ಎಸ್ ವೈ ಎಸ್ ಫರೀದ್ ನಗರ ಬ್ರಾಂಚ್ ವತಿಯಿಂದ ಅಲ್ ಉಸ್ರತುತ್ವಯ್ಯಿಬಃ ಮಾಹಿತಿ ಕಾರ್ಯಾಗಾರ ಬ್ರಾಂಚ್ ಅಧ್ಯಕ್ಷರಾದ ಶಾಹುಲ್ ಹಮೀದ್ ಫರೀದ್ ನಗರ ರವರ ಅಧ್ಯಕ್ಷತೆಯಲ್ಲಿ ಫರೀದ್ ನಗರದ ಎಸ್ ವೈ ಎಸ್, ಎಸ್ಸೆಸ್ಸೆಫ್ ಕಛೇರಿಯಲ್ಲಿ ನಡೆಯಿತು.
ಎಸ್ ವೈ ಎಸ್ ಹರೇಕಳ ಸೆಂಟರ್ ದಅವಾ & ಎಜ್ಯುಕೇಶನಲ್ ಕಾರ್ಯದರ್ಶಿ ಹಾಜಿ ಅಶ್ರಫ್ ಮುಸ್ಲಿಯಾರ್ ಅಲ್ ಉಸ್ರತುತ್ವಯ್ಯಿಬಃ ಪ್ರತೀ ಮನೆಯಲ್ಲಿ ನಡೆಸುವುದರ ಬಗ್ಗೆ ತರಗತಿ ನಡೆಸಿದರು. ಸಭೆಯಲ್ಲಿ ಸೆಂಟರ್ ಸಮಿತಿ ನೀಡಿದ ಅಲ್ ಉಸ್ರತುತ್ವಯ್ಯಿಬಃ ಇದರ ಮಾಹಿತಿ ಪ್ರತಿಯನ್ನು ಪ್ರತಿಯೊಬ್ಬರಿಗೂ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್, ಎಸ್ಸೆಸ್ಸೆಫ್ ಫರೀದ್ ನಗರದ ನಾಯಕರು, ಸದಸ್ಯರು ಭಾಗವಹಿಸಿದರು. ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಫರೀದ್ ನಗರ ಸ್ವಾಗತಿಸಿದರು.




Comments
Post a Comment