MFC ಕ್ಲಬ್ ನಿಂದ ಉಳ್ಳಾಲ ಮುಕ್ಕಚ್ಚೇರಿ ಜುಮಾ ಮಸೀದಿಗೆ ಮಯ್ಯತ್ ಸ್ಥಾನ ಮಾಡಿಸುವ ಟೇಬಲ್ ಹಾಗೂ ಕ್ರೇಶರ್ ಮಷಿನ್ ನೀಡಲಾಯಿತು
MFC ಕ್ಲಬ್ ನಿಂದ ಉಳ್ಳಾಲ ಮುಕ್ಕಚ್ಚೇರಿ ಜುಮಾ ಮಸೀದಿಗೆ ಮಯ್ಯತ್ ಸ್ಥಾನ ಮಾಡಿಸುವ ಟೇಬಲ್ ಹಾಗೂ ಕ್ರೇಶರ್ ಮಷಿನ್ ನೀಡಲಾಯಿತು
ಉಳ್ಳಾಲ ಮುಕ್ಕಚ್ಚೇರಿಯ ಸೋಶಿಯಲ್ ಕ್ಲಬ್ MFC ವತಿಯಿಂದ ದಿನಾಂಕ 25-07-2020 ಶನಿವಾರದಂದು ಮುಕ್ಕಚ್ಚೇರಿ ಜುಮಾ ಮಸೀದಿಯ ಅಧ್ಯಕ್ಷರ ಸಮ್ಮುಖದಲ್ಲಿ ಮಸೀದಿಗೆ ಆವಶ್ಯಕತೆ ಇದ್ದ ಮಯ್ಯತ್ ಸ್ಥಾನ ಮಾಡಿಸುವ ಟೇಬಲ್ ಹಾಗೂ ಕ್ರೆಶರ್ ಮಷಿನ್ ನೀಡಲಾಯಿತು. ಮಸೀದಿಯ ಉಸ್ತಾದರಿಂದ ಈ ಪುಣ್ಯ ಕಾರ್ಯಕ್ಕೆ ಸಹಕರಿಸಿದ ಎಲ್ಲರಿಗೂ ಪ್ರತ್ಯೇಕ ದುವಾ ನೆರವೇರಿಸಲಾಯಿತು.
ಅಲ್ಲಾಹು ಎಲ್ಲವನ್ನೂ ಸ್ವೀಕರಿಸಲಿ. ತಕ್ಕದಾದ ಪ್ರತಿಫಲ ನೀಡಲಿ. ಆಮೀನ್ ಯಾ ಅಲ್ಲಾಹ್.
ಈ ಸಮಯದಲ್ಲಿ ಮಸೀದಿಯ ಅಧ್ಯಕ್ಷ ಕಾದರ್ ಹಾಜಿ ಜಮಾಲಿಯಾ, MFC ಕ್ಲಬ್ ನ ಅಧ್ಯಕ್ಷರಾದ ರಝಾಕ್ ಹಾಜಿ, ಮಸೀದಿಯ ಸಮಿತಿಯ ಸದಸ್ಯರು ಮತ್ತು MFC ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.

Comments
Post a Comment