಬರೆದ ಸಹಸ್ರಾರು ಕನ್ನಡಿಗರ ಮನದಾಳದಲ್ಲಿ ಸ್ಥಾನ ಗಳಿಸಿದ ಪ್ರಖ್ಯಾತ ಗಾಯಕ ಕೋಗಿಲೆ ಕಂಠದ ಫಿದಾಯೇ ಮದೀನ ಅಹಮ್ಮದ್ ನಬೀಲ್ ಬರಕಾತಿ ಬೆಂಗಳೂರು ನೆರೆದ ಸಭಿಕರ ಕಿವಿ ಗಳಿಗೆ ಮಂದಮಾರುತದಂತೆ ಅಪ್ಪಲಿಸುವ ಸಿರಿ ಹಾಡಿನೊಂದಿಗೆ ಅಚ್ಚರಿಯ ಅಧ್ಯಾಯ ಬರೆದು ಸಹಸ್ರಾರು ಜನರ ಮನ ರಂಜಿಸಿದರು. ಬಹುಮಾನ್ಯ ಶಾಫಿ ಸಅದಿ ಉಸ್ತಾದರನ್ನು ಮತ್ತು ಜನಾಬ್ ಹಬೀಬ್ ಕೋಯ ಹಾಗೂ ಫೀದಾಯೇ ಮದೀನ ಅಹಮದ್ ನಬೀಲ್ ಬರಕಾತಿ ಅವರನ್ನು ಈ ಸಂಧರ್ಭದಲ್ಲಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ಕೆಸಿಎಫ್ ಅಂತರರಾಷ್ಟ್ರೀಯ ಕೌನ್ಸಿಲ್ ಖಜಾಂಜಿಯೂ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ವಿಭಾಗದ ಚೇಯರ್ಮ್ಯಾನ್ ಆದ ಜನಾಬ್ ಹಬೀಬ್ ಕೋಯ ಉರ್ದು ವಿನಲ್ಲಿ ಭಾಷಣ ಮಾಡಿ ಕೆಸಿಎಫ್ ಅಹ್ಲುಲ್ ಸುನ್ನತ್ ಜಮಾತಿನ ಅಡಿಸ್ಥಾನದಲ್ಲಿ ನಿಲ್ಲಲು ಹಾಗೂ ಅದರ ಪ್ರಕಾರ ನೆಡೆಯಲು ಕುವೈಟ್ ನಲ್ಲಿರುವ ಎಲ್ಲಾ ಸಂಘ ಸಂಸ್ಥೆ ಯವರು ಕೈಜೋಡಿಸಬೇಕೆಂದು ಹಿತ ವಚನ ನೀಡಿದರು. ನಂತರ ಐ ಸಿ ಎಫ್ ಕುವೈಟ್ ಕೇಂದ್ರ ನಾಯಕ ರಾದ ಬಹುಮಾನ್ಯ ಸೈಯದ್ ಅಲವಿ ಸಖಾಫಿ ತಂಙಳ್ ಮಂಗಾಫ್ ಹಾಗೂ ಐ ಸಿ ಎಫ್ ಕೇಂದ್ರ ಅಧ್ಯಕ್ಷರಾದ ಬಹುಮಾನ್ಯ ಹಕೀಂ ದಾರಿಮಿ ಉಸ್ತಾದ್ ರ ಸಮ್ಮುಖದಲ್ಲಿ 2017 ರ ಕೆಸಿಎಫ್ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಹಾಗೂ ಐಸಿ ಎಫ್ ಪ್ರಧಾನ ಕಾರ್ಯದರ್ಶಿ ಜನಾಬ್ ತನ್ವೀರ್ ಶಾಹೀಬ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಲ್ಲದೆ ಕೆಸಿಎಫ್ ನಾಯಕರುಗಳಾದ ಫಯಾಝ್ ತಂಙಳ್ ,ಬಹುಮಾನ್ಯ ಅಬ್ದುಲ್ ಹಮೀದ್ ಸಅದಿ,ಬಹುಮಾನ್ಯ ಜಬ್ಬಾರ್ ಮದನಿ, ಕೆಸಿಎಫ್ ರಾಷ್ಟ್ರೀಯ ಸಾಂತ್ವಾನ ವಿಭಾಗದ ಚೇಯರ್ಮ್ಯಾನ್ ಅಬ್ದುಲ್ ಲತೀಫ್ ಬಂಟ್ವಾಳ.ಮಹಬುಲ ಸೆಕ್ಟರ್ ಅಧ್ಯಕ್ಷರಾದ ಬಾವಕ ಕುಪ್ಪೆಪದವು ಹಾಗೂ ಐ ಸಿ ಎಫ್ ಕುವೈಟ್ ಇದರ ನಾಯಕರು ಅಲ್ಲದೆ ಅನೇಕ ಉಲಮಾ ಉಮರಾಗಳು ಭಾಗವಹಿಸಿದರು.ಕೆಸಿಎಫ್ ರಾಷ್ಟ್ರೀಯ ಆಡಳಿತ ವಿಭಾಗದ ಕನ್ವೀನರ್ ಜನಾಬ್ ಇಬ್ರಾಹಿಮ್ ವೇಣೂರ್ ಅವರನ್ನು ಕೆಸಿಎಫ್ ರಾಷ್ಟ್ರೀಯ ಸಮಿತಿ ಹಾಗೂ ಇಲಲ್ ಹಬೀಬ್ ಸ್ವಾಗತ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.ಕೆಸಿಎಫ್ ಕುವೈತ್ ಕಾರ್ಯಕರ್ತರಿಗಾಗಿ ಹಮ್ಮಿಕೊಂಡ "ವರದಕ್ಷಿಣೆಯ ಪಿಡುಗು" ಪ್ರಭಂದ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವವಿಸಲಾಯಿತು.
ಶಾಫಿ ಸಅದಿ ಉಸ್ತಾದರ ಭಕ್ತಿ ಪೂರ್ವ ದುವಾ ಕುವೈಟ್ ನ ಇತಿಹಾಸದಲ್ಲಿ ದೊಡ್ಡ ಆಧ್ಯಾತ್ಮಿಕ ಸಮ್ಮೇಳನಕ್ಕೇ ಸಾಕ್ಷಿಯಾಯಿತು. ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕೂಬ್ ಕಾರ್ಕಳ ಸ್ವಾಗತಿಸಿದರು.ಮುಸ್ತಫ ಉಳ್ಳಾಲ ಕೊನೆಯದಾಗಿ ಧನ್ಯವಾದ ಗೈದರು. ಬಹುಮಾನ್ಯ ಹುಸೈನ್ ಎರ್ಮಾಡ್ ಉಸ್ತಾದ್
ಕಾರ್ಯಕ್ರಮವನ್ನು ನಿರೂಪಿಸಿದರು.
✍ ಮುಸ್ತಫ ಉಳ್ಳಾಲ.
Comments
Post a Comment