ಮಸ್ಜಿದುಲ್ ಅಖ್ಸಾ: ಅಂತರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಬೇಕು; ಖಮರುಲ್ ಉಲಮಾ ಕಾಂತಪುರಂ
*ಕಲ್ಲಿಕೋಟೆ.* ಮಸ್ಜಿದುಲ್ ಅಖ್ಸಾ ಮತ್ತು ಮುಸ್ಲಿಮರ ವಿರುದ್ಧ ನಿಲುವಿನಿಂದ ಇಸ್ರಾಯಿಲ್ ಕೂಡಲೇ ಹಿಂಜರಿಯಬೇಕೆಂದು ಅಖಿಲ ಭಾರತ ಸುನ್ನೀ ಜಂಇಯ್ಯತುಲ್ ಉಲಮಾ ಮಹಾಪ್ರಧಾನ ಕಾರ್ಯದರ್ಶಿ ಖಮರುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಒತ್ತಾಯಿಸಿದ್ದಾರೆ.
ಮಕ್ಕ,ಮದೀನ,ಹರಂ ಶರೀಫ್ ಬಳಿಕ ಮುಸ್ಲಿಂ ಜಗತ್ತು ಅತ್ಯಂತ ಪವಿತ್ರವಾಗಿ ಕಾಣುವ ಮಸೀದಿಯಾದ ಮಸ್ಜಿದುಲ್ ಅಖ್ಸಾಕೆ ಕಳೆದ ಶುಕ್ರವಾರ ಪ್ರವೇಶ ನಿರ್ಬಂಧಿಸಿರುವ ಇಸ್ರಾಯಿಲ್ ಕ್ರಮ ಖಂಡನೀಯವಾಗಿದೆ.
ಮಸ್ಜಿದುಲ್ ಅಖ್ಸಾದಲ್ಲಿ ಪೂರ್ವ ಸ್ಥಿತಿ ಮುಂದುವರಿಯಲು ಅಂತರಾಷ್ಟ್ರೀಯ ಸಮುದಾಯ ತುರ್ತಾಗಿ ಮಧ್ಯ ಪ್ರವೇಶ ಮಾಡಬೇಕು.
ಪ್ಯಾಲೆಸ್ತೀನ್ ನ ಮುಸ್ಲಿಮರನ್ನು ಅಲ್ ಅಖ್ಸಾ ಪ್ರವೇಶದಿಂದ ತಡೆಯುವ ಕ್ರಮ ಆತಂಕಕಾರಿಯಾಗಿದೆ.
ಹೊಸ ರೀತಿಯ ನಿಯಂತ್ರಣಗಳನ್ನು ಹೇರಿ ಇಸ್ರಾಯಿಲ್ ಸೇನೆ ನಿರಂತರ ಮುಸ್ಲಿಮರನ್ನು ಕೆಣಕುವ ಕೆಲಸ ಮಾಡುತ್ತಿದೆ.
50 ವರ್ಷಕ್ಕಿಂತ ಕೆಳಗಿನ ವಯೋಮಾನದವರನ್ನು ಮಸೀದಿ ಪ್ರವೇಶದಿಂದ ತಡೆಯುವ ಕ್ರಮ ಇನ್ನಷ್ಟು ಸಂಘರ್ಷಗಳಿಗೆ ಕಾರಣವಾಗಲಿದೆ.
ಹರಂ ಶರೀಫ್ ನ ಪಾವಿತ್ರ್ಯತೆ ಕಾಪಾಡುವುದು ಜಾಗತಿಕ ಮುಸ್ಲಿಂ ಸಮುದಾಯದ ಕರ್ತವ್ಯವಾಗಿದೆ.
ಇಸ್ರಾಯಿಲ್ ನ ಅನ್ಯಾಯದ ಪರಮಾವಧಿ ವಿರುದ್ಧ ವಿಶ್ವ ರಾಷ್ಟ್ರಗಳನ್ನು ಮಧ್ಯ ಪ್ರವೇಶಿಸುವಂತೆ ಮಾಡಲು ಜಗತ್ತಿನ ಮುಸ್ಲಿಂ ರಾಷ್ಟ್ರಗಳು ಮುಂದಾಗಬೇಕೆಂದು ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಆಗ್ರಹಿಸಿದ್ದಾರೆ.
Comments
Post a Comment